

ಮೇಷ: ಧನ ನಷ್ಟವಾಗಿ ವೇದನೆ. ಅಮೂಲ್ಯ ವಸ್ತುಗಳ ಕಳವು ಆಗಬಹುದು. ಮಾತಿನ ಚಕಮಕಿ ನಡೆಯಲಿದೆ. ದೇವರ ಮೊರೆ ಹೋಗಿ. ಶುಭಸಂಖ್ಯೆ: 9
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಹುಷಾರು. ಶುಭಸಂಖ್ಯೆ: 1
ಮಿಥುನ: ಧನಲಾಭವಾಗಲಿದೆ. ವಾಹನ ಖರೀದಿ ಯೋಗವಿದೆ, ಹಿರಿಯರಿಂದ ಉಪದೇಶ. ಮಹಿಳೆಯರಿಗೆ ವರ್ಗಾವಣೆ ಸಾಧ್ಯತೆ. ಶುಭ ಸಂಖ್ಯೆ 3
ಕಟಕ: ಗಣಕ ಯಂತ್ರದಿಂದ ಲಾಭ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು. ಧನ ನಷ್ಟ ನಿಯಂತ್ರಿಸಿ ಉಳಿತಾಯದತ್ತ ಗಮನ. ಶುಭಸಂಖ್ಯೆ: 5
ಸಿಂಹ: ಮೇಲಧಿಕಾರಿಗಳಿಂದ ತೊಂದರೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿ ಮಾಡುವುದರಿಂದ ನಿರಾಳ ಭಾವ. ಶುಭಸಂಖ್ಯೆ: 8
ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಕಲಹ. ಸಹನೆ ಕಾಪಾಡಿಕೊಳ್ಳುವಿರಿ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 3
ತುಲಾ: ಮಾನಸಿಕ ವೇದನೆ. ಅಗ್ನಿಭಯ. ಅಶಾಂತಿಯ ವಾತಾವರಣ. ಹಿರಿಯ ಅಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಅಪಘಾತ ಸಾಧ್ಯತೆ. ಶುಭಸಂಖ್ಯೆ: 8
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು. ಮಾತಿನ ಮೂಲಕ ಕಾರ್ಯ ಸಾಧನೆ. ಆರಕ್ಷಕ ವೃತ್ತಿಯವರಿಗೆ ಕರ್ತವ್ಯದಲ್ಲಿ ಅಡಚಣೆ ಆಗಲಿದೆ. ಶುಭಸಂಖ್ಯೆ: 6
ಧನುಸ್ಸು: ಹೊಸ ಯೋಜನೆಗಳನ್ನು ಆರಂಬಿಸುವಿರಿ. ವ್ಯವಸಾಯದಲ್ಲಿ ಲಾಭ. ವ್ಯಾಪಾರದಲ್ಲಿ ಲಾಭ. ವಿದೇಶ ಪ್ರಯಾಣ ಸಾಧ್ಯತೆ ಇದೆ. ಶುಭಸಂಖ್ಯೆ: 9
ಮಕರ: ಗುರುಹಿರಿಯರ ದರ್ಶನ. ಬಂಧುಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ಮಾನ್ಯತೆ ಸಿಗಲಿದೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ ಬರುವುದು. ಶುಭಸಂಖ್ಯೆ: 1
ಕುಂಭ: ಅನಗತ್ಯ ಅಲೆದಾಟ ಮಾಡಬೇಕಾದ ಸ್ಥಿತಿ. ಧನ ನಷ್ಟ. ಮೀನು ಹಾಗೂ ಜಲ ಉತ್ಪನ್ನಗಳಿಂದ ನಿರೀಕ್ಷೆಗಿಂತ ಹೆಚ್ಚು ಲಾಭ. ಶುಭಸಂಖ್ಯೆ: 4
ಮೀನ: ಶರೀರದಲ್ಲಿ ತಳಮಳ. ವೈದ್ಯರ ಭೇಟಿಯಿಂದ ನಿರಾಳ. ಅತಿಯಾದ ನೋವು ಕಾಡಬಹುದು. ಶತ್ರುವಿನಿಂದ ತೊಂದರೆ ಇದೆ. ಶುಭಸಂಖ್ಯೆ: 9