ಈ ರಾಶಿಯವರಿಗಿಂದು ಶ್ರಮಕ್ಕೆ ತಕ್ಕ ಫಲ ಸಿಗುವುದು, ಹಣಕಾಸಿನ ಪರಿಸ್ಥಿತಿ ಉತ್ತಮ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಬೇರೆಯವರ ಮಾತಿಗೆ ಮರುಳಾಗದಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭವಾಗುವುದು. ಹಿರಿಯರ ಮಾತನ್ನು ಗೌರವಿಸಿ. ಶುಭಸಂಖ್ಯೆ: 6

ವೃಷಭ: ಆಸ್ತಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ. ವಿವಾಹ ಯೋಗ. ದಾಂಪತ್ಯದಲ್ಲಿ ಪ್ರೀತಿ. ದಾನ ಧರ್ಮದಲ್ಲಿ ಆಸಕ್ತಿ. ದುರಾಲೋಚನೆ. ಶುಭಸಂಖ್ಯೆ: 8

ಮಿಥುನ: ವಿದ್ಯಾಭ್ಯಾಸದಲ್ಲಿ ಮುನ್ನಡೆ. ಸ್ತ್ರೀಯರಿಗೆ ಶುಭ. ಹಿತ ಶತ್ರುಗಳಿಂದ ತೊಂದರೆ. ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ:9

ಕಟಕ: ಅನವಶ್ಯಕ ದ್ವೇಷ ಸಾಧನೆ. ಮಿತ್ರರಲ್ಲಿ ಕಲಹ. ಮಕ್ಕಳಿಂದ ನೋವು. ಅಲ್ಪ ಕಾರ್ಯಸಿದ್ಧಿಯಾಗು ವುದು. ಉದ್ಯೋಗದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 3

ಸಿಂಹ: ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಅತಿಯಾದ ಒತ್ತಡ. ಇಲ್ಲ ಸಲ್ಲದ ಅಪವಾದ. ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧರಿಸಿ. ಶುಭಸಂಖ್ಯೆ:7

ಕನ್ಯಾ: ಮನೆಯಲ್ಲಿ ಶುಭಕಾರ್ಯ. ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಹಣಕಾಸಿನ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ:1

ತುಲಾ: ಪ್ರಿಯ ಜನರ ಭೇಟಿ ಮಾಡುವಿರಿ. ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಮನಶ್ಶಾಂತಿ. ವಾಹನ ಖರೀದಿ ಯೋಗ. ಶುಭಸಂಖ್ಯೆ: 6

ವೃಶ್ಚಿಕ: ಮಾನಸಿಕ ಒತ್ತಡ ಎದುರಿಸುವಿರಿ. ವಿರೋಧಿಗಳಿಂದ ತೊಂದರೆಯಾದೀತು. ಅಕಾಲ ಭೋಜನ. ಆಲಸ್ಯ ಮನೋಭಾವ. ಶುಭಸಂಖ್ಯೆ: 9

ಧನುಸ್ಸು: ಹಣಕಾಸಿನ ಸಮಸ್ಯೆ. ಕುಟುಂಬದಲ್ಲಿ ಪ್ರೀತಿ. ಅಧಿಕಾರಿಗಳಿಂದ ಪ್ರಶಂಸೆ. ಅನಿರೀಕ್ಷಿತ ಲಾಭ. ತೀರ್ಥಯಾತ್ರೆ, ದೇವರ ದರ್ಶನ. ಶುಭಸಂಖ್ಯೆ: 2

ಮಕರ: ಸ್ಥಳ ಬದಲಾವಣೆ ಸಾಧ್ಯತೆ. ಮಾತಿನ ಚಕಮಕಿ. ಋಣಬಾಧೆ. ಮನಕ್ಲೇಷ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಸುಖ ಭೋಜನ. ಶುಭಸಂಖ್ಯೆ:8

ಕುಂಭ: ಅನವಶ್ಯಕ ಖರ್ಚಿಗೆ ನೂರಾರು ದಾರಿ. ದೂರ ಪ್ರಯಾಣ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 3

ಮೀನ: ಹಣ ಬಂದರೂ ಉಳಿಯುವುದಿಲ್ಲ. ಮಹಿಳೆಯರಿಗೆ ಶುಭದಾಯಕ ದಿನ. ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಬರುವುದು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net