

ಮೇಷ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತದೆ. ಕಾರ್ಯ ಸಾಧನೆಗಾಗಿ ತಿರುಗಾಟ. ದೇವತಾ ಕಾರ್ಯಗಳಲ್ಲಿ ಭಾಗಿ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 8
ವೃಷಭ: ಅಧಿಕಾರಿಗಳಿಂದ ಪ್ರಶಂಸೆ. ಕೋರ್ಟು ವ್ಯವಹಾರ ಗಳಲ್ಲಿ ಜಯ. ಮಿತ್ರರಿಂದ ವಂಚನೆಯಾಗುವ ಸಾಧ್ಯತೆ ಇದೆ, ಎಚ್ಚರದಿಂದಿರಿ. ಶುಭಸಂಖ್ಯೆ: 6
ಮಿಥುನ: ಸ್ತ್ರೀಯರು ತಾಳ್ಮೆಯಿಂದ ಇರುವುದು ಒಳ್ಳೆಯದು. ಮಗನಿಂದ ಶುಭ ವಾರ್ತೆ ಕೇಳುವಿರಿ. ಪರಾಕ್ರಮದ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ:7
ಕಟಕ: ಅಪರಿಚಿತರ ವಿಷಯದಲ್ಲಿ ಜಾಗ್ರತೆಯಿಂದಿರಿ. ವಿದ್ಯಾರ್ಥಿಗಳಲ್ಲಿ ಗೊಂದಲ ತಲೆದೋರಬಹುದು. ಕ್ರಯ ವಿಕ್ರಯಗಳಲ್ಲಿ ಲಾಭ. ಶುಭಸಂಖ್ಯೆ:4
ಸಿಂಹ: ವಿವಿಧ ಮೂಲಗಳಿಂದ ಧನ ಲಾಭ. ವೈರಿಗಳಿಂದ ದೂರವಿರಿ. ಮನಃಶಾಂತಿ. ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯ. ಕುಟುಂಬ ಸೌಖ್ಯ. ಕೃಷಿಯಲ್ಲಿ ಲಾಭ. ವಿಪರೀತ ಕೋಪ. ನಾನಾ ರೀತಿಯ ಸಂಕಷ್ಟ ಎದುರಾಗಲಿದೆ. ಶುಭಸಂಖ್ಯೆ: 6
ತುಲಾ: ಅಧಿಕ ಕೆಲಸದಿಂದ ವಿಶ್ರಾಂತಿ ಸಿಗಲಿದೆ. ವಸ್ತ್ರ ವ್ಯಾಪಾರಿಗಳಿಗೆ ಲಾಭವಿದೆ. ಬಡರೋಗಿಗಳಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಶುಭಸಂಖ್ಯೆ: 3
ವೃಶ್ಚಿಕ: ಹಿತೈಷಿಗಳ ಸಲಹೆ ಪಡೆಯಿರಿ. ಹಣಕಾಸಿನ ಸಮಸ್ಯೆ ಕಾಡುವುದು. ಸಲ್ಲದ ಅಪವಾದ ಬರುವುದು. ಗೆಳೆಯರೊಂದಿಗೆ ಮೈಮನಸ್ಸು. ಶುಭಸಂಖ್ಯೆ: 8
ಧನುಸ್ಸು: ಯಂತ್ರೋಪಕರಣಗಳಿಂದ ಲಾಭ ಬರಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಕಾರ್ಯಸಿದ್ಧಿ. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 2
ಮಕರ: ಅತಿಯಾದ ದೇಹಾಲಸ್ಯ. ಆಸ್ತಿ ಸಂಬಂಧಿತ ಹಣ ಕೈಸೇರುವುದು. ಸುಖ ಭೋಜನ ಮಾಡುವಿರಿ. ಷೇರು ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ: 5
ಕುಂಭ: ಹಣ ಬಂದರೂ ಉಳಿಯುವುದಿಲ್ಲ. ಸ್ತ್ರೀಯರಿಂದ ನಿರೀಕ್ಷಿತ ಸಹಾಯ ಲಭ್ಯ. ಅಮೂಲ್ಯ ವಸ್ತು ಕಳ್ಳತನ. ಚಂಚಲ ಸ್ವಭಾವ. ಶುಭಸಂಖ್ಯೆ:1
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿಯಿಂದ ಬೇಸರ. ಕೃಷಿಯಲ್ಲಿ ಲಾಭವಿದೆ. ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 9