

ಮೇಷ: ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರಲಿದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಮನಸ್ಸಿಗೆ ನೆಮ್ಮದಿ ದೊರೆಯುವ ದಿನ. ಶುಭಸಂಖ್ಯೆ: 9
ವೃಷಭ: ಕಾರ್ಯಸಿದ್ದಿ, ದ್ರವ್ಯಲಾಭ. ವೈಯಕ್ತಿಕ ವಿಚಾರದತ್ತ ಗಮನ ಕೊಡಿ. ಮನೋವ್ಯಥೆ ಕಾಡಬಹುದು. ಆಪ್ತರಿಂದ ಸಹಾಯ. ಶುಭಸಂಖ್ಯೆ:7
ಮಿಥುನ: ಆದಾಯಕ್ಕಿಂತ ಅಧಿಕ ಖರ್ಚು, ಬೇಸರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ವಾಹನ ಖರೀದಿ. ಹಿತಶತ್ರು ಭಾದೆ. ಶುಭಸಂಖ್ಯೆ: 4
ಕಟಕ: ಬಹುದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಉದ್ಯೋಗ ಬದಲಾವಣೆ ಕುರಿತು ನಿರ್ಧರಿಸುವಿರಿ. ಮನಕ್ಲೇಷ. ಶುಭಸಂಖ್ಯೆ:8
ಸಿಂಹ: ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ. ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ. ಮಾತಾಪಿತರಲ್ಲಿ ವಾತ್ಸಲ್ಯ ತೋರಿಸುವಿರಿ. ಮನಶಾಂತಿ. ಶುಭಸಂಖ್ಯೆ:1
ಕನ್ಯಾ: ಗುರು ಹಿರಿಯರಲ್ಲಿ ಭಕ್ತಿ ಪ್ರದರ್ಶಿಸುವಿರಿ. ಮಾತಿನ ಮೇಲೆ ಹಿಡಿತವಿರಲಿ. ಧನವ್ಯಯ. ನಾನಾ ಸಮಸ್ಯೆ. ಹಿತಶತ್ರು ಬಾಧೆ. ಶುಭಸಂಖ್ಯೆ:6
ತುಲಾ: ಮಿತ್ರರಿಂದ ಧನಸಹಾಯ ಬರಲಿದೆ. ಅನಾರೋಗ್ಯ. ಸಲ್ಲದ ಅಪವಾದ ಬರಬಹುದು. ಕೃಷಿಯಲ್ಲಿ ಲಾಭ. ಕುಟುಂಬದಲ್ಲಿ ಪ್ರೀತಿ. ಶುಭಸಂಖ್ಯೆ:5
ವೃಶ್ಚಿಕ: ಆಸ್ತಿ ವಿಚಾರದಲ್ಲಿ ಕಲಹ. ಅನಿರೀಕ್ಷಿತ ಖರ್ಚು. ಅಲ್ಪ ಕಾರ್ಯಸಿದ್ದಿ. ಯಾರನ್ನೂ ಅತಿಯಾಗಿ ನಂಬಲು ಹೋಗಬೇಡಿ. ಶುಭಸಂಖ್ಯೆ: 2
ಧನುಸ್ಸು: ಆಪ್ತರೊಡನೆ ದೂರ ಪ್ರಯಾಣ. ರಿಯಲ್ ಎಸ್ಟೇಟ್ನವರಿಗೆ ನಷ್ಟ. ಸಾಲ ಮರುಪಾವತಿ. ಕೈಹಾಕಿದ ಕೆಲಸದಲ್ಲಿ ಜಯ. ಶುಭಸಂಖ್ಯೆ: 3
ಮಕರ: ಮನೆಯಲ್ಲಿ ದೇವತಾಕಾರ್ಯದ ಸಡಗರ. ನಾನಾ ವಿಚಾರಗಳಲ್ಲಿ ಆಸಕ್ತಿ. ಕೋಪ ಜಾಸ್ತಿ. ಇತರರ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ:3
ಕುಂಭ: ಸ್ತ್ರೀಯರಿಂದ ಸಹಕಾರ ಸಿಗಲಿದೆ. ಋಣ ವಿಮೋಚನೆ. ನಿರೀಕ್ಷಿತ ಲಾಭ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಅತಿಯಾದ ನಿದ್ರೆ. ಶುಭಸಂಖ್ಯೆ:8
ಮೀನ: ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ, ರಾಜಕೀಯದಲ್ಲಿ ಗೊಂದಲ. ವೈರಿಗಳಿಂದ ದೂರವಿರಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ:2