

ಮೇಷ: ವಾಹನ, ಭೂಮಿಯಿಂದ ಅನುಕೂಲ. ಅನಾರೋಗ್ಯ. ದುಡುಕಿನ ಮಾತಿನಿಂದ ಸಮಸ್ಯೆ. ವಿಪರೀತ ಕೋಪ ಒಳ್ಳೆಯದಲ್ಲ. ಶುಭಸಂಖ್ಯೆ: 1
ವೃಷಭ: ಯಂತ್ರೋಪಕರಣಗಳಿಗೆ ಖರ್ಚು. ಆತುರದ ನಿರ್ಧಾರ ಬೇಡ. ಸಂಗಾತಿಯ ಬೇಜವಾಬ್ದಾರಿ. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ: 9
ಮಿಥುನ: ಕುಟುಂಬಸ್ಥರಿಂದ ವಿರೋಧ. ತಂದೆಯಿಂದ ಅಸಹಕಾರ. ಮಾತಿನಿಂದ ಕಷ್ಟ. ಅನಾರೋಗ್ಯ ಕಾಡುವ ಸಾಧ್ಯತೆ, ಎಚ್ಚರ ವಹಿಸಿ. ಶುಭಸಂಖ್ಯೆ:3
ಕಟಕ: ಉದ್ಯೋಗ ಲಾಭ. ಸ್ನೇಹಿತರಿಂದ ಸಹಕಾರ. ಸ್ತ್ರೀಯರಿಂದ ನೋವು. ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 8
ಸಿಂಹ: ಉದ್ಯೋಗ ಬದಲಾವಣೆಯಿಂದ ಅದೃಷ್ಟ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ತಂದೆಯಿಂದ ಸಹಕಾರ. ಪ್ರಯಾಣದಲ್ಲಿ ತೊಂದರೆ. ಶುಭಸಂಖ್ಯೆ: 4
ಕನ್ಯಾ: ಸೋಲು, ನಷ್ಟ, ನಿರಾಸೆ. ಅನಗತ್ಯ ತಿರುಗಾಟ. ಮಿತ್ರರಿಂದ ಭಾವನೆಗೆ ಪೆಟ್ಟು. ಅನಾರೋಗ್ಯ. ಪತ್ರ ವ್ಯವಹಾರಗಳಲ್ಲಿ ಅನುಕೂಲ. ಶುಭಸಂಖ್ಯೆ: 7
ತುಲಾ: ಅನಿರೀಕ್ಷಿತ ಧನಾಗಮನ. ಸಂಗಾತಿಯಿಂದ ನೆರವು. ಪಾಲುದಾರಿಕೆಯಲ್ಲಿ ಬೇಸರ. ಬೆಂಕಿ, ಯಂತ್ರ, ವಾಹನದಿಂದ ಜಾಗ್ರತೆ. ಶುಭಸಂಖ್ಯೆ: 9
ವೃಶ್ಚಿಕ: ದಾಂಪತ್ಯದಲ್ಲಿ ವಿರಸ. ಶತ್ರುಗಳು ಮತ್ತು ಸಾಲದಿಂದ ಗಾಬರಿ. ಅನಾರೋಗ್ಯ. ಪ್ರಯಾಣದಲ್ಲಿ ಗೊಂದಲದ ಸಾಧ್ಯತೆ. ಶುಭಸಂಖ್ಯೆ: 7
ಧನುಸ್ಸು: ಶತ್ರು ದಮನ. ಮಕ್ಕಳಿಂದ ಅನುಕೂಲ. ಉದ್ಯೋಗ ಲಾಭ. ಯಂತ್ರೋಪಕರಣ, ವಾಹನಗಳಿಂದ ನಷ್ಟ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 5
ಮಕರ: ಸ್ಥಿರಾಸ್ತಿಯಿಂದ ಶುಭ. ದೂರದ ವ್ಯಕ್ತಿಯಿಂದ ನೆರವು. ತಾಯಿಯ ಆಶೀರ್ವಾದ. ಪ್ರೇಮದ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 3
ಕುಂಭ: ದಾಯಾದಿಗಳಿಂದ ಕಿರಿಕಿರಿ. ಸ್ಥಿರಾಸ್ತಿ, ವಾಹನ ಲಾಭ. ಮಹಿಳೆಯರಿಂದ ಅನುಕೂಲ. ನೆರೆಹೊರೆಯವರಿಂದ ಒತ್ತಡ. ಶುಭಸಂಖ್ಯೆ: 2
ಮೀನ: ಆರ್ಥಿಕ ಪ್ರಗತಿ. ಉದ್ಯೋಗ ಬದಲಾವಣೆ ಅವಕಾಶ. ಮಹಿಳೆಯರಿಂದ ತೊಂದರೆಯ ಆತಂಕ. ವಿದ್ಯಾಭ್ಯಾಸದಲ್ಲಿ ಗೊಂದಲ. ಶುಭಸಂಖ್ಯೆ: 9