ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ಪ್ರೀತಿ, ಆದಾಯದ ಮೂಲ ಹೆಚ್ಚಳ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಕಸ್ಮಿಕ ಧನಲಾಭವಿದೆ. ದಾಂಪತ್ಯದಲ್ಲಿ ಪ್ರೀತಿ. ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ. ಆದಾಯದ ಮೂಲ ಹೆಚ್ಚಾಗುವುದು. ಶುಭಸಂಖ್ಯೆ: 5

ವೃಷಭ: ಬಹುದಿನಗಳಿಂದ ಕಿರಿಕಿರಿ ಎನಿಸಿದ್ದ ವಿವಾದ ಇತ್ಯರ್ಥ ಕಾಣಲಿದೆ. ಗುರಿ ಸಾಧನೆಗೆ ಒಳ್ಳೆಯ ಕಾಲ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 1

ಮಿಥುನ: ಷೇರು ವ್ಯವಹಾರಗಳಿಂದ ಲಾಭವಾಗುವುದು. ಶ್ರಮಪಡುವಿರಾದರೂ ಅಲ್ಪ ಗಳಿಕೆ. ದೂರ ಪ್ರಯಾಣ. ರೈತರಿಗೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 9

ಕಟಕ: ಉದ್ಯೋಗದಲ್ಲಿ ಬಡ್ತಿ. ಸ್ನೇಹಿತರ ಭೇಟಿ. ಮನೆಗೆ ಹಿರಿಯರ ಆಗಮನ. ಭೂಲಾಭವಾಗುವುದು. ಸಂತೋಷಕೂಟದಲ್ಲಿ ಭಾಗಿ. ಶುಭಸಂಖ್ಯೆ: 2

ಸಿಂಹ: ಸ್ವಾಭಿಮಾನದಿಂದ ವಿರಸ ತಲೆದೋರುವುದು. ಮನೆಯಲ್ಲಿ ಅಶಾಂತಿಯ ವಾತಾವರಣ. ಸಣ್ಣಪುಟ್ಟ ಆಶ್ಚರ್ಯಕರ ಬದಲಾವಣೆ. ಶುಭಸಂಖ್ಯೆ: 8

ಕನ್ಯಾ: ಮಾನಸಿಕ ಅಸ್ಥಿರತೆ ಹೆಚ್ಚೆಚ್ಚು ಕಾಡಲಿದೆ. ಸ್ವಂತ ಉದ್ಯಮಿಗಳಿಗೆ ನಿರೀಕ್ಷಿತ ಪ್ರಗತಿ. ಸ್ತ್ರೀಯರಿಂದ ಮನಸ್ಸಿಗೆ ಬೇಸರವಾಗುವುದು. ಶುಭಸಂಖ್ಯೆ: 7

ತುಲಾ: ಕಾರ್ಯದಲ್ಲಿ ಅಡೆ ತಡೆ. ಸ್ಥಳ ಬದಲಾವಣೆ ಆಗಬಹುದು. ದಾಯಾದಿ ಕಲಹ. ವಿಪರೀತ ಖರ್ಚು. ಸೇವಕರಿಂದ ಸಹಾಯ. ಶುಭಸಂಖ್ಯೆ:3

ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 6

ಧನುಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ ನೆಲೆಸಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿ. ಶುಭಸಂಖ್ಯೆ: 4

ಮಕರ: ಶತ್ರುನಾಶ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಉತ್ತಮ ಬುದ್ಧಿಶಕ್ತಿ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಪರರ ಧನಪ್ರಾಪ್ತಿ. ಶುಭಸಂಖ್ಯೆ: 5

ಕುಂಭ: ಸಾಲಬಾಧೆ ವಿಪರೀತ. ಅನವಶ್ಯಕ ಮಾತುಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಧನವ್ಯಯ. ಭಾಗ್ಯ ವೃದ್ಧಿ. ವಿವಾಹ ಯೋಗ. ಶುಭಸಂಖ್ಯೆ: 9

ಮೀನ: ಎಲ್ಲಿ ಹೋದರೂ ಅಶಾಂತಿಯ ಅನುಭವ. ಮನಸ್ಸಿನಲ್ಲಿ ಭಯಭೀತಿ. ಶತ್ರುಬಾಧೆ. ಕೆಲಸ ಕಾರ್ಯಗಳಲ್ಲಿ ಜಯ. ರಾಜ ಸನ್ಮಾನ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net