ಈ ರಾಶಿಯವರು ಇಂದು ಕಷ್ಟಗಳನ್ನು ಎದುರಿಸುವ ಎದೆಗಾರಿಕೆ ಹೊಂದಿರುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವೈಜ್ಞಾನಿಕ ಸಂಶೋಧನೆಯಲ್ಲಿ ಇರುವವರಿಗೆ ಅನಿರೀಕ್ಷಿತ ಫಲಿತಾಂಶ. ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಶುಭಸಂಖ್ಯೆ: 9

ವೃಷಭ: ಕಮಿಷನ್ ಏಜೆಂಟ್​ಗಳಿಗೆ ಅಧಿಕ ಆದಾಯ. ಮನೆಯಲ್ಲಿ ಹಿತಕರ ವಾತಾವರಣ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ. ಶುಭಸಂಖ್ಯೆ: 1

ಮಿಥುನ: ಆರ್ಥಿಕ ಸಮಸ್ಯೆ. ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯವಾಗುವುದು. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 9

ಕಟಕ: ಹೊಸತನದತ್ತ ತುಡಿತ. ಅಂದುಕೊಂಡ ಯೋಜನೆ ಕಾರ್ಯರೂಪಕ್ಕೆ ಬರಲು ದೈವಬಲ ಬೇಕು. ಇಷ್ಟದೇವರನ್ನು ಬೇಡಿಕೊಳ್ಳಿ. ಶುಭಸಂಖ್ಯೆ: 7

ಸಿಂಹ: ಹೊಸ ವಾಹನ ಖರೀದಿ ಅಗತ್ಯ. ನಿಮ್ಮ ಮಾನಸಿಕ ಶಕ್ತಿ ಬಲವಾಗಿದೆ. ಯೋಚನೆಗಳನ್ನು ಶೀಘ್ರ ಕಾರ್ಯರೂಪಕ್ಕೆ ಇಳಿಸುತ್ತೀರಿ. ಶುಭಸಂಖ್ಯೆ: 6

ಕನ್ಯಾ: ಇತರರು ನಿಮ್ಮ ಸಮಯ ಯಾಚಿಸುತ್ತಿದ್ದಾರೆ. ಸ್ವಂತ ಕೆಲಸ ನಿಧಾನವಾಗಲಿದೆ. ವಿವಾದ, ರಾಜೀ ಪಂಚಾಯ್ತಿಗಳಿಂದ ದೂರವಿರಿ. ಶುಭಸಂಖ್ಯೆ: 2

ತುಲಾ: ಅಪೇಕ್ಷಿಸಿದ ಸಹಕಾರವನ್ನು ಮೇಲಧಿಕಾರಿಗಳಿಂದ ಪಡೆಯುವಿರಿ. ಅದರಿಂದಾಗಿ ಹಳೆಯ ಯೋಜನೆಗಳಿಗೆ ಮರು ಜೀವ. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗಕ್ಕೆ ಸಂಬಂಧಿಸಿ ಯಂತ್ರಗಳ ಹಾನಿ. ಆರೋಗ್ಯದ ವ್ಯತ್ಯಾಸಕ್ಕೆ ನಿದ್ರಾಭಂಗ ಮೂಲ. ಲೇವಾದೇವಿಯಲ್ಲಿ ನಷ್ಟ ಸಾಧ್ಯತೆ. ಶುಭಸಂಖ್ಯೆ:5

ಧನುಸ್ಸು: ತೀರ್ಮಾನ ಹೇಳುವ ಜವಾಬ್ದಾರಿ ಬೇಡ. ಆರಂಭಿಸಿದ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ಪೂರ್ಣಗೊಳ್ಳಲಿವೆ. ಶುಭಸಂಖ್ಯೆ: 8

ಮಕರ: ಆಸ್ತಿಗೆ ಸಂಬಂಧಿಸಿ ದಾಯಾದಿಗಳ ತಂಟೆ ನಿಧಾನವಾಗಿ ದೂರವಾಗಲಿವೆ. ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಿ ಅಭಿವೃದ್ಧಿಯಾಗಲಿದೆ. ಶುಭಸಂಖ್ಯೆ: 4

ಕುಂಭ: ಕಷ್ಟಗಳನ್ನು ಎದುರಿಸುವ ಎದೆಗಾರಿಕೆಯನ್ನು ಹೊಂದಿರುವಿರಿ. ದುಃಖಗಳ ತೀವ್ರತೆಯು ದಿನದಿಂದ ದಿನಕ್ಕೆ ಕಡಿಮೆಯಾಗುವುದು. ಶುಭಸಂಖ್ಯೆ: 9

ಮೀನ: ನಿಮ್ಮ ಚಟುವಟಿಕೆಯು ಸದವಕಾಶವನ್ನು ತಂದು ಕೊಡಲಿದೆ. ಭೂ ವ್ಯವಹಾರದಲ್ಲಿ ಲಾಭ. ಸಗಟು ವ್ಯಾಪಾರಿಗಳಿಗೆ ಧನ ನಷ್ಟ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net