

ಮೇಷ: ಆಸೆ ಮತ್ತು ಭಾವನೆಗಳು ಈಡೇರುವುದರಿಂದ ಮನಸ್ಸಿಗೆ ನೆಮ್ಮದಿ. ಬಂಧುಗಳಿಂದ ನಷ್ಟವಾದೀತು. ಪುಣ್ಯಕರ್ಮ ಫಲ ಪ್ರಾಪ್ತಿ. ಶುಭಸಂಖ್ಯೆ:5
ವೃಷಭ: ಹತ್ತಿರದ ಪ್ರಯಾಣವನ್ನು ಅನಿವಾರ್ಯವಾಗಿ ಮಾಡಬೇಕಾಗುವುದು. ರಾಜಕೀಯ ವ್ಯಕ್ತಿಗಳ ಭೇಟಿ ಆಗಲಿದೆ. ಆಸ್ತಿಯಿಂದ ಲಾಭ. ಶುಭಸಂಖ್ಯೆ:1
ಮಿಥುನ: ಹಣ ಮತ್ತು ಉದ್ಯೋಗ ನಷ್ಟವಾಗಿ ಮಾನಸಿಕ ಸಂಕಟ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲಕರ ದಿನ. ಶುಭಸಂಖ್ಯೆ: 9
ಕಟಕ: ಸ್ವಂತ ಉದ್ಯೋಗದವರಿಗೆ ಉತ್ತಮ ದಿನ. ಧಾರ್ವಿುಕ ಚಿಂತನೆ ಮಾಡುವಿರಿ. ಸರ್ಕಾರಿ ಅಧಿಕಾರಿಗಳಿಂದ ನಷ್ಟ. ಕಾರ್ಯ ಜಯ. ಶುಭಸಂಖ್ಯೆ: 3
ಸಿಂಹ: ನಷ್ಟದ ಪ್ರಮಾಣ ನಿರೀಕ್ಷೆಗಿಂತ ಅಧಿಕವಾಗಲಿದೆ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಮತ್ತು ಪ್ರಶಂಸೆ. ಕೃಷಿಕರಿಗೆ ಅನುಕೂಲ. ಶುಭಸಂಖ್ಯೆ: 6
ಕನ್ಯಾ: ಆಸ್ತಿ ನಷ್ಟವಾಗುವ ಅಪಾಯವಿದೆ. ಉನ್ನತ ಅಧಿಕಾರಿಗಳಿಗೆ ಅಧಿಕ ಪ್ರಮಾಣದ ಖರ್ಚು. ದಾಂಪತ್ಯ ಸಮಸ್ಯೆ ಹೆಚ್ಚಬಹುದು. ಶುಭಸಂಖ್ಯೆ: 7
ತುಲಾ: ಉದ್ಯೋಗ ಲಾಭ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಶತ್ರು ದಮನ. ಪಿಠೋಪಕರಣಗಳ ವ್ಯಾಪಾರದಲ್ಲಿ ಲಾಭ ಬರಲಿದೆ. ಶುಭಸಂಖ್ಯೆ:3
ವೃಶ್ಚಿಕ: ಪ್ರಯಾಣ ಮಾಡುವ ಅನಿವಾರ್ಯತೆ. ದೂರ ಪ್ರದೇಶಕ್ಕೆ ತೆರಳುವಿರಿ. ರಾಜಕೀಯದವರ ಸಂಪರ್ಕ ದಲ್ಲಿ ಇರುವವರಿಗೆ ಅನುಕೂಲ. ಶುಭಸಂಖ್ಯೆ: 4
ಧನುಸ್ಸು: ಹಣ ದೊರಕುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ. ಮನೆಯ ವಾತಾವರಣ ಕಲುಷಿತ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 6
ಮಕರ: ಶುಭಕಾರ್ಯಕ್ಕೆ ವಿಘ್ನ ಎದುರಾಗಿ ಬೇಸರ ವಾಗುವುದು. ಸ್ನೇಹಿತರು ದೂರವಾಗುವ ಸಾಧ್ಯತೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಕುಂಭ: ಅವಿವಾಹಿತರಿಗೆ ವಿವಾಹ ನಿಶ್ಚಯ. ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆ. ಶುಭಸಂಖ್ಯೆ: 3
ಮೀನ: ಗರ್ಭಿಣಿಯರು ವಿಶೇಷ ಎಚ್ಚರದಿಂದ ಇರಬೇಕಾದ ದಿನ. ನಟರಿಗೆ, ಗಾಯಕರಿಗೆ ಉತ್ತಮ ದಿನ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಶುಭಸಂಖ್ಯೆ: 1