ಈ ರಾಶಿಯವರು ವಿವಾದವೊಂದರಲ್ಲಿ ಸಿಕ್ಕಿ ಒದ್ದಾಡುವ ಸಂಭವ ಇದೆ. ಆದರೂ ಪರಿಹಾರ ಇಲ್ಲಿದೆ..

Nitya-Bhavishya-vvani-1-2-1
Published on

ಮೇಷ: ನಿಮ್ಮ ಉದ್ಯಮದಲ್ಲಿ ಹೊಸ ರೀತಿನೀತಿಯನ್ನು

ಅನುಸರಿಸದೆ ಮುಂದುವರಿಯುವ

ಯೋಚನೆ ಬಿಟ್ಟರೆ ಕ್ಷೇಮ. ಶುಭಸಂಖ್ಯೆ: 9

ವೃಷಭ: ಬಂಧುಗಳೇ ಬಂದು ಕೆಲಸಗಳಿಗೆ

ಅಡ್ಡಿಪಡಿಸುವ ಸಾಧ್ಯತೆಗಳಿವೆ. ಸಿಟ್ಟಾಗದೆಯೇ

ಉಪಾಯದಿಂದ ವರ್ತಿಸಿ. ಶುಭಸಂಖ್ಯೆ: 7

ಮಿಥುನ: ರಾಸಾಯನಿಕ ಗೊಬ್ಬರ, ಇಲೆಕ್ಟ್ರಾನಿಕ್

ಉಪಕರಣಗಳು, ಮರಮಟ್ಟು ವ್ಯಾಪಾರಿಗಳಿಗೆ

ಅನುಕೂಲಕರ ದಿನ. ಶುಭಸಂಖ್ಯೆ: 5

ಕಟಕ: ಶುಭಪ್ರದಾಯಕ ಮಹಾಗಣಪತಿಯನ್ನು

ಧ್ಯಾನಿಸಿ. ಮನೋಭಿಲಾಷೆಗಳು

ಸಾಫಲ್ಯತೆಯನ್ನು ಹೊಂದಲಿವೆ. ಶುಭಸಂಖ್ಯೆ: 3

ಸಿಂಹ: ವಿವಾದವೊಂದರಲ್ಲಿ ಸಿಕ್ಕಿ ಒದ್ದಾಡುವ

ಸಂಭವ ಇದೆ. ಸಮಯಾವಧಾನದಿಂದ

ವರ್ತಿಸಿದರೆ ಪಾರಾಗಲಿದ್ದೀರಿ. ಶುಭಸಂಖ್ಯೆ: 1

ಕನ್ಯಾ: ಹಣ ಹಾಗೂ ಸಮಯವನ್ನು

ವ್ಯಯಿಸುವ ವ್ಯಸನಗಳಲ್ಲಿ ಸಿಲುಕಿದ್ದೀರಿ.

ಬದಲಾಗಲು ಮುಂದಾದರೆ ಒಳಿತಿದೆ. ಶುಭಸಂಖ್ಯೆ: 8

ತುಲಾ: ದೂರದ ಊರಿಗೆ ವರ್ಗವಾದರೂ

ಅಂಜಬೇಡಿ. ಪದೋನ್ನತಿಗೆ ಬೇಕಾದ

ಅವಕಾಶವೊಂದು ಸೃಷ್ಟಿಯಾಗಲಿದೆ. ಶುಭಸಂಖ್ಯೆ: 2

ವೃಶ್ಚಿಕ: ನಿಮ್ಮ ಆಪ್ತ ಮಿತ್ರರೇ ನಿಮ್ಮಿಂದ

ದೂರವಾಗಬಹುದು. ವ್ಯಥೆಪಡದೆ ಅವರನ್ನು

ಸಮಾಧಾನಿಸುವುದು ಉತ್ತಮ. ಶುಭಸಂಖ್ಯೆ: 6

ಧನುಸ್ಸು: ಹೇಳಿದ್ದನ್ನೇ ಹೇಳುವಂತಹ ನಿಮ್ಮ

ಸ್ವಭಾವವನ್ನು ಬಿಟ್ಟುಬಿಡಿ. ಇಲ್ಲವಾದರೆ

ಕಷ್ಟವಾದೀತು. ಸ್ವಲ್ಪ ಎಚ್ಚರಿಕೆ ಇರಲಿ. ಶುಭಸಂಖ್ಯೆ: 4

ಮಕರ: ಬೇಡದ ಹಳೆಯ ವಸ್ತುಗಳು, ತುಕ್ಕು

ಹಿಡಿದ ಕಬ್ಬಿಣ, ಕಾಗದ ಇತ್ಯಾದಿ

ವಸ್ತುಗಳನ್ನು ಹೊರಹಾಕಿ. ಕ್ಷೇಮವಿದೆ. ಶುಭಸಂಖ್ಯೆ: 9

ಕುಂಭ: ಹೊಸ ವಾಹನವನ್ನು ಖರೀದಿಸುವ

ಆಲೋಚನೆ ಇದ್ದರೆ ಈ ನಿರ್ಣಯವನ್ನು

ಕೆಲವು ಕಾಲ ಮುಂದೂಡಿಬಿಡಿ. ಶುಭಸಂಖ್ಯೆ: 5

ಮೀನ: ಸಂಗಾತಿ ಹಾಗೂ ಮಕ್ಕಳ ಜತೆ

ಸಂತೋಷದಿಂದ ಕಾಲ ಕಳೆಯುವಿರಿ.

ಇದರಿಂದ ನಿಮ್ಮ ಚೈತನ್ಯಕ್ಕೆ ಬಲ ಸಿಗಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net