

ಮೇಷ: ಧಮೋಚಿತವಾದ ನಡೆಯಿಂದಾಗಿ ನಿಮಗೆ ಎದುರಾಗಬಹá-ದಾದ ದೊಡ್ಡ ಸಮಸ್ಯೆಗೆ ಪರಿಹಾರ ಲಭ್ಯವಾಗಲಿದೆ. ಶುಭಸಂಖ್ಯೆ: 6
ವೃಷಭ: ಭೂವ್ಯವಹಾರಗಳಿಗೆ ಸಂಬಂಧಿಸಿದ ದಲ್ಲಾಳಿಗಳಿಗೆ ವಿಶೇಷ ಲಾಭ ಉಂಟಾಗಲಿದೆ. ಆದರೆ ಅತಿಯಾಸೆ ಬೇಡ. ಶುಭಸಂಖ್ಯೆ: 4
ಮಿಥುನ: ಷೇರು, ಬೆಟ್ಟಿಂಗ್, ಜೂಜಿನಂತಹ ವ್ಯವಹಾರ ಖಂಡಿತವಾಗಿಯೂ ಬೇಡ. ಹೆಚ್ಚಿನ ಧನಹಾನಿ ಉಂಟಾಗುವ ಸಂಭವವಿದೆ. ಶುಭಸಂಖ್ಯೆ: 9
ಕಟಕ: ಮನೆಯ ಸದಸ್ಯರ ಜತೆಯಲ್ಲಿ ಮನಸ್ತಾಪ ಉಂಟಾಗಬಹುದು. ಒರಟು ಮಾತುಗಳನ್ನು ಮಾತ್ರ ಆಡಲು ಹೋಗದಿರಿ. ಶುಭಸಂಖ್ಯೆ: 6
ಸಿಂಹ: ಅಪಾರವಾದ ತಾಳ್ಮೆ ಹಾಗೂ ಕುಶಲ ತಂತ್ರಗಾರಿಕೆಯಿಂದ ವೃತ್ತಿರಂಗದಲ್ಲಿ ಯಶಸ್ಸಿನ ಕಡೆಗೆ ಸಾಗಲಿದ್ದೀರಿ. ಶುಭಸಂಖ್ಯೆ: 3
ಕನ್ಯಾ: ಅವಿವಾಹಿತರಿಗೆ ಪ್ರೇಮದ ಹಾದಿಯೊಂದು ತೆರೆದುಕೊಳ್ಳಬಹುದು. ಆದರೂ ಎಚ್ಚರ ಅಗತ್ಯ. ಆತುರದಿಂದ ಅಶಾಂತಿಯಿದೆ. ಶುಭಸಂಖ್ಯೆ: 5
ತುಲಾ: ಕುಟುಂಬದಲ್ಲಿ ಸಮಾಧಾನದ ವಾತಾವರಣ ಇರಲಿದೆ. ಕಿರಿಕಿರಿಯ ಸಂಬಂಧಿಕರಿಂದ ಸ್ವಲ್ಪ ದೂರವೇ ಇರಿ. ಶುಭಸಂಖ್ಯೆ: 9
ವೃಶ್ಚಿಕ: ಸಹೋದ್ಯೋಗಿಗಳು ಅಸಮಾಧಾನ ಮೂಡಿಸಬಹುದು. ಹೆಚ್ಚು ಮಾತಾಡದಿದ್ದರೆ ಸಮಸ್ಯೆ ಕೊನೆಯಾಗಲಿದೆ. ಶುಭಸಂಖ್ಯೆ: 2
ಧನುಸ್ಸು: ಸಮಸ್ಯೆಯ ಮೂಲಕ್ಕೇ ತಲುಪಿ ಪರಿಹಾರ ಹುಡುಕುವಿರಿ. ಇದಕ್ಕೆ ಮೇಲಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಶುಭಸಂಖ್ಯೆ: 4
ಕುಂಭ: ಧ್ಯಾನ, ಯೋಗಾಭ್ಯಾಸಗಳಿಂದ ಅಲೌಕಿಕ ಚೈತನ್ಯ ಲಭ್ಯವಾಗಲಿದೆ. ಮಾನಸಿಕವಾದ ಒತ್ತಡಗಳೂ ದೂರವಾಗಲಿವೆ. ಶುಭಸಂಖ್ಯೆ: 8
ಮಕರ: ದೂರಪ್ರಯಾಣದ ಅವಕಾಶ ಬರಬಹುದು. ಒತ್ತಾಯಕ್ಕೆ ಕಟ್ಟುಬೀಳದೆ ಯೋಚಿಸಿ ತೀರ್ವನಿಸಿದರೆ ಉತ್ತಮ. ಶುಭಸಂಖ್ಯೆ: 1
ಮೀನ: ಅನೇಕ ಅಡೆತಡೆಗಳ ಮಧ್ಯೆ ರಾಜಕಾರಣಿಗಳಿಗೆ ಜಯದ ಸಂತಸ ದೊರಕಲಿದೆ. ಸಂಗೀತಕ್ಷೇತ್ರದ ಸಾಧಕರಿಗೆ ಮನ್ನಣೆಯಿದೆ. ಶುಭಸಂಖ್ಯೆ: 7