More

    ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ

    ಬೆಂಗಳೂರು: ಕರಾವಳಿ ಕುಂದಾಪುರ ಪ್ರದೇಶದವರು ತಮ್ಮ ಭಾಷೆ-ಬದುಕಿನ ಕುರಿತಂತೆ ಪ್ರತಿ ವರ್ಷ ಆಚರಿಸುವ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಗೆ ಇಂದು ಸಿಎಂ, ಡಿಸಿಎಂ, ಮಾಜಿ ಸಿಎಂ, ಸಚಿವ, ಸಂಸದ, ಶಾಸಕರು ಮುಂತಾವರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

    ಪ್ರತಿ ವರ್ಷ ಆಷಾಢ ಅಮಾವಾಸ್ಯೆ ದಿನ ವಿಶ್ವ ಕುಂದಾಪುರ ಕನ್ನಡ ದಿನವನ್ನು ಆಚರಿಸಲಾಗುತ್ತಿದ್ದು, ಇಂದು ಕುಂದಗನ್ನಡಿಗರಿಂದ ಹಲವೆಡೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ನಡೆದಿದೆ. ಭಾಷೆ-ಬದುಕಿನ ಮೇಲಿನ ಅಭಿಮಾನದ ಈ ಆಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ-ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ್ ವೈದ್ಯ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಕಿರಣ್​ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಮುಂತಾದವರು ಶುಭ ಹಾರೈಸಿದ್ದಾರೆ.

    ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?

    ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಅದು ಈ ಸಲ ಜುಲೈ 17ರಂದು ಆಚರಣೆ ಆಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಜು. 23ರಂದು ಆಚರಣೆ, ಸಿಎಂ ಉಪಸ್ಥಿತಿ

    ಬೆಂಗಳೂರಿನಲ್ಲಿ ಇರುವ ಕುಂದಗನ್ನಡಿಗರು ಜು. 23ರಂದು ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಅದ್ಧೂರಿಯಾಗಿ ವಿಶ್ವ ಕುಂದಾಪುರ ಕನ್ನಡ ದಿನ ಆಚರಿಸಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಕುಂದಗನ್ನಡದ ಕಲರವ, ಕುಂದಗನ್ನಡ ಬದುಕಿನ ಸೊಗಡಿನ ಅನಾವರಣ ಆಗಲಿದೆ. ಈ ವಿಶೇಷ ಸಮಾರಂಭದಲ್ಲಿ ಇದೇ ಪ್ರಥಮ ಬಾರಿ ರಾಜ್ಯದ ಮುಖ್ಯಮಂತ್ರಿಯವರು ಭಾಗವಹಿಸಲಿದ್ದು, ಅಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದ, ಕುಂದಾಪುರ ಮೂಲದ ಸ್ಟಾರ್ ನಟ-ನಿರ್ದೇಶಕರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಈ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ವಿವರಣೆ ನೀಡಲಾಗುವುದು ಎಂದು ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಜಿತ್ ಶೆಟ್ಟಿ ಉಳ್ತೂರು ತಿಳಿಸಿದ್ದಾರೆ.

     

     

    ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts