

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ. ಮಕ್ಕಳಿಗಾಗಿ ಅಧಿಕ ಖರ್ಚು ಮಾಡಬೇಕಾಗುವುದು. ಶುಭಸಂಖ್ಯೆ: 9
ವೃಷಭ: ಆರ್ಥಿಕ ನಷ್ಟ. ಸಾಲದ ಚಿಂತೆ. ಪಾಲುದಾರಿಕೆಯಲ್ಲಿ ನಷ್ಟ, ಇಷ್ಟದೇವರ ಸ್ಮರಣೆ ಮಾಡಿ. ಎದೆಗುಂದದೇ ಪರಿಹಾರ ಯೋಚಿಸಿ. ಶುಭಸಂಖ್ಯೆ: 1
ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ಬಂಧುಗಳಿಂದ ಸಹಾಯ ದೊರೆತು ನಿರಾಳವೆನಿ ಸುವುದು. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 5
ಕಟಕ: ಮಾನಸಿಕ ಅಸಮತೋಲನದಿಂದ ಸಮಸ್ಯೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆತಂಕ. ಆರ್ಥಿಕ ಸಂಕಷ್ಟ ಕಾಡುವುದು. ಶುಭಸಂಖ್ಯೆ: 8
ಸಿಂಹ: ಬಂಧು-ಬಾಂಧವರು ದೂರವಾಗುವರು. ದೈಹಿಕ ಅಸಮರ್ಥತೆಯಿಂದ ಬೇಸರ. ಆತ್ಮವಿಶ್ವಾಸದಿಂದ ಜಯ ನಿಮ್ಮಪಾಲಿಗಿದೆ. ಶುಭಸಂಖ್ಯೆ: 2
ಕನ್ಯಾ: ಮಾತಿನಿಂದ ಸಮಸ್ಯೆಯಾದೀತು, ಸಾರಾಸಾರ ಯೋಚನೆ ಮಾಡಿ ವ್ಯವಹರಿಸಿ. ಪ್ರಯಾಣದಲ್ಲಿ ಸಮಸ್ಯೆ. ಭವಿಷ್ಯದ ಚಿಂತೆಗಳು. ಶುಭಸಂಖ್ಯೆ: 4
ತುಲಾ: ವ್ಯವಹಾರದಲ್ಲಿ ಹಿನ್ನಡೆ. ಅಪಕೀರ್ತಿ ಬರಬಹುದು. ಅಧಿಕಾರಿಗಳಿಂದ ಭರವಸೆ. ಕುಲದೇವರನ್ನು ಭಕ್ತಿಯಿಂದ ಪೂಜಿಸಿ. ಶುಭಸಂಖ್ಯೆ: 4
ವೃಶ್ಚಿಕ: ಗೆಲುವು ಸಾಧಿಸುವ ಛಲ ಬಿಡಬೇಡಿ. ಯಶವಿದೆ. ಸಂಗಾತಿಯಿಂದ ಲಾಭವಿದೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ. ಶುಭಸಂಖ್ಯೆ: 6
ಧನುಸ್ಸು: ಪ್ರಯಾಣದಲ್ಲಿ ನೀವೆಣಿಸಿದಂತೆ ಜರುಗುವುದು. ತಂದೆಯಿಂದ ಸಹಕಾರ. ಆಹಾರಕ್ರಮದಲ್ಲಿ ಕಾಳಜಿವಹಿಸುವುದು ತೀರ ಅಗತ್ಯ. ಶುಭಸಂಖ್ಯೆ: 9
ಮಕರ: ಬಾಲಗ್ರಹ ದೋಷ ಕಾಡಬಹುದು. ಅನಿರೀಕ್ಷಿತ ಆಪತ್ತು ಮತ್ತು ಉದ್ಯೋಗ ನಷ್ಟ. ದುಶ್ಚಟಗಳಿಂದ ಸಮಸ್ಯೆಗಳು ಉಂಟಾಗುವವು. ಶುಭಸಂಖ್ಯೆ: 7
ಕುಂಭ: ಸ್ಥಿರಾಸ್ತಿಯಿಂದ ನಷ್ಟವಾಗುವುದು. ಮಾನಸಿಕವಾದ ದೌರ್ಬಲ್ಯ ಕಾಡಲಿದೆ. ಕೃಷಿಕರಿಗೆ ಅನನುಕೂಲ. ಇಷ್ಟ ದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 3
ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ. ದುರ್ವಾರ್ತೆ ಕೇಳುವಿರಿ. ಕಾರ್ಯಗಳಲ್ಲಿ ಸೋಲು. ಕುಲದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 4