

ಮೇಷ: ಒತ್ತಡಕ್ಕೆ ಒಳಗಾಗುವಿರಿ. ನಿಮ್ಮನ್ನೇ ಕಷ್ಟಕ್ಕೆ ಗುರಿಪಡಿಸುವಂತಹ ಯೋಜನೆಗಳನ್ನು ಖಂಡಿತ ಹಮ್ಮಿಕೊಳ್ಳದಿರಿ. ಶುಭಸಂಖ್ಯೆ: 1
ವೃಷಭ: ಎಂದಿನಿಂದಲೋ ಹೊರೆಯಾಗಿ ಕಾಡುತ್ತಿರುವ ದೊಡ್ಡ ಮಟ್ಟದ ಸಾಲಬಾಧೆಯಿಂದ ಇಂದು ಹೊರಕ್ಕೆ ಬರಲಿದ್ದೀರಿ. ಶುಭಸಂಖ್ಯೆ: 4
ಮಿಥುನ: ಸಂಗಾತಿಯೊಡನೆ ವಾಗ್ವಾದ ಮಾಡುವುದನ್ನು ಬಿಡಿ. ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಬಾಳಿಗೆ ಬೆಳಕು ಬರಲಿದೆ. ಶುಭಸಂಖ್ಯೆ: 7
ಕಟಕ: ಕಷ್ಟಗಳೇ ತುಂಬಿದ ದಾರಿಯಲ್ಲಿ ಸಾಗಿ ಆಯಾಸಗೊಂಡಿರುವ ಧನಲಾಭದ ಕುರಿತ ದಾರಿಯೊಂದು ತೆರೆಯಲಿದೆ. ಶುಭಸಂಖ್ಯೆ: 3
ಸಿಂಹ: ಸಾಧ್ಯವಾದಷ್ಟು ಮೃದುವಾಗಿ ಮಾತಾಡಿ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಜನರ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ: 5
ಕನ್ಯಾ: ಕ್ಷೀರೋದ್ಯಮಿಗಳು, ಹಣ್ಣು ವ್ಯಾಪಾರಿಗಳು, ಕಟ್ಟಡ ವಿನ್ಯಾಸಕರಿಗೆ ಹರ್ಷದಾಯಕವಾದ ಸಮಾಚಾರ ಕೇಳಿಬರಲಿದೆ. ಶುಭಸಂಖ್ಯೆ: 8
ತುಲಾ: ಧೈರ್ಯದ ನಡೆಗಳು ನಿಮ್ಮನ್ನು ಒಳಿತಿನ ಕಡೆಗೆ ಕರೆದೊಯ್ಯಲಿವೆ. ಏನೂ ಚಿಂತೆ ಮಾಡದೆಯೇ ನಿರಾಳರಾಗಿರಿ. ಶುಭಸಂಖ್ಯೆ: 6
ವೃಶ್ಚಿಕ: ಯಾವ ಬಗೆಯ ಪ್ರಯತ್ನಕ್ಕೂ ಮಣಿಯದ ಕಿರಿಕಿರಿಯ ವಿಷಯವೊಂದು ಇಂದು ನಿಮ್ಮ ಹತೋಟಿಗೆ ಸಿಗಲಿದೆ. ಶುಭಸಂಖ್ಯೆ: 2
ಧನುಸ್ಸು: ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಅನೇಕ ರೀತಿಯ ಗೊಂದಲಗಳು ಆಪ್ತರ ನೆರವಿನಿಂದ ಪರಿಹಾರವನ್ನು ಕಾಣಲಿವೆ. ಶುಭಸಂಖ್ಯೆ: 9
ಮಕರ: ಇನ್ನೂ ಉತ್ತಮ ಕೆಲಸ ಸಿಕ್ಕಿದರೆ ಈಗಿನ ಕೆಲಸವನ್ನು ಬಿಡುವ ಬಗ್ಗೆ ಯೋಚಿಸಿ. ಅಪಾಯ ಎಳೆದುಕೊಳ್ಳಲು ಹೋಗದಿರಿ. ಶುಭಸಂಖ್ಯೆ: 1
ಕುಂಭ: ಯಾರನ್ನೂ ಒಮ್ಮೆಲೇ ನಂಬಿಬಿಡದಿರಿ. ನಂಬಿಸಿ ಕೈಕೊಡುವವರು ಹತ್ತಿರಕ್ಕೇ ಬರಬಹುದು. ಜಾಗ್ರತೆ ಇರಲಿ. ಶುಭಸಂಖ್ಯೆ: 4
ಮೀನ: ಸದ್ಯಕ್ಕೆ ಮನೆ ಮಾರುವ ವಿಚಾರದಲ್ಲಿ ಆತುರದ ನಿರ್ಣಯವನ್ನು ಕೈಗೊಳ್ಳಬೇಡಿ. ಸ್ವಲ್ಪ ಕಾಲ ತಾಳ್ಮೆ ಇರಲಿ. ಶುಭಸಂಖ್ಯೆ: 7