ರಾಜ್ಯದ ಅನೇಕ ಜನರಲ್ಲಿ ಈಗಾಗಲೇ ಕರೊನಾ ಸದ್ದಿಲ್ಲದೇ ಬಂದು ಹೋಗಿದೆ!

Antibody
Published on

ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಮಣಿಸಲು ದೇಹದ ಇಮ್ಯುನಿಟಿ ಶಕ್ತಿಯೇ ಪ್ರಮುಖ ಸಾಧನ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದ ಕೆಲವರಿಗೆ ಕರೊನಾ ವೈರಸ್​ ಬಂದು ಹೋಗುವುದು ಗೊತ್ತಾಗುವುದಿಲ್ಲ ಎಂದು ಈ ಹಿಂದೆ ತಜ್ಞರು ಹೇಳಿದ ಮಾತಿಗೆ ನೂತನ ವರದಿಯೊಂದು ಪುಷ್ಟಿ ನೀಡಿದೆ.

ಈಗಾಗಲೇ ಕೆಲವರು ಆ್ಯಂಟಿಬಾಡಿ ಬೆಳೆಸಿಕೊಂಡು ಕರೊನಾ ವಿರುದ್ಧ ಸೆಣಸಿದ್ದಾರೆ ಎಂಬುದು ಥೈರೋಕೇರ್ ಲ್ಯಾಬೋರೇಟರಿ​ ಹೆಸರಿನ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಸಂಸ್ಥೆಯು ಆ್ಯಂಟಿಬಾಡಿ ಟೆಸ್ಟ್​ ನಡೆಸಿದ್ದು, ಇದರಲ್ಲಿ ರಾಜ್ಯಕ್ಕೆ ಗುಡ್​ನ್ಯೂಸ್​ ಸಿಕ್ಕಿದೆ. ದೇಶಾದ್ಯಂತ ಸುಮಾರು 600 ಏರಿಯಾಗಳಲ್ಲಿ 60 ಸಾವಿರ ಪರೀಕ್ಷೆಗಳನ್ನು ಥೈರೋಕೇರ್​ ಸಂಸ್ಥೆ ನಡೆಸಿದೆ.

ಅಧ್ಯಯನ ಪ್ರಕಾರ ದೇಶದಲ್ಲಿ ಈಗಾಗಲೇ 15% ಮಂದಿಗೆ ಕರೊನಾ ಬಂದು ಹೋಗಿದೆ. ಅಂದರೆ ದೇಶದ 18 ಕೋಟಿ ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಬೆಳೆದಿದೆ ಎನ್ನುತ್ತಿದೆ ಥೈರೋಕೇರ್ ಲ್ಯಾಬೋರೇಟರಿಯ ಅಂಕಿ-ಅಂಶಗಳು.

ಈಗಾಗಲೇ ಕರೊನಾ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಕರೊನಾ ಬಂದು ಹೋಗಿದೆ. ಇಲ್ಲಿ ನಡೆಸಿದ ಆ್ಯಂಟಿಬಾಡಿ ಟೆಸ್ಟ್​ನಲ್ಲಿ ಶೇ.44 ಮಂದಿಯಲ್ಲಿ ಕರೊನಾ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಬಳ್ಳಾರಿಯಲ್ಲೂ ಶೇ. 24 ಮಂದಿಗೆ ಕರೊನಾ ಈಗಾಗಲೇ ಬಂದು ಹೋಗಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಆ್ಯಂಟಿಬಾಡಿ ಬೆಳೆದಿದೆ ಎನ್ನುತ್ತಿದೆ ಈ ಅಧ್ಯಯನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net