ಕರೋನಾ ಇರುವ ಕಾರಣ ಈ ರಾಶಿಯವರೆಲ್ಲ ಆರೋಗ್ಯದ ಬಗ್ಗೆ ಎಚ್ಚರಿಕೆ, ಕಾಳಜಿ ವಹಿಸುವುದು ಅಗತ್ಯ

Nitya-Bhavishya-vvani-1-2-1
Published on

ಮೇಷ: ಪ್ರಮುಖ ವಿಚಾರಗಳ ಕುರಿತಾಗಿ ಸ್ನೇಹಿತರಿಗೆ ನೀವೇ ನೆನಪು ಮಾಡಿಕೊಡಬೇಕಾಗುತ್ತದೆ. ಆದರೆ ಚಿಂತಿಸಬೇಡಿ. ಅದೃಷ್ಟಸಂಖ್ಯೆ: 2

ವೃಷಭ: ವ್ಯಾಪಾರಬುದ್ಧಿಯಿಂದ ಎಲ್ಲ ವಿಚಾರಗಳಲ್ಲೂ ಲಾಭ ಮಾಡಲು ಹೋಗಿ ಅವಮಾನವನ್ನು ಎದುರಿಸಬೇಕಾಗುತ್ತದೆ. ಅದೃಷ್ಟಸಂಖ್ಯೆ: 1

ಮಿಥುನ: ಸರ್ಕಾರಿ ಕೆಲಸಕಾರ್ಯಗಳ ವಿಚಾರದಲ್ಲಿ ಹೆಚ್ಚು ಓಡಾಡಬೇಕಾಗುತ್ತದೆ. ಆದರೆ ಕೆಲಸ ಸರಿಯಾಗಿ ಆಗಲಿದೆ. ಅದೃಷ್ಟಸಂಖ್ಯೆ: 5

ಕಟಕ: ಹೆಚ್ಚಿನ ಒತ್ತಾಯ ಮಾಡುವ ಮೂಲಕ ನಿಮ್ಮಿಂದ ಹಲವು ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಅದೃಷ್ಟಸಂಖ್ಯೆ: 9

ಸಿಂಹ: ಕೆಲವು ವಿಚಾರಗಳಲ್ಲಿ ಎಲ್ಲಿ ಎಡವುತ್ತೀರಿ ಎಂಬುದು ಆತ್ಮವಿಮರ್ಶೆ ಮಾಡಿಕೊಂಡರೆ ತಿಳಿದುಬರುತ್ತದೆ. ಅದೃಷ್ಟಸಂಖ್ಯೆ: 4

ಕನ್ಯಾ: ಸರ್ಕಾರಿ ಅಧಿಕಾರಿಗಳು ನಿಮಗೆ ಪ್ರಾಮುಖ್ಯತೆ ನೀಡಿ ಬೇಗಬೇಗನೇ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಾರೆ. ಅದೃಷ್ಟಸಂಖ್ಯೆ: 6

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ಆಹಾರದ ವಿಚಾರದಲ್ಲಿ ನಿಯಂತ್ರಣ ಅಗತ್ಯ. ಅದೃಷ್ಟಸಂಖ್ಯೆ: 7

ವೃಶ್ಚಿಕ: ಕಾಲುನೋವು ಬಹಳ ಕಾಡುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವುದು ಉತ್ತಮ. ಅದೃಷ್ಟಸಂಖ್ಯೆ: 1

ಧನುಸ್ಸು: ನಿಮಗೆ ಯಾರನ್ನು ನೋಡುವುದು ಇಷ್ಟ ಇಲ್ಲವೋ ಅವರೇ ನಿಮ್ಮೆದುರಿಗೆ ಹೆಚ್ಚಾಗಿ ಕಾಣಸಿಗುತ್ತಾರೆ. ಅದೃಷ್ಟಸಂಖ್ಯೆ: 4

ಮಕರ: ನಿಮ್ಮ ಕೆಲಸವನ್ನು ಸರಿಯಾಗಿಯೇ ಮಾಡಿದರೂ ನಿಮ್ಮ ಮೇಲಧಿಕಾರಿಗಳಿಗೆ ಅದು ತೃಪ್ತಿ ನೀಡುವುದಿಲ್ಲ. ಅದೃಷ್ಟಸಂಖ್ಯೆ: 3

ಕುಂಭ: ನಿಮ್ಮನ್ನು ನೋಡಿ ಆಕರ್ಷಿತರಾಗುವವರ ಸಂಖ್ಯೆ ಹೆಚ್ಚಲಿದೆ. ಆದರೆ ಯಾವ ಕಾರಣಕ್ಕೂ ಮೋಸ ಹೋಗದಿರಿ. ಅದೃಷ್ಟಸಂಖ್ಯೆ: 2

ಮೀನ: ಕೆಲವು ಕೆಲಸಗಳನ್ನು ನೀವೇ ಮಾಡದೆ ಬೇರೆ ವಿಧಿಯೇ ಇಲ್ಲ ಎನ್ನುತ್ತ ಕೆಲವರು ನಿಮಗೆ ಜೋತುಬೀಳುತ್ತಾರೆ. ಅದೃಷ್ಟಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net