ಈ ರಾಶಿಯವರಿಗಿಂದು ಬದುಕಿನ ಪಾಠಗಳನ್ನು ಕಲಿತುಕೊಳ್ಳುವ ಸಂದರ್ಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹೆಸರಿಗೆ ಸಹಜವಾದ ಬಹುವಿಧ ಆಸಕ್ತಿ. ಉದ್ಯೋಗ ದಲ್ಲಿ ಹೊಸಬರಿಗೆ ಕೆಲಸ ಕಲಿಸುವ ಹೊಣೆಗಾರಿಕೆ. ಇನ್ನೊಂದು ಜವಾಬ್ದಾರಿ. ಶುಭಸಂಖ್ಯೆ: 5

ವೃಷಭ: ಮುಂಗೋಪದ ಪ್ರವೃತ್ತಿಗೆ ಕಡಿವಾಣ ಹಾಕಿಕೊಳ್ಳಿ. ಸಹೋದ್ಯೋಗಿಗಳಿಂದ ಮೆಚ್ಚುಗೆ. ಸಂಗಾತಿಯ ಕಡೆಯಿಂದ ಶುಭ ವಾರ್ತೆ. ಶುಭಸಂಖ್ಯೆ: 3

ಮಿಥುನ: ಜಪ, ಧೈರ್ಯ, ಸ್ಥೈರ್ಯ ವೃದ್ಧಿ. ಗೌರವ ಪ್ರಾಪ್ತಿ. ಸ್ವಂತ ಉದ್ಯಮ ಹಂತಹಂತವಾಗಿ ಅಭಿವೃದ್ಧಿ. ಹಳೆಯ ಮಿತ್ರನಿಂದ ಸಹಾಯ. ಶುಭಸಂಖ್ಯೆ: 7

ಕಟಕ: ದೇಹಾರೋಗ್ಯವನ್ನು ಕಾಪಾಡಿಕೊಳ್ಳುವತ್ತ ಲಕ್ಷ್ಯವಿರಲಿ. ಹಿತಶತ್ರುಗಳ ಬಗೆಗೆ ಎಚ್ಚರವಿರಲಿ. ಸ್ವಂತ ಉದ್ಯಮಕ್ಕೆ ಪೈಪೋಟಿ ಜಾಸ್ತಿ. ಶುಭಸಂಖ್ಯೆ: 7

ಸಿಂಹ: ಸಮರ್ಪಣಾ ಭಾವದಿಂದ ಸಮಾಜಸೇವೆ ಮಾಡಿ. ಉದ್ಯೋಗದಲ್ಲಿ ಕೀರ್ತಿ. ಉದ್ಯಮಕ್ಕೆ ಎದುರಾದ ಸಮಸ್ಯೆಗಳ ನಿವಾರಣೆ. ಶುಭಸಂಖ್ಯೆ: 6

ಕನ್ಯಾ: ಆತ್ಮಬಲ ವೃದ್ಧಿಗೆ ಯತ್ನಿಸಿ. ಕಚೇರಿಯಲ್ಲಿ ಅನು ಕೂಲದ ವಾತಾವರಣ. ಯಂತ್ರೋಪಕರಣ ಉದ್ಯಮಿ ಗೆಳೆಯನ ಅನಿರೀಕ್ಷಿತ ಭೇಟಿ. ಶುಭಸಂಖ್ಯೆ: 7

ತುಲಾ: ಬಹಳ ದಿನಗಳ ಆಸೆ ನೆರವೇರಿ ಸಂತಸ. ಪ್ರತಿಭೆಗೆ ಪುರಸ್ಕಾರ. ಪ್ರಾರ್ಥ ನೆಯಿಂದ ಅನುಕೂಲ. ಮಕ್ಕಳ ಭವಿಷ್ಯದ ಚಿಂತನೆ. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗ ನಿರ್ವಹಣೆಯಲ್ಲಿ ನಿರಾಸಕ್ತಿ. ಸರ್ಕಾರಿ ಉದ್ಯೋಗಿಗಳಿಗೆ ಆನಂದ. ವಾಹನ ಬಿಡಿಭಾಗ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 8

ಧನುಸ್ಸು: ಅಂತ್ಯವಿಲ್ಲದ ಶ್ರಮ. ಸಂಗಾತಿಯ ಆರೋಗ್ಯ ಸುಧಾರಣೆ. ಸಹೋದ್ಯೋಗಿಗಳಿಂದ ಸಹಾಯ. ತಾಯಿಯ ಬಂಧುಗಳ ಭೇಟಿ. ಶುಭಸಂಖ್ಯೆ: 5

ಮಕರ: ಬದುಕಿನ ಪಾಠಗಳನ್ನು ಕಲಿತುಕೊಳ್ಳುವ ಸಂದರ್ಭ. ಹೊಸಬರ ಪರಿಚಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಶುಭಸಂಖ್ಯೆ: 4

ಕುಂಭ: ಮಿಶ್ರಫಲಗಳ ದಿನ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಕೆಲಸದ ಭಾರ ಹೆಚ್ಚಳ. ಕೃಷಿ ಭೂಮಿ ವಿಸ್ತರಣೆಗೆ ಯೋಜನೆ. ಶುಭಸಂಖ್ಯೆ: 7

ಮೀನ: ಉದ್ಯೋಗದಲ್ಲಿ ಸಂತೃಪ್ತಿ. ನಿರೀಕ್ಷಿತ ವ್ಯಕ್ತಿಗಳಿಂದ ಸಕಾರಾತ್ಮಕ ಸ್ಪಂದನೆ. ಕಾರ್ಯಗಳ ನೆರವೇರಿಕೆ. ಸಣ್ಣ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net