ಈ ರಾಶಿಯವರಿಗಿಂದು ಸಾಲ ಕೊಟ್ಟ ಹಣ ಬರುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶ್ರಮಕ್ಕೆ ತಕ್ಕ ಪ್ರತಿಫಲ. ವಿವಾಹ ಕಾರ್ಯಸಾಧನೆಗಾಗಿ ತಿರುಗಾಟ. ಮುದ್ರಣ ವ್ಯವಹಾರದಲ್ಲಿ ನಷ್ಟ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 5

ವೃಷಭ: ಸಾರ್ವಜನಿಕ ಜೀವನದಲ್ಲಿ ಪ್ರಶಂಸೆ. ಕೋರ್ಟು ವ್ಯವಹಾರದಲ್ಲಿ ವಿಳಂಬ. ಮಿತ್ರರಿಂದ ವಂಚನೆ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ:9

ಮಿಥುನ: ಖಾಸಗಿ ಉದ್ಯೋಗಿಗಳು ತಾಳ್ಮೆಯಿಂದ ಇರಿ. ಸ್ವಗ್ರಾಮದಿಂದ ಶುಭ ವಾರ್ತೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಶುಭಸಂಖ್ಯೆ:2

ಕಟಕ: ಉದ್ದಿಮೆದಾರರಿಗೆ ವಿದೇಶ ಪ್ರಯಾಣ. ಅಪರಿಚಿತ ರಿಂದ ಸಹಾಯ. ವಿದ್ಯಾರ್ಥಿಗಳಲ್ಲಿ ಗೊಂದಲ. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ: 4

ಸಿಂಹ: ವಿವಿಧ ಮೂಲಗಳಿಂದ ಆದಾಯಕ್ಕೆ ತಡೆ. ಹಿತಶತ್ರುಗಳಿಂದ ದೂರವಿರಿ. ಉದಾಸೀನದಿಂದ ನಷ್ಟ. ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 1

ಕನ್ಯಾ: ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಿ. ಕುಟುಂಬ ಸೌಖ್ಯವಿದೆ. ಕೃಷಿಯಲ್ಲಿ ಲಾಭ ಬರಲಿದೆ. ದೀನರಿಗೆ ಸಹಾಯ ಮಾಡುವಿರಿ. ಶುಭಸಂಖ್ಯೆ: 2

ತುಲಾ: ವಿಶ್ರಾಂತಿ ರಹಿತ ಅಧಿಕ ಕೆಲಸ. ವಸ್ತ್ರ ವ್ಯಾಪಾರಿಗಳಿಗೆ ಲಾಭವಿದೆ. ಬಡರೋಗಿಗಳಿಗೆ ಸಹಾಯ ಮಾಡಿ. ಕುಲದೇವತೆಯ ದರ್ಶನ. ಶುಭಸಂಖ್ಯೆ: 7

ವೃಶ್ಚಿಕ: ಹೃದಯ ಸಂಬಂಧಿ ಸಮಸ್ಯೆ ಕಾಡಬಹುದು. ಶುಭ ಕಾರ್ಯದ ಸಂಭ್ರಮ. ಗೆಳೆಯರೊಂದಿಗೆ ಮುಕ್ತವಾಗಿಸಮಸ್ಯೆ ಹಂಚಿಕೊಳ್ಳಿ. ಶುಭಸಂಖ್ಯೆ: 9

ಧನುಸ್ಸು: ಯಂತ್ರೋಪಕರಣಗಳಿಂದ ಲಾಭವಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವಿರಿ. ಕೃಷಿ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 6

ಮಕರ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸಾಲ ಕೊಟ್ಟ ಹಣ ಬರುವುದು. ಸುಖ ಭೋಜನ. ಷೇರು ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ: 3

ಕುಂಭ: ಮಹಿಳಾ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಆದಾಯಕ್ಕಿಂತ ಖರ್ಚು ಜಾಸ್ತಿ. ಸ್ತ್ರೀಯರಿಂದ ಸಹಾಯ. ಚಂಚಲತೆ. ಶುಭಸಂಖ್ಯೆ:5

ಮೀನ: ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿಯಿಂದ ಬೇಸರ. ಕೃಷಿಯಲ್ಲಿ ಲಾಭ. ವಿದೇಶ ಪ್ರಯಾಣ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net