More

    ಅಂತಿಮ ಹಂತದಲ್ಲಿದೆ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಎನ್​ಸಿಎಸ್ಎಸ್​

    ನವದೆಹಲಿ: ರಾಷ್ಟ್ರೀಯ ಸೈಬರ್ ಸುರಕ್ಷತೆಗೆ ಧಕ್ಕೆ ತರುವ ವಿದ್ಯಮಾನಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಅದಕ್ಕೆ ತಡೆಯೊಡ್ಡುವ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸ್ಟ್ರಾಟಜಿ (ಎನ್​ಸಿಎಸ್​ಎಸ್​) ಶೀಘ್ರವೇ ಜಾರಿಯಾಗಲಿದೆ ಎಂಬ ಸುಳಿವನ್ನು ನ್ಯಾಷನಲ್​ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್​ ಲೆಫ್ಟಿನೆಂಟ್​ ಜನರಲ್​ ಡಾ. ರಾಜೇಶ್ ಪಂತ್ ಮಂಗಳವಾರ ನೀಡಿದ್ದಾರೆ.

    ದೇಶವು ಹಲವು ರೀತಿಯಲ್ಲಿ ಸೈಬರ್​ ಸ್ಪೇಸ್​ ಮೇಲಿನ ಅವಲಂಬನೆ ಹೆಚ್ಚಿಸಿಕೊಳ್ಳುತ್ತಿರುವ ಕಾರಣ ಹೊಸ ಸೈಬರ್ ಸೆಕ್ಯೂರಿಟಿ ಸ್ಟ್ರಾಟಜಿಯನ್ನು ದೇಶಕ್ಕೆ ಶೀಘ್ರವೇ ಅರ್ಪಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆ ಭಾಷಣದ ಸಂದರ್ಭದಲ್ಲಿ ಹೇಳಿದ್ದರು.

    ಇದನ್ನೂ ಓದಿ: ಹಾಥರಸ್ ಪ್ರಕರಣ: ಪಿಎಫ್​ಐ ನಂಟಿನ ಕೇರಳದ ಪತ್ರಕರ್ತ ಮತ್ತು ಮೂವರ ನ್ಯಾಯಾಂಗ ಬಂಧನ ವಿಸ್ತರಣೆ

    ಪಂತ್ ಅವರು ಹೇಳಿರುವ ಪ್ರಕಾರ, ದೇಶಕ್ಕಾಗಿ ವೈಬ್ರಂಟ್ ಆಗಿರುವ ಸೈಬರ್ ಸ್ಪೇಸ್​ ಒದಗಿಸಲು ಅದರ ಸುರಕ್ಷತೆ, ಸುಭದ್ರತೆ, ವಿಶ್ವಾಸಾರ್ಹತೆ, ನಂಬಿಕೆಯನ್ನು ಉಳಿಸುವುದಕ್ಕಾಗಿ ಎನ್​ಸಿಎಸ್​ಎಸ್ ರೂಪಿಸಲಾಗುತ್ತಿದೆ. ಇದು ಅಂತಿಮಗೊಂಡಿದ್ದು, ಉನ್ನತಾಧಿಕಾರಿಗಳ ಅಂಕಿತಕ್ಕಾಗಿ ಕಾಯುತ್ತಿವೆ.
    ಇದು ಜಾರಿಗೊಳ್ಳುತ್ತಲೇ ಸರ್ಕಾರವು ಇದರ ಅಧೀನದಲ್ಲಿ ಸ್ವದೇಶಿ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಲಿದೆ. ಸಂಸತ್ತು, ಶಾಸನಾತ್ಮಕ ಚೌಕಟ್ಟು, ಸೈಬರ್​ ಸೆಕ್ಯೂರಿಟಿ ಇವೆಲ್ಲವೂ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳ್ಳಲಿವೆ ಎಂದು ಪಂತ್​ ಹೇಳಿದ್ದಾರೆ. (ಏಜೆನ್ಸೀಸ್)

    1.25 ಲಕ್ಷ ಕೋಟಿ ರೂಪಾಯಿ – ಸೈಬರ್ ಕ್ರೈಂನಿಂದಾಗಿರುವ ನಷ್ಟ: ಇನ್ನೂ ಹೆಚ್ಚಾಗಲಿದೆಯಂತೆ ಅಪರಾಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts