ನಿತ್ಯ ಭವಿಷ್ಯ: ಈ ರಾಶಿಯವರು ನಿಮಗಿಂತ ಹೆಚ್ಚು ಅನುಭವಿಗಳಾದ ತಂದೆ-ತಾಯಿಯ ಕಿವಿಮಾತು ಕೇಳಿಸಿಕೊಳ್ಳಿ

Nitya-Bhavishya-vvani-1-2-1
Published on

ಮೇಷ: ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ವ್ಯತ್ಯಾಸವಾದೀತು. ದಾಕ್ಷಿಣ್ಯ ಮಾಡಿಕೊಂಡರೆ ನಂತರ ನಿಮಗೇ ಕಷ್ಟ. ಅದೃಷ್ಟ ಸಂಖ್ಯೆ: 2

ವೃಷಭ:ಮನಸ್ಸು ಒಪ್ಪಲಿ, ಒಪ್ಪದೆ ಇರಲಿ, ನಿಮಗಿಂತ ಹೆಚ್ಚು ಅನುಭವಿಗಳಾದ ತಂದೆ-ತಾಯಿಯ ಕಿವಿಮಾತು ಕೇಳಿಸಿಕೊಳ್ಳಿ. ಅದೃಷ್ಟ ಸಂಖ್ಯೆ: 4

ಮಿಥುನ:ತಾಳಿದವನು ಬಾಳಿಯಾನು ಎಂಬುದನ್ನು ಅರಿಯಿರಿ. ಇಂದು ತಡೆದುಕೊಂಡರೆ ನಂತರ ಉತ್ತಮ ಫಲ ಲಭ್ಯ. ಅದೃಷ್ಟ ಸಂಖ್ಯೆ: 6

ಕಟಕ: ದೂರದ ಊರಿನ ಪ್ರಯಾಣ ಸಂಭ್ರಮದ ಜತೆ ಸುಸ್ತು ತರುತ್ತದೆ. ವ್ಯಾಯಾಮವನ್ನು ಹೆಚ್ಚು ಮಾಡಬೇಕಿದೆ. ಅದೃಷ್ಟ ಸಂಖ್ಯೆ: 9

ಸಿಂಹ:ನ್ಯಾಯಾಲಯ ಸುತ್ತಾಟದ ಅನಿವಾರ್ಯತೆ ಇರುವವರಿಗೆ ಕಷ್ಟ. ಸಹೋದ್ಯೋಗಿಯ ಕೆಲಸಕ್ಕೆ ಮನ್ನಣೆ ಇದೆ. ಅದೃಷ್ಟ ಸಂಖ್ಯೆ: 4

ಕನ್ಯಾ: ಅಜೀರ್ಣ, ಉಷ್ಣ ಕಾಡುತ್ತದೆ. ಹೊರಗಿನ ಆಹಾರ ಸೇವಿಸದಿರಿ. ಬರಬೇಕಾದ ಹಣ ತುಸು ಕಡಿಮೆಯಾಗಲಿದೆ. ಅದೃಷ್ಟ ಸಂಖ್ಯೆ: 6

ತುಲಾ:ಸಹೋದ್ಯೋಗಿಗಳ ತಪ್ಪನ್ನು ನೋಡಿಯೂ ಸುಮ್ಮನೆ ಇರಬೇಕಾದ ವಿಚಿತ್ರ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ. ಅದೃಷ್ಟ ಸಂಖ್ಯೆ: 1

ವೃಶ್ಚಿಕ:ಪ್ರೀತಿ ಪ್ರೇಮ ಎನ್ನುವವರು ಪಾಲಕರ ಸಿಟ್ಟಿಗೆ ಗುರಿಯಾಗುವಿರಿ. ನಿಮ್ಮ ಮಾತು ಅಪಾರ್ಥಕ್ಕೆ ದಾರಿ ಮಾಡಬಹುದು. ಅದೃಷ್ಟ ಸಂಖ್ಯೆ: 2

ಧನಸ್ಸು:ಮಾಡುವ ಕೆಲಸ ವ್ಯರ್ಥ ಎಂದರಿಯದೆ ಮುಂದುವರಿಸುತ್ತೀರಿ. ವ್ಯರ್ಥ ಎಂಬುದು ನಂತರವೇ ತಿಳಿಯಲಿದೆ. ಅದೃಷ್ಟ ಸಂಖ್ಯೆ: 7

ಮಕರ:ಹೇಳಿಕೊಟ್ಟಿದ್ದನ್ನೇ ಮತ್ತೆ ತಿಳಿಸಿಕೊಡಬೇಕಾದ ಪರಿಸ್ಥಿತಿ ಬರಬಹುದು. ಬಾಳಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಅದೃಷ್ಟ ಸಂಖ್ಯೆ: 5

ಕುಂಭ: ಇತರರಿಗೆ ತುಂಬ ಉಪದೇಶ ಮಾಡುತ್ತೀರಿ. ಆದರೆ ನಿಮಗೇ ಅದರ ಅಗತ್ಯ ಹೆಚ್ಚಾಗಿದೆ. ಕೆಲಸದವರ ಬಗ್ಗೆ ಎಚ್ಚರ. ಅದೃಷ್ಟ ಸಂಖ್ಯೆ: 3

ಮೀನ:ಕೆಲಸ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಸಮರ್ಥವಾಗಿ ಮಾಡಿ ಮುಗಿಸಿದಾಗ ಆಗುವ ಸಂತಸ ನಿಮಗಿಂದು ಲಭ್ಯ. ಅದೃಷ್ಟ ಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net