ಈ ರಾಶಿಯವರಿಗಿಂದು ಸುಲಲಿತ ಧನ ಸಂಪಾದನೆ, ಒದಗಲಿದೆ ಅನಿರೀಕ್ಷಿತ ಅದೃಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪತ್ರ ವ್ಯವಹಾರದಿಂದ ಅನುಕೂಲ. ಅಪಮಾನ, ಅಪ ನಿಂದನೆ. ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆಯ ಆಸೆ. ಶುಭಸಂಖ್ಯೆ: 9

ವೃಷಭ: ದೂರ ಪ್ರಯಾಣ ಮಾಡುವ ಸಂದರ್ಭ. ಅನಾರೋಗ್ಯ ಸಮಸ್ಯೆ ಕಾಡಬಹುದು. ಸ್ಥಿರಾಸ್ತಿ ಮೇಲೆ ಸಾಲ ಮಾಡಬೇಕಾಗಬಹುದು. ಶುಭಸಂಖ್ಯೆ: 1

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳು ಶತ್ರುಗಳಾದಾರು, ಸಮಾಧಾನವಿರಲಿ. ಶುಭಸಂಖ್ಯೆ: 7

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಹಿತಶತ್ರು ಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ. ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಶುಭಸಂಖ್ಯೆ: 2

ಸಿಂಹ: ಆಸೆ. ಅಭಿಲಾಷೆಗಳು ಹೆಚ್ಚುವವು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ ಮತ್ತು ಪ್ರತಿಷ್ಠೆ. ಉದ್ಯೋಗಾವಕಾಶ. ಶುಭಸಂಖ್ಯೆ: 1

ಕನ್ಯಾ: ಮೋಸವಾಗಿ ನಷ್ಟ ಉಂಟಾಗಲಿದೆ. ದೂರ ಪ್ರದೇಶದಲ್ಲಿ ಉದ್ಯೋಗ ದೊರೆಯುವುದು. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ: 9

ತುಲಾ: ಸುಲಲಿತವಾಗಿ ಧನ ಸಂಪಾದನೆ. ಅನಿರೀಕ್ಷಿತ ಅದೃಷ್ಟ ಒದಗಿಬರಲಿದೆ. ಕಳೆದುಕೊಂಡ ವಸ್ತು ಮರಳಿ ದೊರೆತು ಸಂತೋಷ. ಶುಭಸಂಖ್ಯೆ: 6

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ನಿರಾಸೆ, ಅಪವಾದ, ಸಂಶಯಗಳು. ಅವಕಾಶಗಳು ಕೈತಪ್ಪುವ ಸಾಧ್ಯತೆ. ವೈಯಕ್ತಿಕ ನಿಂದನೆ, ಸಾಲಬಾಧೆ. ಶುಭಸಂಖ್ಯೆ: 3

ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೀತಿಯ ವಿಷಯದ ಚಿಂತೆ. ಅಧಿಕ ನಷ್ಟ, ಸಮಸ್ಯೆ ಆದರೂ ಅದೃಷ್ಟವಂತರಾಗುವಿರಿ. ಶುಭ ಸಂಖ್ಯೆ 3

ಮಕರ: ದಾಂಪತ್ಯ ಸಮಸ್ಯೆ. ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಮೋಸಗಾರರನ್ನು ಪ್ರೀತಿಸುವಿರಿ. ಸೇವಾ ವೃತ್ತಿಯ ಉದ್ಯೋಗ ಲಾಭ. ಶುಭಸಂಖ್ಯೆ: 2

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವಿರಿ. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ. ಶುಭಸಂಖ್ಯೆ: 5

ಮೀನ: ಸಾಲ ಮಾಡುವ ಪರಿಸ್ಥಿತಿ. ಶತ್ರು ದಮನ. ಕೋರ್ಟ್ ನಲ್ಲಿಯ ವಿವಾದಗಳಲ್ಲಿ ಜಯ, ಅಧಿಕ ಖರ್ಚು. ದಿನಾಂತ್ಯದಲ್ಲಿ ಆರ್ಥಿಕ ಅನುಕೂಲ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net