ಇಂದು ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಿಂದ ಆದಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಮಕ್ಕಳ ವಿದ್ಯಾಭ್ಯಾಸದ ಕುರಿತು ಗಮನಹರಿಸಿ. ಆಸ್ತಿ ವಿಚಾರದಲ್ಲಿ ಒಳ್ಳೆಯದಾಗಲಿದೆ. ಶುಭಸಂಖ್ಯೆ: 9

ವೃಷಭ: ತರಕಾರಿ ವ್ಯಾಪಾರಿಗಳಿಗೆ ಉತ್ತಮ ದಿನ. ಹಿರಿಯ ಅಧಿಕಾರಿಗಳಿಂದ ಸಹಾಯ. ಕಚ್ಚಾವಸ್ತುಗಳ ಪೂರೈಕೆದಾರರಿಗೆ ಲಾಭ. ಶುಭಸಂಖ್ಯೆ: 9

ಮಿಥುನ: ಬಟ್ಟೆ ವ್ಯಾಪಾರಸ್ಥರಿಗೆ ಅಶುಭ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಜಾಸ್ತಿಯಾಗಬಹುದು. ಕಾರ್ಯ ನಿಮಿತ್ತ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 7

ಕಟಕ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒಳ್ಳೆಯ ಫಲ. ಹಿರಿಯರ ಆರೋಗ್ಯದಲ್ಲಿ ಎಚ್ಚರವಹಿಸಿ. ಕ್ರೀಡಾಪಟುಗಳಿಗೆ ಯಶಸ್ಸು. ಶುಭಸಂಖ್ಯೆ: 5

ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಉತ್ತಮ ಆದಾಯ. ಮಹಿಳೆಯರಿಗೆ ಶುಭ. ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯಿರಿ. ಶುಭಸಂಖ್ಯೆ: 1

ಕನ್ಯಾ: ಕೃಷಿಕರಿಗೆ ಒಳ್ಳೆಯ ದಿನ. ಸ್ಥಿರಾಸ್ತಿ ಖರೀದಿಯ ಚಿಂತನೆ. ವೇದಿಕೆ ನಿರ್ಮಾಣ ಸಂಬಂಧಿ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 3

ತುಲಾ: ಗುಡಿ ಕೈಗಾರಿಕೆಯವರಿಗೆ ಧನಾಗಮ. ಭೂ ವ್ಯವಹಾರದಲ್ಲಿ ಲಾಭವಿದೆ. ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಉತ್ತಮ ಗಳಿಕೆ. ಶುಭಸಂಖ್ಯೆ: 7

ವೃಶ್ಚಿಕ: ಕೆಲವು ಗೊಂದಲಗಳ ನಿವಾರಣೆ. ಸಾಫ್ಟ್​ವೇರ್ ವಿಭಾಗದವರಿಗೆ ಯಶಸ್ಸು. ಪೂಜಾ ವಸ್ತುಗಳ ವ್ಯಾಪಾರಿಗಳಿಗೆೆ ಅಭಿವೃದ್ಧಿ. ಶುಭಸಂಖ್ಯೆ: 7

ಧನುಸ್ಸು: ಉದ್ದಿಮೆದಾರರಿಗೆ ಉತ್ತಮ ದಿನ. ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ತೀರ ಅಗತ್ಯ. ಶುಭಸಂಖ್ಯೆ: 8

ಮಕರ: ಸರ್ಕಾರಿ ನೌಕರರಿಗೆ ಬಡ್ತಿ ಸಾಧ್ಯತೆ. ಔಷಧಿ ತಯಾರಿಕರಿಗೆ ಲಾಭ. ಸಗಟು ವ್ಯಾಪಾರಸ್ಥರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಶುಭಸಂಖ್ಯೆ: 6

ಕುಂಭ: ವಸ್ತ್ರ ವ್ಯಾಪಾರದಲ್ಲಿ ಭರ್ಜರಿ ಲಾಭ. ಹೋಟೆಲ್ ಉದ್ಯಮದಲ್ಲಿ ಉತ್ತಮ ಆದಾಯ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 3

ಮೀನ: ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಲಿದೆ. ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಕಾಣುವಿರಿ. ಕಾರ್ವಿುಕರಿಗೆ ಒಳ್ಳೆಯದಾಗಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net