

ಮೇಷ: ಅಧಿಕಾರಿಗಳಿಂದ ಪ್ರಶಂಸೆ. ಕಲಾವಿದರಿಗೆ ಶುಭ ಯೋಗ. ಅಧಿಕ ತಿರುಗಾಟ ಅನಿವಾರ್ಯ ಆಗಬಹುದು. ಸಲ್ಲದ ಅಪವಾದ. ಶುಭಸಂಖ್ಯೆ: 5
ವೃಷಭ: ಭೂಮಿ ಕಳೆದುಕೊಳ್ಳುವ ಸಂದರ್ಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಿ ಮನಸಿಗೆ ನೆಮ್ಮದಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9
ಮಿಥುನ: ಸಮಾಜದಲ್ಲಿ ಗೌರವ. ಕುಟುಂಬ ಸದಸ್ಯರ ಜೊತೆ ಕಾಲಹರಣ ಮಾಡುವಿರಿ. ಧೈರ್ಯದಿಂದ ಮಾಡಿದ ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ:1
ಕಟಕ: ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ ದೊರೆತು ಸಮಾಧಾನ. ಪತ್ನಿ ಆರೋಗ್ಯಕ್ಕಾಗಿ ಹಣವ್ಯಯ. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ:1
ಸಿಂಹ: ವಾಹನವನ್ನು ರಿಪೇರಿ ಮಾಡಿಸಬೇಕಾದ ಸ್ಥಿತಿ. ಕೈ ಹಾಕಿದ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ. ಮನಸ್ಸಿನಲ್ಲಿ ಕಾತರ. ಧ್ಯಾನ ಮಾಡಿ. ಶುಭಸಂಖ್ಯೆ: 5
ಕನ್ಯಾ: ಮಾತಿನಿಂದ ವೈರತ್ವ ಸೃಷ್ಟಿಯಾಗುವುದು, ಹುಷಾರು ವಾಹನ ಚಾಲನೆಯಲ್ಲಿ ಎಚ್ಚರವಹಿಸಿ. ಸಮಾಜದಲ್ಲಿ ಉನ್ನತ ಸ್ಥಾನ ಲಭ್ಯ. ಶುಭಸಂಖ್ಯೆ:1
ತುಲಾ: ಮಾತೃ ವರ್ಗದಿಂದ ಧನ ಸಹಾಯ ಹರಿದುಬರಲಿದೆ. ಗೃಹದಲ್ಲಿ ಮಂಗಳಕಾರ್ಯಕ್ಕೆ ಯೋಚನೆ. ಆರೋಗ್ಯದಲ್ಲಿ ತೊಂದರೆ. ಶುಭಸಂಖ್ಯೆ: 6
ವೃಶ್ಚಿಕ: ವೈಯಕ್ತಿಕ ಸಂಬಂಧಗಳಲ್ಲಿ ಸಂತಸ ಸಿಗುವುದು. ಕೌಟುಂಬಿಕ ವಿಚಾರಗಳಲ್ಲಿ ಅನಿರೀಕ್ಷಿತ ಪ್ರಗತಿಯಾಗಲಿದೆ. ಉತ್ತಮ ಆರೋಗ್ಯ. ಶುಭಸಂಖ್ಯೆ: 8
ಧನುಸ್ಸು: ಆರ್ಥಿಕ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಪ್ರಯಾಣದಲ್ಲಿ ಎಚ್ಚರ. ನಿತ್ಯದ ವ್ಯಾಪಾರದಲ್ಲಿ ಮಂದಗತಿ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 8
ಮಕರ: ಸಾರ್ವಜನಿಕವಾಗಿ ವ್ಯವಹರಿಸುವಾಗ ಎಚ್ಚರವಿರಲಿ. ಶತ್ರುಗಳಿಂದ ತೊಂದರೆ ಆದೀತು. ಚಂಚಲ ಮನಸ್ಸು. ಉತ್ತಮ ಬುದ್ಧಿಶಕ್ತಿ. ಶುಭಸಂಖ್ಯೆ: 2
ಕುಂಭ: ಸ್ನೇಹಿತರಿಂದ ಸಹಾಯ ಒದಗಿಬರಲಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ. ಸಹನೆ ಅಗತ್ಯ. ಸ್ವಂತ ಕೆಲಸಕ್ಕೆ ಆದ್ಯತೆ ಇರಲಿ. ಶುಭಸಂಖ್ಯೆ:3
ಮೀನ: ಬಂಧು ಬಾಂಧವರಿಂದ ಗೌರವ ಪ್ರಾಪ್ತಿ. ಹಿರಿಯರ ಜೊತೆ ಮಾತಿನ ಸಮರ. ಹಿತ ಶತ್ರುಗಳಿಂದ ಅನವಶ್ಯಕ ತೊಂದರೆಯಾದೀತು. ಶುಭಸಂಖ್ಯೆ: 6