

ಮೇಷ: ಉತ್ತಮ ಹೆಸರು, ಕೀರ್ತಿ, ಮಾನ ಸನ್ಮಾನಗಳು. ದಾಂಪತ್ಯ ಕಲಹ ಉಂಟಾಗುವ ಸಾಧ್ಯತೆ. ಮಕ್ಕಳಿಗೆ ಬೇಸರ. ಅಧಿಕ ಖರ್ಚು. ಶುಭಸಂಖ್ಯೆ: 1
ವೃಷಭ: ಸ್ಥಿರಾಸ್ತಿ ಭಾಗ್ಯ ಒದಗುವುದು. ಧಾರ್ವಿುಕ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲವಿದೆ. ದೊರೆಯುವ ಸಾಲಕ್ಕೆ ಅಡೆತಡೆ. ಶುಭಸಂಖ್ಯೆ: 8
ಮಿಥುನ: ಮಾತಿನಿಂದ ಕಿರಿಕಿರಿ. ಸ್ಥಳ ಮತ್ತು ಉದ್ಯೋಗ ಬದಲಾವಣೆಗೆ ಅನುಕೂಲ. ಬಂಧು ಬಾಂಧವರೊಂದಿಗೆ ಆತ್ಮೀಯತೆ. ಶುಭಸಂಖ್ಯೆ: 7
ಕಟಕ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯವಿದೆ. ಆರ್ಥಿಕವಾಗಿ ಚೇತರಿಕೆ ಕಾಣಲಿದೆ. ಪ್ರಯಾಣದಲ್ಲಿ ಕಿರಿಕಿರಿ ಉಂಟಾಗುವುದು. ಶುಭಸಂಖ್ಯೆ:7
ಸಿಂಹ: ಅಧಿಕ ಖರ್ಚು ಉಂಟಾಗುವುದು. ಸಹೋದರಿಯೊಂದಿಗೆ ವಾಗ್ವಾದ ನಡೆಸುವಿರಿ. ಸಂತಾನ ದೋಷಕ್ಕೆ ಸೂಕ್ತ ಸಲಹೆ. ಶುಭಸಂಖ್ಯೆ: 7
ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ. ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸನ್ನಿವೇಶ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ನೆಮ್ಮದಿ ಭಂಗ. ಶುಭಸಂಖ್ಯೆ: 2
ತುಲಾ: ಆರ್ಥಿಕವಾಗಿ ಅನುಕೂಲ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಬಂಧು ಬಾಂಧವರೊಂದಿಗೆ ಆತ್ಮೀಯತೆಯಿಂದ ಇರುವಿರಿ. ಶುಭಸಂಖ್ಯೆ: 4
ವೃಶ್ಚಿಕ: ಮಕ್ಕಳಿಂದ ಕಿರಿಕಿರಿಯಾದೀತು. ಆರೋಗ್ಯ ಸಮಸ್ಯೆ ಕಾಡುವುದು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಜೀವನದಲ್ಲಿ ಜಿಗುಪ್ಸೆ. ಶುಭಸಂಖ್ಯೆ: 7
ಧನುಸ್ಸು: ತಂದೆಯಿಂದ ಅನುಕೂಲ. ಪ್ರಯಾಣದಲ್ಲಿ ಅನು ಕೂಲಕರ ವಾತಾವರಣ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಕಾಳಜಿ ಅಗತ್ಯ. ಶುಭಸಂಖ್ಯೆ: 3
ಮಕರ: ಹೊಸ ಉದ್ಯೋಗ ಪ್ರಾರಂಭದಿಂದ ತೊಂದರೆ. ಅನಿರೀಕ್ಷಿತವಾಗಿ ನಷ್ಟ ಉಂಟಾಗಬಹುದು. ದಾಂಪತ್ಯ ಕಲಹ. ಶುಭಸಂಖ್ಯೆ: 5
ಕುಂಭ: ಆರ್ಥಿಕ ನಷ್ಟ ಸಾಧ್ಯತೆ, ಎಚ್ಚರ. ಸಂಗಾತಿ ಮತ್ತು ಮಿತ್ರರಿಂದ ಅನುಕೂಲ. ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿಸುವಿರಿ. ಶುಭಸಂಖ್ಯೆ:1
ಮೀನ: ಮಕ್ಕಳಿಂದ ನೋವು. ಅನಾರೋಗ್ಯ ಸಮಸ್ಯೆ. ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟವಾದೀತು. ಗುರು ಮತ್ತು ದೈವನಿಂದನೆ. ಶುಭಸಂಖ್ಯೆ: 9