ಈ ರಾಶಿಯವರಿಗಿಂದು ಅಧಿಕ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕ ನಷ್ಟ. ಶತ್ರು ದಮನ ಸರ್ಕಾರಿ ಅಧಿಕಾರಿಗಳಿಂದ ಅನುಕೂಲವಾಗಲಿದೆ. ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆಯಿದೆ. ಶುಭಸಂಖ್ಯೆ: 9

ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವವು. ಸಹೋದರಿಯಿಂದ ಅನುಕೂಲವಾಗುವುದು. ಉನ್ನತ ಅಧಿಕಾರಿಗಳ ಭೇಟಿಯಾಗಲಿದೆ. ಶುಭಸಂಖ್ಯೆ: 2

ಮಿಥುನ: ಉದ್ಯೋಗ ಸ್ಥಳ, ಗೃಹ ಬದಲಾವಣೆಯ ಆಲೋಚನೆ. ಮಾತಿನಿಂದ ಕುಟುಂಬಸ್ಥರಿಗೆ ನೋವು. ಗುಪ್ತ ಧನಾಗಮನ ಸಾಧ್ಯತೆ. ಶುಭಸಂಖ್ಯೆ: 6

ಕಟಕ: ವ್ಯವಹಾರದಲ್ಲಿ ಅಧಿಕ ಧನಾಗಮನವಾಗಲಿದೆ. ಅನಗತ್ಯ ತಿರುಗಾಟ ಮಾಡಬೇಕಾಗುವುದು. ಧೈರ್ಯ, ದಕ್ಷತೆಯ ನಿರ್ವಹಣೆ. ಶುಭಸಂಖ್ಯೆ: 8

ಸಿಂಹ: ಆದಾಯ ಮತ್ತು ನಷ್ಟ ಸಮಪ್ರಮಾಣ. ಉತ್ತಮ ಹೆಸರು, ಗೌರವ ಲಭಿಸುವುದು. ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ. ಶುಭಸಂಖ್ಯೆ: 4

ಕನ್ಯಾ: ಒತ್ತಡಕ್ಕೆ ಸಿಲುಕುವಿರಿ. ಕೆಲಸದ ಒತ್ತಡದಿಂದ ನಿದ್ರಾಭಂಗ. ನಷ್ಟದ ಪ್ರಮಾಣ ಅಧಿಕ. ರಾಜಕೀಯ ವ್ಯಕ್ತಿಗಳಿಂದ ಸಂಕಷ್ಟ. ಶುಭಸಂಖ್ಯೆ: 6

ತುಲಾ: ಉದ್ಯೋಗ ಲಾಭ. ವ್ಯವಹಾರದಲ್ಲಿ ಲಾಭದ ಪ್ರಮಾಣ ಕುಂಠಿತ. ಅದೃಷ್ಟ ವಂಚಿತನಾದೆ ಎನ್ನುವ ಭಾವನೆ ತೀವ್ರವಾಗಿ ಕಾಡಲಿದೆ. ಶುಭಸಂಖ್ಯೆ: 1

ವೃಶ್ಚಿಕ: ಸರ್ಕಾರದಿಂದ ಅನುಕೂಲ. ಉತ್ತಮ ದಿನ. ಮಿತ್ರರಿಂದ ಅದೃಷ್ಟ. ಉತ್ತಮ ಹೆಸರು, ಗೌರವ ಕೀರ್ತಿ, ಪ್ರತಿಷ್ಠೆ ದೊರೆಯುವುದು. ಶುಭಸಂಖ್ಯೆ: 7

ಧನುಸ್ಸು: ಅನಿರೀಕ್ಷಿತವಾಗಿ ಗಣ್ಯರ ಭೇಟಿ. ಪೂರ್ವಿಕರ ಕಾರ್ಯದಲ್ಲಿ ತೊಡಗುವಿರಿ. ಪ್ರಯಾಣದಲ್ಲಿ ತೊಂದರೆ. ಉದ್ಯೋಗ ಸಮಸ್ಯೆ. ಶುಭಸಂಖ್ಯೆ: 5

ಮಕರ: ಸಂಗಾತಿಯೊಂದಿಗೆ ಕಲಹವಾದೀತು. ಪಾಲುದಾರಿಕೆಯಲ್ಲಿ ಸಮಸ್ಯೆಯಾಗುವುದು. ಮಾನಸಿಕವಾಗಿ ಒತ್ತಡ ಎದುರಿಸುವಿರಿ. ಶುಭಸಂಖ್ಯೆ: 9

ಕುಂಭ: ಆರೋಗ್ಯ ಸಮಸ್ಯೆ ಕಾಡುವುದು. ಆಹಾರದಿಂದ ಸಮಸ್ಯೆಯಾಗಬಹುದು, ಎಚ್ಚರ. ಅಧಿಕಾರಿಗಳಿಂದ ತೊಂದರೆ ಎದುರಿಸುವಿರಿ. ಶುಭಸಂಖ್ಯೆ: 6

ಮೀನ: ಮಕ್ಕಳೊಂದಿಗೆ ವಾಗ್ವಾದ. ಸಾಲದ ಸಮಸ್ಯೆ. ಶತ್ರು ಬಾಧೆ ಹೆಚ್ಚುವುದು. ನಷ್ಟದ ಪ್ರಮಾಣ ಅಧಿಕ. ಸಂಜೆ ವೇಳೆ ಶುಭಸುದ್ದಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net