ಆಧಾರ್ ಆನ್​ಲೈನ್​​ ಉಚಿತ ಅಪ್​ಡೇಟ್​​ಗೆ ನಾಳೆಯೇ ಕಡೇ ದಿನ: ಇಲ್ಲಿದೆ ಮಾಹಿತಿ..

Aadhaar
Published on

ಬೆಂಗಳೂರು: ಆಧಾರ್​ಗೆ ಸಂಬಂಧಿತ ಮಾಹಿತಿ ಅಪ್​ಲೋಡ್​ ಮಾಡಿಕೊಳ್ಳಲು ಆನ್​ಲೈನ್​ನಲ್ಲಿ ಉಚಿತವಾಗಿ ಅವಕಾಶ ಕಲ್ಪಿಸಲಾಗಿದ್ದು, ನಾಳೆಯೇ ಅದು ಕೊನೆಗೊಳ್ಳಲಿದೆ. ಅರ್ಥಾತ್, ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್​ ಅಪ್​ಡೇಟ್​ ಮಾಡಿಕೊಳ್ಳಲು ನಾಳೆಯವರೆಗೂ ಅವಕಾಶವಿದೆ.

ನೀವು ಆಧಾರ್​ ಸಂಖ್ಯೆ ಪಡೆದು ಹತ್ತು ವರ್ಷಗಳಾಗಿದ್ದಲ್ಲಿ ಹಾಗೂ ಇದುವರೆಗೂ ಯಾವುದೇ ಮಾಹಿತಿ ಅಪ್​ಡೇಟ್ ಮಾಡಿಕೊಂಡಿರದಿದ್ದಲ್ಲಿ ಈ ಅವಕಾಶವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಅಂದಹಾಗೆ ಇದು ಡೆಮೊಗ್ರಫಿಕ್​ ಡೇಟಾಗಷ್ಟೇ ಸೀಮಿತವಾಗಿರಲಿದೆ ಎಂದು ಯುಐಡಿಎಐ ತಿಳಿಸಿದೆ.

ಈ ಅಪ್​ಡೇಟ್​ಗೆ ಆಧಾರ್​ ಗ್ರಾಹಕ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸಲಾಗುತ್ತಿದೆ. ಆದರೆ ಆನ್​ಲೈನ್​ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವಿದ್ದು, ಈ ಕೊಡುಗೆ ನಾಳೆಯೇ ಕೊನೆಗೊಳ್ಳಲಿದೆ. ಹತ್ತು ವರ್ಷಗಳ ಹಿಂದೆ ಆಧಾರ್​ ಪಡೆದವರು ತಮ್ಮ ಇತ್ತೀಚಿಗಿನ ಗುರುತು, ವಾಸದ ವಿಳಾಸ ಇತ್ಯಾದಿ ಮಾಹಿತಿಗಳನ್ನು ಜೂ. 14ರ ಒಳಗೆ ಉಚಿತವಾಗಿ ಅಪ್​​ಡೇಟ್ ಮಾಡಿಕೊಳ್ಳಬಹುದು.

ಅಲ್ಲದೆ ಡೆಮೊಗ್ರಫಿಕ್ ಡೇಟಾ ಅಂದರೆ, ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ, ಮೊಬೈಲ್​ಫೋನ್​ ನಂಬರ್, ಇ-ಮೇಲ್ ಐಡಿ ವಿವರಗಳನ್ನು ಅಪ್​ಡೇಟ್ ಮಾಡಿಕೊಳ್ಳಬಹುದು.

ಆನ್​ಲೈನ್​ನಲ್ಲಿ ಉಚಿತವಾಗಿ ಅಪ್​ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net