'ಅಪ್ಪು ಸರ್ ಕ್ಷಮೆ ಇರಲಿ' ಎಂದ ರಿಷಬ್​ ಶೆಟ್ಟಿ; ದೂರದೂರಿನಿಂದಲೇ ಹೀಗೆನ್ನಲು ಕಾರಣ..

Puneeth
Published on

ಬೆಂಗಳೂರು: 'ಕಾಂತಾರ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ದೇಶಾದ್ಯಂತ ಪ್ರವಾಸ ಹಾಗೂ ಪ್ರಚಾರಲ್ಲಿರುವ ನಟ-ನಿರ್ದೇಶಕ ರಿಷಬ್​ ಶೆಟ್ಟಿ, ಇದೀಗ ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಬಹರೇನ್​ನಲ್ಲಿನ ಸಮಾರಂಭದಲ್ಲಿ ಭಾಗಿಯಾಗಿರುವ ರಿಷಬ್​ ಶೆಟ್ಟಿ, ಅಲ್ಲಿಂದಲೇ ಅಪ್ಪು ಅವರಲ್ಲಿ ಕ್ಷಮೆ ಕೋರಿದ್ದಕ್ಕೆ ಕಾರಣ ಬೇರೇನೂ ಅಲ್ಲ, 'ಪುನೀತ ಪರ್ವ'. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿನಿಮಾ ಮಾತ್ರವಲ್ಲದೆ ನಾನಾ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಅದ್ಧೂರಿಯ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ್ದಕ್ಕೆ ರಿಷಬ್ ಈ ಕ್ಷಮೆ ಕೋರಿದ್ದಾರೆ.

'ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬಹರೇನ್​ನಲ್ಲಿರುವ ಕಾರಣ ಇಂದಿನ 'ಪುನೀತ ಪರ್ವ'ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ, ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆಯಿರಲಿ, ಮೊದಲ ದಿನವೇ ಗಂಧದಗುಡಿಯಲ್ಲಿ ಭೇಟಿಯಾಗೋಣ' ಎನ್ನುತ್ತ ಕಾರ್ಯಕ್ರಮದಲ್ಲಿ ಹಾಜರಿರಲು ಸಾಧ್ಯವಾಗದ್ದಕ್ಕೆ ರಿಷಬ್ ಕ್ಷಮೆ ಯಾಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net