

ಬೆಂಗಳೂರು: ಪತಿ ಸಿನಿಮಾ ಹೀರೋಯಿನ್ಗೆ ಹೋಲಿಸಿ ಮಾತನಾಡಿದರೆ ಪತ್ನಿ ಸಂತೋಷ ಪಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತಿಗೆ ಅದೇ ಸಂಕಷ್ಟವನ್ನು ತಂದಿಟ್ಟಿದೆ. ಪತ್ನಿಯನ್ನು ನಟಿ ಕಿಯಾರಾ ನಟಿ ಕಿಯಾರಾ ಅಡ್ವಾಣಿಗೆ ಹೋಲಿಸಿದ್ದಕ್ಕೆ ಆಕೆ ಆತನ ಮೇಲೆ ಸಿಟ್ಟಾಗಿದ್ದಾಳೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ಸಿಟ್ಟು ಮಾಡಿಕೊಂಡಿರುವ ಪತ್ನಿಯನ್ನು ಸಮಾಧಾನ ಮಾಡುವಾಗ ಪತಿ ಆಕೆಯ ಮುಖ ಕಾಣಿಸುವಂತೆ ರೆಕಾರ್ಡ್ ಮಾಡಿಕೊಂಡಿದ್ದು, ಆ ವಿಡಿಯೋ ತುಣುಕು ವೈರಲ್ ಆಗಿದೆ. ನೀನ್ಯಾಕೆ ನನಗಿಂತ ಕಿಯಾರಾ ಅಡ್ವಾಣಿ ಚೆನ್ನಾಗಿದ್ದಾಳೆ ಎಂದಿ ಅಂತ ಪತ್ನಿ ಸಿಡುಕು ತೋರಿದ್ದೂ ವಿಡಿಯೋದಲ್ಲಿದೆ.
ನಾನು ಅವಳ ಆ್ಯಕ್ಟಿಂಗ್ ಬಗ್ಗೆ ಹೇಳಿದ್ದು ಎಂದು ಪತಿ ಸಮರ್ಥನೆಗೆ ಇಳಿದಾಗ, ಹಾಗಾದರೆ ನಾನು ಆ್ಯಕ್ಟಿಂಗ್ ಮಾಡ್ತಿದಿನಿ ಅಂತಲಾ ಎಂದು ಪತ್ನಿ ಪ್ರಶ್ನೆ ಮಾಡಿದ್ದಾಳೆ. ಮಾತ್ರವಲ್ಲ, ನೀನು ಕಿಯಾರಾ ಆಡ್ವಾಣಿಯಲ್ಲಿಗೇ ಹೋಗು, ನಿಂಗಿವತ್ತು ಊಟ ಹಾಕಲ್ಲ ಎಂದು ಪತ್ನಿ ಹೇಳಿದ್ದು ಈ ವಿಡಿಯೋದಲ್ಲಿದೆ.