

ಮೇಷ: ತಾಂತ್ರಿಕ-ಟ್ರಾವೆಲ್ಸ್ ವೃತ್ತಿಪರರಿಗೆ ಲಾಭ. ಸೊಸೆಯಿಂದ ನೋವು. ಚಿಕ್ಕಪ್ಪನಿಂದ ಸಮಸ್ಯೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ವೃಷಭ: ಆಕಸ್ಮಿಕ ಧನ ಲಾಭ. ಕೆಟ್ಟ ದೃಷ್ಟಿಯಿಂದ ಅನಾಹುತ. ಉದ್ಯೋಗದಲ್ಲಿ ಒತ್ತಡ. ವೃತ್ತಿ ಕ್ಷೇತ್ರ ಬದಲಾಯಿಸುವ ಆಲೋಚನೆ. ಶುಭಸಂಖ್ಯೆ: 1
ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ. ಭವಿಷ್ಯದ ಬಗ್ಗೆ ಆತಂಕ. ತಂದೆಯಿಂದ ಸಾಲ ಬಾಧೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 3
ಕಟಕ: ವಿಪರೀತ ನಷ್ಟ, ನಿರಾಸೆ. ಸಲ್ಲದ ಅಪವಾದ. ಗೌರವಕ್ಕೆ ಧಕ್ಕೆ. ಹೀಯಾಳಿಕೆಯಿಂದ ಜಿಗುಪ್ಸೆ. ವ್ಯವಹಾರ ಆರಂಭಿಸುವ ಯೋಚನೆ. ಶುಭಸಂಖ್ಯೆ: 8
ಸಿಂಹ: ರಿಯಲ್ ಎಸ್ಟೇಟ್ನವರಿಗೆ ಲಾಭ. ಎಲೆಕ್ಟ್ರಾನಿಕ್ಸ್ ಕ್ಷೇತ್ರದವರಿಗೆ ಅನುಕೂಲ. ಪಾಲುದಾರಿಕೆಯಿಂದ ದೂರ ಉಳಿಯಲು ಯತ್ನ. ಶುಭಸಂಖ್ಯೆ: 2
ಕನ್ಯಾ: ಅಕ್ರಮ ಸಂಪಾದನೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶತ್ರುಗಳ ಕಾಟ. ಉದ್ಯೋಗ ನಷ್ಟ. ಅನಾರೋಗ್ಯದಿಂದ ನರಳಾಟ. ಶುಭಸಂಖ್ಯೆ: 5
ತುಲಾ: ಪ್ರಯಾಣದಲ್ಲಿ ಬೇಸರ. ಹಣ ಕಳೆದುಕೊಳ್ಳುವಿರಿ, ಎಚ್ಚರ. ಮಕ್ಕಳಿಂದ ನೋವು, ದೈವ ನಿಂದನೆ ಕೂಡದು. ನಿದ್ರಾಭಂಗ. ಶುಭಸಂಖ್ಯೆ: 7
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಲ್ಲಿ ಅಶಾಂತಿ. ಶತ್ರುಗಳಿಂದ ಭೀತಿ. ನಿರಾಸಕ್ತ ಜೀವನ. ವಾಹನ ನಷ್ಟ. ಮಿತ್ರರಿಂದ ಧನಾಗಮ. ಶುಭಸಂಖ್ಯೆ: 3
ಧನುಸ್ಸು: ಸ್ಥಳ ಬದಲಾವಣೆ. ಉದ್ಯೋಗ ಬದಲಾವಣೆಗೆ ಮನಸ್ಸು ಮಾಡುವಿರಿ. ಅಕ್ಕ ಪಕ್ಕದವರಿಂದ ಕಿರಿಕಿರಿ. ಆತ್ಮಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 6
ಮಕರ: ನೆರೆಹೊರೆಯವರಿಂದ ತೊಂದರೆ. ಸಾಲ ಬಾಧೆ. ದೂರ ಪ್ರಯಾಣ. ಆರ್ಥಿಕ ಸಮಸ್ಯೆ ಕಾಡೀತು. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 4
ಕುಂಭ: ಮಕ್ಕಳಿಂದ ಅನುಕೂಲ. ಅನಗತ್ಯ ಮಾತಿನಿಂದ ಶತ್ರುತ್ವ. ವಾಗ್ವಾದ ಹೆಚ್ಚಾಗುವುದು. ಮಿತ್ರರಿಂದ ನೋವು. ಸನ್ಮಾನಗಳಿಗೆ ಅಡೆತಡೆ. ಶುಭಸಂಖ್ಯೆ: 2
ಮೀನ: ಸ್ಥಿರಾಸ್ತಿ ಖರೀದಿ. ಉದ್ಯೋಗದಲ್ಲಿ ನಷ್ಟವಾಗಲಿದೆ. ನಿರಾಸೆ ಹೆಚ್ಚು. ಸಂಗಾತಿಯಿಂದ ಸಹಾಯ. ದುಶ್ಚಟಗಳಿಂದ ದೂರವಿರಿ. ಶುಭಸಂಖ್ಯೆ: 4