

ಮೇಷ: ಧನ ನಷ್ಟವಾಗುವ ಸಂಭವವಿದೆ. ಅಮೂಲ್ಯ ವಸ್ತುಗಳು ಪ್ರಾರಪ್ತವಾಗಲಿವೆ. ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಿ. ಚೋರ ಭೀತಿ. ಶುಭಸಂಖ್ಯೆ:5
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ. ಆರೋಗ್ಯದಲ್ಲಿ ಚೇತರಿಕೆಯಾಗುವುದು. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 1
ಮಿಥುನ: ಧನಲಾಭವಾಗಿ ಆರ್ಥಿಕ ಸಮಾಧಾನ. ವಾಹನ ಖರೀದಿ ಯೋಗವಿದೆ. ಹಿರಿಯರಿಂದ ಉಪದೇಶ. ಇಷ್ಟದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 5
ಕಟಕ: ಗಣಕ ಯಂತ್ರದಿಂದ ಲಾಭವಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು. ಪೀಠೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಶುಭಸಂಖ್ಯೆ: 6
ಸಿಂಹ: ಮೇಲಧಿಕಾರಿಗಳಿಂದ ತೊಂದರೆಯಾದೀತು. ಹೃದಯ ಸಮಸ್ಯೆ ಇರುವವರು ಎಚ್ಚರ ವಹಿಸಿ. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ: 7
ಕನ್ಯಾ: ಭೂಮಿ ಖರೀದಿಸುವ ಯೋಗ. ಸಹೋದರರ ಜೊತೆಯಲ್ಲಿ ಕಲಹ, ಸಮಾಧಾನಚಿತ್ತರಾಗಿರಿ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9
ತುಲಾ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ. ಸರ್ಕಾರಿ ಕೆಲಸದಲ್ಲಿ ನಿರೀಕ್ಷಿತ ಯಶಸ್ಸು. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ: 6
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು. ವೈದ್ಯರ ಸಲಹೆ ಅಗತ್ಯ. ಮಾತಿನ ಚಕಮಕಿ. ಧನ ನಷ್ಟ ಸಾಧ್ಯತೆ. ಆರಕ್ಷಕ ವೃತ್ತಿಯವರಿಗೆ ಅಡಚಣೆ. ಶುಭಸಂಖ್ಯೆ: 3
ಧನುಸ್ಸು: ಹೊಸ ಯೋಜನೆಗಳನ್ನು ಆರಂಭಿಸಲು ಒಳ್ಳೆಯ ದಿನ. ವ್ಯವಸಾಯದಲ್ಲಿ ಲಾಭ ಬರುವುದು. ವ್ಯಾಪಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:7
ಮಕರ: ಗುರುಹಿರಿಯರ ದರ್ಶನ ಮಾಡುವಿರಿ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 6
ಕುಂಭ: ಚಾಲಕರಿಗೆ ಲಾಭ. ಅನಗತ್ಯ ಅಲೆದಾಟ ಮಾಡುವ ಪರಿಸ್ಥಿತಿ. ಸಕಾಲಕ್ಕೆ ಊಟ ಮಾಡಲೂ ಆಗದಷ್ಟು ಕೆಲಸದೊತ್ತಡ. ಧನ ನಷ್ಟ. ಶುಭಸಂಖ್ಯೆ:3
ಮೀನ: ಶರೀರದಲ್ಲಿ ತಳಮಳ. ವೈದ್ಯರ ಭೇಟಿಮಾಡಿ ಪರಿಹಾರ ಪಡೆಯುವಿರಿ. ನೋವು ಬಾಧಿಸೀತು. ಶತ್ರುವಿನಿಂದ ತೊಂದರೆ. ಶುಭಸಂಖ್ಯೆ:3