

ಮೇಷ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ವಾಹನದಿಂದ ತೊಂದರೆ. ಉದ್ಯೋಗ ಸ್ಥಳದಲ್ಲಿ ಆಲಸ್ಯ. ಆತಂಕದ ಸಂಗತಿಯಿಂದ ತೊಂದರೆ. ಶುಭಸಂಖ್ಯೆ: 8
ವೃಷಭ: ಪತ್ರ ವ್ಯವಹಾರದಲ್ಲಿ ಸಮಸ್ಯೆ. ಬಂಧು ಬಾಂಧವರಿಂದ ನೋವು. ನೆರೆಹೊರೆಯವರೊಂದಿಗೆ ಮನಸ್ತಾಪ. ಪ್ರಯಾಣದಲ್ಲಿ ಆಲಸ್ಯ. ಶುಭಸಂಖ್ಯೆ: 1
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ. ಕುಟುಂಬಸ್ಥರೇ ಶತ್ರುಗಳಾದಾರು. ಕೋರ್ಟ್ ಕೇಸ್ಗಾಗಿ ಅಲೆದಾಟ. ತಾಯಿಯಿಂದ ಧನಾಗಮನ. ಶುಭಸಂಖ್ಯೆ: 5
ಕಟಕ: ದಾಂಪತ್ಯದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಮಂದತ್ವ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಗೌರವಕ್ಕೆ ಧಕ್ಕೆಯಾಗಬಹುದು. ಶುಭಸಂಖ್ಯೆ:3
ಸಿಂಹ: ನಷ್ಟಗಳು, ಖರ್ಚುಗಳು. ಅಧಿಕ ಸಾಲದ ಚಿಂತೆ. ತಾಯಿಯಿಂದ ಅಂತರ. ದೀರ್ಘಕಾಲದ ರೋಗಗಳಿಂದ ಚಿಂತೆ. ದುಃಸ್ವಪ್ನಗಳು. ಶುಭಸಂಖ್ಯೆ: 7
ಕನ್ಯಾ: ಮಿತ್ರರಿಂದ ಅನುಕೂಲ. ಶುಭ ಆಶಯಗಳು. ಪ್ರೀತಿ-ಪ್ರೇಮದಲ್ಲಿ ಮನಸ್ತಾಪ. ಸಂತಾನದ ಚಿಂತೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 1
ತುಲಾ: ಮಿತ್ರರೊಂದಿಗೆ ವಾಗ್ವಾದ. ಸ್ಥಿರಾಸ್ತಿಯಿಂದ ಅನುಕೂಲ. ಸರ್ಕಾರಿ ಕೆಲಸ ಕಾರ್ಯದಲ್ಲಿ ಹಿನ್ನಡೆ. ಹಿರಿಯರೊಂದಿಗೆ ಮನಸ್ತಾಪ. ಶುಭಸಂಖ್ಯೆ: 4
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ. ಕೃಷಿಕರಿಗೆ ಅನುಕೂಲ. ಉದ್ಯೋಗ ಬದಲಾವಣೆಯ ಆಲೋಚನೆ.ಶುಭಸಂಖ್ಯೆ: 7
ಧನುಸ್ಸು: ಕುಟುಂಬದಿಂದ ಸಹಕಾರ. ತಂದೆಯಿಂದ ಅನುಕೂಲ. ಉಸಿರಾಟದ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 7
ಮಕರ: ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯೊಂದಿಗೆ ಬೇಸರ. ಮಕ್ಕಳ ಜೀವನದ ಚಿಂತೆ. ಶುಭಕಾರ್ಯದ ಆಲೋಚನೆ. ಶುಭಸಂಖ್ಯೆ: 3
ಕುಂಭ: ಅನಗತ್ಯ ವಿವಾದಗಳು. ಕೆಲಸಗಾರರಿಂದ ನಷ್ಟ. ಅನಾರೋಗ್ಯ. ಸಾಲದ ಚಿಂತೆ. ಉದ್ಯೋಗ ಸಮಸ್ಯೆಗಳು, ಭವಿಷ್ಯದ ಯೋಚನೆ. ಶುಭಸಂಖ್ಯೆ: 7
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಆರ್ಥಿಕ ಚೇತರಿಕೆ. ದೇವತಾ ದರ್ಶನ ಭಾಗ್ಯ. ಸತ್ಯಕ್ಕೆ ಜಯ, ಭಾವನಾತ್ಮಕ ಸೋಲು. ಶುಭಸಂಖ್ಯೆ: 5