ಈ ರಾಶಿಯವರಿಗಿಂದು ದಿನಾಂತ್ಯದಲ್ಲಿ ಶುಭಕರ ವಾರ್ತೆಯೊಂದು ಬರಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸುಲಭವಾಗಿ ಬಗೆಹರಿಯುವ ವಿಷಯ ಗೋಜಲು ಮಾಡಿಕೊಳ್ಳಬೇಡಿ. ಸಂಧಾನದಿಂದ ಸಮಸ್ಯೆಗಳು ಬಗೆಹರಿಯುತ್ತವೆ. ಶುಭಸಂಖ್ಯೆ: 3

ವೃಷಭ: ಆತ್ಮೀಯರೊಂದಿಗೆ ಸಮಾಲೋಚನೆ ನಡೆಸಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೈಗುಳ ಎದುರಿಸಬೇಕಾದೀತು. ಶುಭಸಂಖ್ಯೆ: 9

ಮಿಥುನ: ತಾಳ್ಮೆಯಿಂದ ವರ್ತಿಸಿ. ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8

ಕಟಕ: ನಿಮ್ಮ ಆಲಸ್ಯತನದಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದ ಪರಿಸ್ಥಿತಿ. ಬಹುದಿನಗಳಿಂದ ನಿರೀಕ್ಷಿಸಿದ ಗೃಹನಿರ್ವಣಕ್ಕೆ ಚಿಂತನೆ. ಶುಭಸಂಖ್ಯೆ: 1

ಸಿಂಹ: ಹಿತಶತ್ರುಗಳಿಂದ ಅಸಮಾಧಾನ. ತಂದೆ-ತಾಯಿಯ ಸಲಹೆಯನ್ನು ಸ್ವೀಕರಿಸಿ. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 3

ಕನ್ಯಾ: ಹಲವು ದಿನಗಳಿಂದ ಇದ್ದ ವಿವಾದ ಇತ್ಯರ್ಥವಾಗಲಿದೆ. ಕುಟುಂಬದವರ ಭೆೇಟಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಶುಭಸಂಖ್ಯೆ: 6

ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6

ವೃಶ್ಚಿಕ: ಬಂಧುಗಳ ಆಗಮನ. ಕುಟುಂಬದೊಂದಿಗೆ ಸಂತಸದ ಕ್ಷಣಗಳು. ಪತ್ನಿಯೊಂದಿಗೆ ಘರ್ಷಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:5

ಧನುಸ್ಸು: ಸಿಕ್ಕಿದ ಜಯದಲ್ಲಿ ಮರೆಯಬೇಡಿ. ಶತ್ರುಗಳನ್ನು ಹಗುರವಾಗಿ ಭಾವಿಸಬೇಡಿ. ಕುಟುಂಬದ ವಿವಾದ ಸುಖಾಂತ್ಯವಾಗಿ ನೆಮ್ಮದಿ. ಶುಭಸಂಖ್ಯೆ:4

ಮಕರ: ನೂತನ ಯೋಜನೆಗಳಿಗೆ ಕುಟುಂಬದ ಬೆಂಬಲ. ಕುಟುಂಬದೊಂದಿಗೆ ಸಂತಸದಿಂದ ಇರಲು ಪ್ರಯತ್ನಿಸಿ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 3

ಕುಂಭ: ಕಾರ್ಯಸಿದ್ದಿಯಲ್ಲಿ ಪ್ರತಿರೋಧಗಳು ಬರಬಹುದು. ಗಣಪತಿಯನ್ನು ಪೂಜಿಸಿ. ಆರೋಗ್ಯದ ಕಡೆ ನಿಗಾ ಇರಲಿ. ಧನವ್ಯಯ. ಶುಭಸಂಖ್ಯೆ: 7

ಮೀನ: ಕನಸು ನನಸಾಗುವ ದಿನ. ವಿವಾಹದ ವಿಷಯದಲ್ಲಿ ಅಂತಿಮ ತೀರ್ಮಾನ. ದಿನಾಂತ್ಯದಲ್ಲಿ ಶುಭಕರ ವಾರ್ತೆಯೊಂದು ಬರಲಿದೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net