

ಮೇಷ: ಒರಟುತನ ಬೇಡ, ನಿಯಂತ್ರಿಸಿಕೊಳ್ಳಿ. ಅನಿರೀಕ್ಷಿತವಾಗಿ ಧನಲಾಭವಾಗಲಿದೆ, ಆದಾಯಕ್ಕಿಂತ ಖರ್ಚು ಹೆಚ್ಚು, ಕಾಳಜಿ ವಹಿಸಿ. ಶುಭಸಂಖ್ಯೆ: 9
ವೃಷಭ: ಅನಾರೋಗ್ಯದ ಭಯ ಕಾಡಬಹುದು, ವೈದ್ಯರಿಂದ ಸಲಹೆ ಪಡೆಯಿರಿ. ವಿದ್ಯಾರ್ಥಿಗಳಿಗೆ ಪ್ರಗತಿ. ವಸ್ತ್ರಾಭರಣ ಖರೀದಿ ಯೋಗ. ಶುಭಸಂಖ್ಯೆ:1
ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ ಕಾಣಿಸೀತು. ಮನೆಗೆ ಬಂಧುಗಳ ಆಗಮನದಿಂದ ಸಂತಸ, ವ್ಯಾಪಾರಸ್ಥರಿಗೆ ಲಾಭದಾಯಕ. ಶುಭಸಂಖ್ಯೆ: 7
ಕಟಕ: ವ್ಯರ್ಥ ಕಾಲಹರಣ ಮಾಡಬೇಡಿ. ಮಕ್ಕಳ ವಿಚಾರದಲ್ಲಿ ಗಮನವಿರಲಿ. ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವುದು ಅನಿವಾರ್ಯ. ಶುಭಸಂಖ್ಯೆ: 5
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಶುಭಸಂಖ್ಯೆ: 7
ಕನ್ಯಾ: ಅಧಿಕಾರಿಗಳಿಂದ ಕಿರುಕುಳ. ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಹುಷಾರಾಗಿರಿ. ಕೈಗೊಂಡ ಯೋಜನೆಗಳಲ್ಲಿ ಲಾಭ ಬರಲಿದೆ. ಶುಭಸಂಖ್ಯೆ: 3
ತುಲಾ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಪ್ರಯಾಣದಲ್ಲಿ ತೊಂದರೆಯಾದೀತು, ಜಾಗೃತರಾಗಿರಿ. ಶುಭಸಂಖ್ಯೆ: 6
ವೃಶ್ಚಿಕ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಾರೋಗ್ಯದ ಭಯ ಉಂಟಾಗಬಹುದು. ಅನವಶ್ಯಕ ಕದನ ಸಂಭವ, ಎಚ್ಚರದಿಂದಿರಿ. ಶುಭಸಂಖ್ಯೆ: 3
ಧನುಸ್ಸು: ತೀರ್ಥಯಾತ್ರೆಯ ಯೋಗವಿದೆ. ಭೂವಿವಾದಗಳು ಪೂರ್ಣಗೊಂಡು ಮಾನಸಿಕ ನೆಮ್ಮದಿ. ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು. ಶುಭಸಂಖ್ಯೆ: 3
ಮಕರ: ಅನಗತ್ಯ ಖರ್ಚು ವೆಚ್ಚ ಉಂಟಾಗಬಹುದು. ಹಿರಿಯರ ಆರೋಗ್ಯದತ್ತ ವಿಶೇಷ ಗಮನ ಅಗತ್ಯ. ಕಷ್ಟ ಪಟ್ಟಿದ್ದಕ್ಕೆ ಫಲ ಸಿಗುತ್ತದೆ. ಶುಭಸಂಖ್ಯೆ: 2
ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬಂದು ಖುಷಿ. ಆರ್ಥಿಕವಾಗಿ ವ್ಯಯ ಜಾಸ್ತಿ. ಮಾನಸಿಕ ಒತ್ತಡ. ಧ್ಯಾನದ ಮೊರೆಹೋಗಿ. ಶುಭಸಂಖ್ಯೆ: 9
ಮೀನ: ಕೆಲಸದಲ್ಲಿ ಬೇಸರ ಕಾಣಿಸಬಹುದು. ಸೋಲಿನಿಂದ ಗೆಲುವಿನ ಕಡೆ ಪಯಣಿಸುವಿರಿ. ಜಾಣತನದ ನಡವಳಿಕೆಯ ಅಗತ್ಯವಿದೆ. ಶುಭಸಂಖ್ಯೆ: 4