ಪೊಲೀಸರೆದುರೇ ಮಾರಕಾಸ್ತ್ರ ಝಳಪಿಸಿ ದಾದಾಗಿರಿ; ಒಳ್ಳೇ ಮಾತಲ್ಲಿ ಹೇಳಿದ್ರೂ ಕೇಳದವನಿಗೆ ಶೂಟ್ ಮಾಡಿ ಬೆಂಡೆತ್ತಿದ ಪೊಲೀಸರು!

Rowdism
Published on

ಕಲಬುರಗಿ: ಮಾರುಕಟ್ಟೆ ಪ್ರದೇಶದಲ್ಲಿ ಅದೂ ರಸ್ತೆ ಮೇಲೆ ಜನರೆಲ್ಲರ ಮಧ್ಯೆ ಮಾರಕಾಸ್ತ್ರ ಝಳಪಿಸಿದ್ದಲ್ಲದೆ ಸ್ಥಳಕ್ಕೆ ಧಾವಿಸಿದ ಪೊಲೀಸರ ಎದುರೇ ದಾದಾಗಿರಿ ತೋರಿದವನನ್ನು ಕೊನೆಗೆ ಪೊಲೀಸರು ಶೂಟ್ ಮಾಡಿ ಬೆಂಡೆತ್ತಿದ ಪ್ರಸಂಗವೊಂದು ನಡೆದಿದೆ.

ಕಲಬುರಗಿಯ ಸೂಪರ್​ ಮಾರುಕಟ್ಟೆ ಪ್ರದೇಶದಲ್ಲಿ ಇಂದು ಈ ಘಟನೆ ನಡೆದಿದೆ. ಪ್ಯಾಂಟ್​-ಬನಿಯನ್ ತೊಟ್ಟು ಮಾರಕಾಸ್ತ್ರ ಹಿಡಿದು ಸುಮಾರು ಒಂದು ಗಂಟೆಯಿಂದ ಜನರಲ್ಲಿ ಭೀತಿ ಹುಟ್ಟಿಸಿದ್ದ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಹಾಗೆ ಬಂದ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದರೂ ಆತ ಕ್ಯಾರೇ ಎಂದಿರಲಿಲ್ಲ. ಪೊಲೀಸರು ಬುದ್ಧಿಮಾತು ಹೇಳಿದರು ಅವರ ವಿರುದ್ಧವೇ ಮಾರಕಾಸ್ತ್ರವನ್ನು ಝಳಪಿಸಿ, ದಾದಾಗಿರಿ ತೋರಿದ್ದ. ಕೊನೆಗೆ ಪೊಲೀಸರು ವಿಧಿ ಇಲ್ಲದೆ ಅವನತ್ತ ಗುಂಡು ಹಾರಿಸಿದ್ದಲ್ಲದೆ, ಕಾಲಿಗೆ ಗುಂಡು ಹೊಡೆದಿದ್ದಾರೆ.

ಪೊಲೀಸರ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪಿಎಸ್​ಐ ವಾಹಿದ್ ಕೊತ್ವಾಲ್ ಅವರು ಆರೋಪಿಯ ಕಾಲಿಗೆ ಮೂರು ಗುಂಡು ಹಾರಿಸಿದ್ದ. ಆಗ ಬಿದ್ದ ಆತನ ಮೇಲೆ ಇತರ ಪೊಲೀಸರು ಲಾಠಿ ಬೀಸಿ ಬೆಂಡೆತ್ತಿದ್ದು, ಬಳಿಕ ವಶಕ್ಕೆ ಪಡೆದು ಚಿಕಿತ್ಸೆ ನೀಡಲಾಗಿದೆ. ಆರೋಪಿ ಅಬ್ದುಲ್ ಜಾಫರ್ ಎಂದು ಗುರುತಿಸಲಾಗಿದ್ದು, ಆತ ಯಾಕೆ ಹೀಗೆ ವರ್ತಿಸಿದ್ದ ಎನ್ನುವ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net