

ಮೇಷ: ದಾಂಪತ್ಯದಲ್ಲಿ ಸಮಸ್ಯೆಯಾಗಬಹುದು. ವ್ಯಾಪಾರದಲ್ಲಿ ತುಸು ಎಚ್ಚರಿಕೆಯಿಂದ ವ್ಯವಹರಿಸಿ. ಭಾವನೆಗಳಿಂದ ತೊಂದರೆ. ಶುಭಸಂಖ್ಯೆ: 9
ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ. ಬಂಧುಗಳೊಂದಿಗೆ ವೈಮನಸ್ಸು ಸಾಧ್ಯತೆ. ಶುಭ ಫಲಿತಾಂಶಗಳನ್ನು ನೋಡಬಹುದು. ಶುಭಸಂಖ್ಯೆ:1
ಮಿಥುನ: ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳು ಜಾಗ್ರತರಾಗಿರುವುದು ಅಪೇಕ್ಷಣೀಯ. ಸಭೆ ಸಮಾರಂಭಗಳಲ್ಲಿ ಜಾಗ್ರತೆ. ಶುಭಸಂಖ್ಯೆ:5
ಕಟಕ: ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ. ಜಲ ಸಂಬಂಧಿ ವಿಚಾರದಲ್ಲಿ ಜಾಗರೂಕರಾಗಿರಿ. ಕೃಷಿ ಚಟುವಟಿಕೆಯಲ್ಲಿ ತೊಂದರೆ. ಶುಭಸಂಖ್ಯೆ:2
ಸಿಂಹ: ಹೊಸ ವಸ್ತುಗಳ ಖರೀದಿ. ಅಧಿಕವಾದ ಖರ್ಚು. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಗಣ್ಯ ವ್ಯಕ್ತಿಗಳ ಭೇಟಿಯಾಗಿ ಸಂತಸ. ಶುಭಸಂಖ್ಯೆ: 6
ಕನ್ಯಾ: ಆಹಾರದಲ್ಲಿ ವ್ಯತ್ಯಾಸವಾಗಿ ಆರೋಗ್ಯಕ್ಕೆ ತೊಂದರೆ. ವಿದ್ಯಾರ್ಥಿಗಳಿಗೆ ಉತ್ತಮ ದಿನವಲ್ಲ. ಹಣಕಾಸಿನ ವಿಷಯದಲ್ಲಿ ಸಮಸ್ಯೆ. ಶುಭಸಂಖ್ಯೆ: 9
ತುಲಾ: ಚಂಚಲತೆ ನಿಯಂತ್ರಿಸಲು ಯೋಗ, ಧ್ಯಾನದ ಮೊರೆಹೋಗಿ. ವ್ಯಾಪಾರ ಸ್ಥಳದಲ್ಲಿ ಉತ್ತಮ ದಿನ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ. ಶುಭಸಂಖ್ಯೆ:3
ವೃಶ್ಚಿಕ: ಕಾಲಿನ ಸಮಸ್ಯೆ ಕಾಡಬಹುದು. ವೃತ್ತಿಯಲ್ಲಿ ಏರುಪೇರಾದರೂ ಸುಧಾರಿಸಿಕೊಳ್ಳುವಿರಿ. ಓದಿನಲ್ಲಿ ಏಕಾಗ್ರತೆ ಸಾಧಿಸಲು ಯತ್ನಿಸಿ. ಶುಭಸಂಖ್ಯೆ:2
ಧನುಸ್ಸು: ಹಿರಿಯರು ನೀಡುವ ಸಲಹೆ ಸಾಧುವಾಗಿದ್ದರೆ ಸ್ವೀಕರಿಸಿ. ವಾದ ವಿವಾದ ಬೇಡ. ವ್ಯವಹಾರದಲ್ಲಿ ಲಾಭವಿದೆ. ಸಮಾಧಾನದ ದಿನ. ಶುಭಸಂಖ್ಯೆ:6
ಮಕರ: ಅಧಿಕ ಧೈರ್ಯ, ನಂಬಿಕೆಗಳು ನಿಮ್ಮನ್ನು ಕಾಪಾಡುವವು. ವೃತ್ತಿಯಲ್ಲಿ ಅಧಿಕ ಶ್ರಮ ತೀರ ಅಗತ್ಯ. ಕೆಲಸಗಳಲ್ಲಿ ವಿಘ್ನ ಬರಬಹುದು. ಶುಭಸಂಖ್ಯೆ: 1
ಕುಂಭ: ಪರಿಶ್ರಮ ಪಡುವಿರಾದರೂ ಫಲಿತಾಂಶ ಸಮಾಧಾನಕರವಿಲ್ಲ. ಕುಟುಂಬದಲ್ಲಿ ಏರುಪೇರು ಆದೀತು. ಕೆಲಸಗಳಲ್ಲಿ ಅನುಕೂಲ. ಶುಭಸಂಖ್ಯೆ:4
ಮೀನ: ಅಧಿಕ ದುಃಖ ಆಗಬಹುದು. ವಸ್ತುಗಳ ನಷ್ಟ. ಮುಖಭಂಗವಾಗುವ ಮಾತುಗಳಲ್ಲಿ ಎಚ್ಚರಿಕೆ. ವ್ಯವಹಾರದಲ್ಲಿ ಸಾಧಾರಣ ಪ್ರಗತಿ. ಶುಭಸಂಖ್ಯೆ: 8