ಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನಾಗಮನವಾಗಿ ಸಂತಸ, ಹಿತಶತ್ರುಗಳ ಕಾಟ ಹೆಚ್ಚಳ

Nithya Bhavishya
Published on

ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಅನುಭವಿಸಬೇಕಾಗಬಹುದು. ವಾಹನ, ಸ್ಥಿರಾಸ್ತಿ ದೊರೆಯುವ ಸಾಧ್ಯತೆ. ಆಕಸ್ಮಿಕ ಅವಘಡಗಳು. ಶುಭಸಂಖ್ಯೆ: 9

ವೃಷಭ: ಕೃಷಿ ಆಧಾರಿತ ಉದ್ಯೋಗಸ್ಥರಿಗೆ ಅನುಕೂಲ. ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಗಂಟಲು ನೋವು. ಕಾಲು, ಭುಜನೋವು. ಶುಭಸಂಖ್ಯೆ: 1

ಮಿಥುನ: ಆಕಸ್ಮಿಕ ಧನ ಲಭಿಸುವ ಯೋಗ. ಕೋರ್ಟ್ ಕೇಸುಗಳಲ್ಲಿ ಜಯ ನಿಮಗಿದೆ. ತಂದೆಯಿಂದ ಅನಗತ್ಯ ಮಾತು ಕೇಳಬೇಕಾದೀತು. ಶುಭಸಂಖ್ಯೆ: 5

ಕಟಕ: ಶುಭಕಾರ್ಯಗಳಿಗೆ ಅವಕಾಶ ಕೂಡಿಬರುವುದು. ಮಾನ ಅಪಮಾನಗಳಿಗೆ ಗುರಿಯಾಗುವಿರಿ. ದುಶ್ಚಟ, ದುರಾಚಾರಗಳಿಗೆ ಮನಸ್ಸು. ಶುಭಸಂಖ್ಯೆ: 2

ಸಿಂಹ: ಅಧಿಕ ನಷ್ಟ. ರೋಗಬಾಧೆಗಳಿಗೆ ಖರ್ಚು. ಮಾನಸಿಕ ಕಿರಿಕಿರಿ ಉಂಟಾಗಲಿದೆ. ಮನೋವ್ಯಾಧಿ. ಸೋಮಾರಿತನದಿಂದ ಅಡೆತಡೆ. ಶುಭಸಂಖ್ಯೆ: 7

ಕನ್ಯಾ: ಹೆಣ್ಣು ಮಕ್ಕಳಿಂದ, ಸ್ನೇಹಿತರಿಂದ ಲಾಭ. ಗೃಹ ಬದಲಾವಣೆಗೆ ಅಡ್ಡಿ ಆತಂಕ. ಅಪಮಾನಗಳಿಗೆ ಗುರಿಯಾಗುವಿರಿ. ಎಚ್ಚರದಿಂದಿರಿ. ಶುಭಸಂಖ್ಯೆ: 6

ತುಲಾ: ಉದ್ಯೋಗ ದೊರಕುವುದು. ಆತ್ಮಗೌರವಕ್ಕೆ ಚ್ಯುತಿ ಬರಬಹುದು. ತಾಯಿಯಿಂದ ಅನುಕೂಲವಿದೆ. ಕಷ್ಟಕ್ಕೆ ಪರಿಹಾರ ಸಿಗುವುದು. ಶುಭಸಂಖ್ಯೆ: 9

ವೃಶ್ಚಿಕ: ದೇವತಾಕಾರ್ಯಗಳಿಗೆ ಪ್ರಯಾಣ. ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವಿರಿ. ಆರೋಗ್ಯದಲ್ಲಿ ವ್ಯತ್ಯಾಸ. ವಿಮೆ, ವಿಶ್ರಾಂತಿ ವೇತನ ಲಭ್ಯ. ಶುಭಸಂಖ್ಯೆ: 3

ಧನುಸ್ಸು: ಆಕಸ್ಮಿಕ ಧನಾಗಮನವಾಗಿ ಸಂತಸ. ಹಿತಶತ್ರುಗಳ ಕಾಟ ಹೆಚ್ಚುವುದು. ಗುಪ್ತ ವಿಷಯಗಳಲ್ಲಿ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ: 7

ಮಕರ: ಪಾಲುದಾರಿಕೆಯಲ್ಲಿ ಅನುಕೂಲವಿದೆ. ಬಂಧುಗಳು, ಮಕ್ಕಳು ಆಗಮಿಸುವರು. ಇಷ್ಟದ ಕೆಲಸಗಳಿಗೆ ಸಮಯ ಕೊಡುವಿರಿ. ಶುಭಸಂಖ್ಯೆ: 7

ಕುಂಭ: ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಉದ್ಯೋಗದಲ್ಲಿ ವಿಪರೀತ ಒತ್ತಡ, ಕಿರಿಕಿರಿ. ಮಕ್ಕಳಿಂದ ಭೂಮಿ ನಷ್ಟ. ಶುಭಸಂಖ್ಯೆ: 6

ಮೀನ: ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ. ಪ್ರಯಾಣದಿಂದ ಮತ್ತು ತಂದೆಯಿಂದ ನಷ್ಟ. ವಾಹನ ಬದಲಾವಣೆಯ ಆಲೋಚನೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net