ಈ ರಾಶಿಯವರಿಗಿಂದು ಅನಿರೀಕ್ಷಿತ ದ್ರವ್ಯ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸ್ತಿ ವಿಚಾರದಲ್ಲಿ ಸಹೋದರರಿಂದ ಅನುಕೂಲ. ಆಸ್ತಿ ಖರೀದಿ ಯೋಗ. ಸ್ತ್ರೀ ಸಹೋದ್ಯೋಗಿಗಳಿಂದ ಅದೃಷ್ಟ. ಬಾಕಿ ಹಣ ವಸೂಲಿ. ಶುಭಸಂಖ್ಯೆ: 5

ವೃಷಭ: ಮಾತಿನಲ್ಲಿ ಹಿಡಿತವಿರಲಿ. ಹೃದಯ ಸಂಬಂಧಿ ತೊಂದರೆ. ಶತ್ರುಗಳಿಂದ ತೊಂದರೆ. ಹೋಟೆಲ್ ವೃತ್ತಿಯವರಿಗೆ ಅಧಿಕ ಲಾಭ. ಶುಭಸಂಖ್ಯೆ: 7

ಮಿಥುನ: ಮನಃಕ್ಲೇಷ, ಅಧಿಕಾರಿಗಳಿಂದ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರ. ಸಣ್ಣ ಮಾತಿನಿಂದ ಜಗಳ. ದಿನಾಂತ್ಯದಲ್ಲಿ ಸುಖ. ಶುಭಸಂಖ್ಯೆ: 6

ಕಟಕ: ದಾಂಪತ್ಯಕಲಹ. ನಾನಾ ರೀತಿಯ ಕೆಲಸ. ಹಣಕಾಸು ಸಮಸ್ಯೆಗೆ ಸ್ನೇಹಿತನಿಂದ ಪರಿಹಾರ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಶುಭಸಂಖ್ಯೆ: 4

ಸಿಂಹ: ನ್ಯಾಯಾಲಯದ ಕಾರ್ಯಗಳಲ್ಲಿ ಪ್ರಗತಿ. ಬೇಕರಿ ವ್ಯವಹಾರದಲ್ಲಿ ಲಾಭ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 2

ಕನ್ಯಾ: ಸಹೋದ್ಯೋಗಿಗಳಿಂದ ಲಾಭ. ಬಂಧುಗಳಿಂದ ತೊಂದರೆ. ಮಹಿಳೆಯರಿಗೆ ವಸ್ತ್ರ ಖರೀದಿ ಯೋಗ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 9

ತುಲಾ: ಆತಂಕ. ಪ್ರವಾಸದಲ್ಲಿ ದುಃಖ. ಋಣ ತೀರಿಸಲು ತಯಾರಿ. ಪತ್ನಿಯೊಂದಿಗೆ ವಿರಸ. ಮಗನಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 3

ವೃಶ್ಚಿಕ: ಸಾಲ ಬಾಧೆ. ನಂಬಿದ ಜನರಿಂದ ಮೋಸ. ಪ್ರಭಾವಿ ವ್ಯಕ್ತಿಗಳಿಂದ ವಿರೋಧ. ದ್ರವ್ಯ ನಷ್ಟ. ಯತ್ನ ಕಾರ್ಯದಲ್ಲಿ ನಿರೀಕ್ಷಿತ ಜಯ. ಶುಭಸಂಖ್ಯೆ: 8

ಧನುಸ್ಸು: ಸಾಲ ಬಾಧೆಯಿಂದ ಖಿನ್ನತೆ. ಕಾರ್ಯಗಳಲ್ಲಿ ವಿಘ್ನ. ಸಗಟು ವ್ಯಾಪಾರಸ್ಥರಿಗೆ ಲಾಭ. ಉದ್ಯೋಗದಲ್ಲಿ ಉನ್ನತ ಪದವಿ ಸಾಧ್ಯತೆ. ಶುಭಸಂಖ್ಯೆ: 4

ಮಕರ: ಅನಿರೀಕ್ಷಿತ ದ್ರವ್ಯ ಲಾಭ. ಮಿತ್ರರ ಭೇಟಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 1

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು. ಕುಟುಂಬದಲ್ಲಿ ಶುಭ ಕಾರ್ಯ. ಅನವಶ್ಯಕ ತಿರುಗಾಟ. ಹಣಕಾಸು ವಿಚಾರದಲ್ಲಿ ದೃಢತೆ. ಶುಭಸಂಖ್ಯೆ: 7

ಮೀನ: ನವದಂಪತಿಗಳಿಗೆ ಇಂದು ಶುಭದಿನ. ಸಾರ್ವಜನಿಕವಾಗಿ ನಿಂದನೆ. ಇಲ್ಲ ಸಲ್ಲದ ಅಪವಾದ. ಮರಕೆಲಸಗಾರರಿಗೆ ಧನ ಲಾಭ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net