

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ
ಮೇಷ: ವ್ಯಾಪಾರದ ಸಕಾರಾತ್ಮಕ ಬದಲಾವಣೆ ಹೊಸ ಅವಕಾಶವನ್ನು ನೀಡುತ್ತವೆ. ಉದ್ವಿಗ್ನತೆ ಸಾಧ್ಯತೆ. ನಿಮ್ಮ ಕೆಲಸಕ್ಕೆ ಪ್ರಶಂಸೆ. ಶುಭಸಂಖ್ಯೆ: 9
ವೃಷಭ: ಅನವಶ್ಯಕ ಖರ್ಚನ್ನು ತಪ್ಪಿಸಿ. ಯಾವುದೇ ವಿವಾದಗಳಿಂದ ದೂರವಿರಿ. ನಿಮ್ಮ ಪ್ರತಿಭೆ ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಶುಭಸಂಖ್ಯೆ: 2
ಮಿಥುನ: ನಿಮ್ಮ ಸಹೋದರರೊಂದಿಗೆ ಸಂಬಂಧ ಸುಧಾರಿಸುತ್ತದೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ಆತ್ಮೀಯರ ಆಗಮನ. ಶುಭಸಂಖ್ಯೆ: 3
ಕಟಕ: ಸಹೋದ್ಯೋಗಿಗಳು ಸಹಕರಿಸುತ್ತಾರೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ಕೊಡುವ ಘಟನೆ. ಪಾಲುದಾರಿಕೆ ವ್ಯಾಪಾರಕ್ಕೆ ನಿರ್ಧಾರ. ಶುಭಸಂಖ್ಯೆ: 3
ಸಿಂಹ: ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 1
ಕನ್ಯಾ: ಪಾಲುದಾರರೊಂದಿಗೆ ಮನಸ್ತಾಪವಾಗಬಹುದು ನಿರುದ್ಯೋಗಿಗಳಿಗೆ ಉದ್ಯೋಗ ಸಾಧ್ಯತೆ. ಹೊಸ ಸ್ನೇಹಿತರು ಸಿಗುವರು. ಶುಭಸಂಖ್ಯೆ: 7
ತುಲಾ: ಶಿಕ್ಷಕರಿಗೆ ವಿಶೇಷ ಮನ್ನಣೆ. ಸಮರ್ಪಣಾ ಭಾವದಿಂದ ಕರ್ತವ್ಯನಿರ್ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಶುಭಸಂಖ್ಯೆ: 2
ವೃಶ್ಚಿಕ: ಕಚೇರಿಯಲ್ಲಿ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ಅನಗತ್ಯ ತಿರುಗಾಟದಿಂದ ಆಯಾಸ. ಉದ್ಯೋಗ ಬದಲಾವಣೆಯ ಸಾಧ್ಯತೆ. ಶುಭಸಂಖ್ಯೆ: 8
ಧನು: ಅಸಾಧ್ಯವಾದುದನ್ನು ಸಾಧಿಸಿದ ತೃಪ್ತಿ. ಸಜ್ಜನರೊಂದಿಗೆ ಸಂವಹನದಿಂದ ನೆಮ್ಮದಿ. ಧಾರ್ವಿುಕ ಕಾರ್ಯದಲ್ಲಿ ವಿಶೇಷ ಆಸಕ್ತಿ. ಶುಭಸಂಖ್ಯೆ: 4
ಮಕರ: ವಿವಾದಗಳಿಂದ ದೂರವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಸ್ತಿ ಲಾಭ ಸಾಧ್ಯತೆ. ತಡವಾಗಿಯಾದರೂ ಪ್ರತಿಫಲ. ಶುಭಸಂಖ್ಯೆ: 3
ಕುಂಭ: ಸ್ನೇಹಿತರೊಂದಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಕೆಲವು ಅಡೆತಡೆಗಳು. ಸಂಗಾತಿಗೆ ಬಡ್ತಿ. ನಿರುದ್ಯೋಗಿಗಳಿಗೆ ಅವಕಾಶಗಳು. ಶುಭ ಸಂಖ್ಯೆ 7
ಮೀನ: ಸಹೋದ್ಯೋಗಿಗಳೊಂದಿಗೆ ವಿವಾದದಿಂದ ತೊಂದರೆ. ನಿಮ್ಮ ಕೆಲಸದ ಕೌಶಲದಿಂದ ಕಾರ್ಯಸಿದ್ಧಿ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 9