More

    ಕೊರೊನಾ ತಪಾಸಣೆ ಕರ್ನಾಟಕದಲ್ಲಿ ಈ ಕೇಂದ್ರಗಳಲ್ಲಷ್ಟೇ ಸಾಧ್ಯ…

    ಬೆಂಗಳೂರು: ಚೀನಾದಲ್ಲಿ ಮಹಾಮಾರಿಯಾಗಿ ಕಾಡಿದ ಕೊರೊನಾ ವೈರಸ್​ ಭಾರತಕ್ಕೆ ಕಾಲಿಟ್ಟು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ. ದೇಶದಲ್ಲಿ 43 ಜನರಲ್ಲಿ ಕೊರೊನಾ ವೈರಸ್​ ಇರುವುದು ಧೃಡವಾಗಿದ್ದು ವೈರಸ್​ನ ಭಯ ಹೆಚ್ಚಾಗಿದೆ. ವೈರಸ್​ ಇದೆಯೋ ಇಲ್ಲವೋ ಎಂದು ತಪಾಸಣೆ ನಡೆಸಲು ದೇಶದಲ್ಲಿ 52 ಕೇಂದ್ರಗಳನ್ನು ಗುರುತಿಸಲಾಗಿದೆ.

    ಪ್ರತಿ ರಾಜ್ಯದಲ್ಲಿಯೂ ಕೊರೊನಾ ತಪಾಸಣೆಗೆ ಕೇಂದ್ರಗಳನ್ನು ಗುರುತಿಸಲಾಗಿದೆ. ಅದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಎನ್ನುವಂತೆ ಒಟ್ಟು ಐದು ಕೇಂದ್ರಗಳನ್ನು ಗುರುತಿಸಲಾಗಿದೆ.
    1) ಬೆಂಗಳೂರು ಮೆಡಿಕಲ್​ ಕಾಲೇಜು ಮತ್ತು ರಿಸರ್ಚ್​ ಇನ್​ಸ್ಟಿಟ್ಯೂಟ್​, ಬೆಂಗಳೂರು
    2) ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಫೀಲ್ಡ್​ ಯುನಿಟ್​, ಬೆಂಗಳೂರು
    3) ಮೈಸೂರು ಮೆಡಿಕಲ್​ ಕಾಲೇಜು ಮತ್ತು ರಿಸರ್ಚ್​ ಸೆಂಟರ್​, ಮೈಸೂರು
    4) ಹಾಸನ ಇನ್​​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​, ಹಾಸನ
    5) ಶಿಮೊಗ್ಗ ಇನ್​​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​, ಶಿವಮೊಗ್ಗ

    ಉಳಿದಂತೆ ಆಂಧ್ರಪ್ರದೇಶದಲ್ಲಿ 3, ಅಂಡಮಾನ್​ ನಿಕೋಬಾರ್​ನಲ್ಲಿ 1, ಅಸ್ಸಾಂನಲ್ಲಿ 2, ಬಿಹಾರ್​ನಲ್ಲಿ 1, ಚಂಡೀಗಢ​ನಲ್ಲಿ 1, ಛತ್ತೀಸ್​ಗಢ​ನಲ್ಲಿ 1, ದೆಹಲಿಯಲ್ಲಿ 3, ಹರಿಯಾಣದಲ್ಲಿ 1, ಹಿಮಾಚಲ ಪ್ರದೇಶದಲ್ಲಿ 2, ಜಮ್ಮು ಕಾಶ್ಮೀರದಲ್ಲಿ 2, ಜಾರ್ಖಂಡ್​ನಲ್ಲಿ 1, ಕೇರಳದಲ್ಲಿ 3, ಮಧ್ಯಪ್ರದೇಶದಲ್ಲಿ 2, ಮೇಘಾಲಯದಲ್ಲಿ 1, ಮಹಾರಾಷ್ಟ್ರದಲ್ಲಿ 2, ಮಣಿಪುರದಲ್ಲಿ 1, ಒಡಿಶಾದಲ್ಲಿ 1, ಪುದುಚೆರಿಯಲ್ಲಿ 1, ಪಂಜಾಬ್​ನಲ್ಲಿ 2, ರಾಜಸ್ಥಾನದಲ್ಲಿ 4, ತಮಿಳುನಾಡಿನಲ್ಲಿ 2, ತ್ರಿಪುರಾದಲ್ಲಿ 1, ತೆಲಂಗಾಣದಲ್ಲಿ 1, ಉತ್ತರ ಪ್ರದೇಶದಲ್ಲಿ 3, ಉತ್ತರಖಾಂಡದಲ್ಲಿ 1, ಪಶ್ಚಿಮ ಬಂಗಾಳದಲ್ಲಿ 2 ಕೇಂದ್ರಗಳನ್ನು ಗುರುತಿಸಲಾಗಿದೆ.

    ಒಂದು ವೇಳೆ ಯಾರಿಗಾದರೂ ಕೊರೊನಾ ಗುಣ ಲಕ್ಷಣಗಳು ಕಂಡು ಬಂದಲ್ಲಿ ಈ ಕೇಂದ್ರಗಳಿಗೆ ಹೋಗಿ ತಪಾಸಣೆ ನಡೆಸಿಕೊಳ್ಳಬಹುದಾಗಿದೆ. (ಏಜೆನ್ಸೀಸ್​)

    ಕೇರಳದಲ್ಲಿ ಮೂರು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು; ಪ್ರತ್ಯೇಕ ವಾರ್ಡ್​ನಲ್ಲಿಟ್ಟು ಚಿಕಿತ್ಸೆ

    ಕೇರಳದಲ್ಲಿ ಕಾಡುತ್ತಿರುವ ಕಾಯಿಲೆಗಳು ಒಂದಾ, ಎರಡಾ..; ಕೊರೊನಾ, ಹಕ್ಕಿಜ್ವರ ಬಳಿಕ ಈಗ ಇನ್ನೊಂದು ರೋಗಕ್ಕೆ ಮಹಿಳೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts