ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ಸಮಸ್ಯೆ, ಪ್ರೀತಿ ವಿಷಯ ಬಯಲು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸರ್ಕಾರಿ ಕೆಲಸದಲ್ಲಿ ಹಿನ್ನಡೆ. ಆಸ್ತಿ ವಿಷಯದಲ್ಲಿ ಪ್ರತಿವಾದಿಗಳ ತಂತ್ರದ ಆತಂಕ. ನೀರು, ವಾಹನಗಳಿಂದ ಅಪಾಯ ಸಾಧ್ಯತೆ. ಶುಭಸಂಖ್ಯೆ: 9.

ವೃಷಭ: ಬಾಂಧವರಿಂದ ತೊಂದರೆ. ಪೆಟ್ಟು ಮಾಡಿಕೊಳ್ಳುವ ಸಂಭವ. ಪ್ರಯಾಣದಲ್ಲಿ ಎಚ್ಚರಿಕೆ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 7

ಮಿಥುನ: ಆರ್ಥಿಕ ಸಂಕಷ್ಟ. ಮಾನಸಿಕ ನೋವು. ಸ್ತ್ರೀಯರಿಂದ ಅನುಕೂಲ, ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 1

ಕಟಕ: ಅವಕಾಶ ಕೈತಪ್ಪುವ ಸಂಭವ. ದೃಷ್ಟಿದೋಷದ ಭೀತಿ ಸುಳಿದಾಡುವುದು. ಆತಂಕ ಬೇಡ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ಸಿಂಹ: ಅಧಿಕ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ. ನಿದ್ರಾಭಂಗ. ಬಂಧು ಬಾಂಧವರೊಂದಿಗೆ ಶತ್ರುತ್ವ ಉಂಟಾದೀತು. ಶುಭಸಂಖ್ಯೆ: 6

ಕನ್ಯಾ: ಮಕ್ಕಳಿಂದ ಲಾಭ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಸ್ವಯಂಕೃತಾಪರಾಧದಿಂದ ತೊಂದರೆ. ರಾಜಕಾರಣಿ ಗಳಿಂದ ನಷ್ಟ, ಅವಮಾನ. ಶುಭಸಂಖ್ಯೆ: 5

ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ಶತ್ರುಗಳಿಂದ ಭೀತಿ ಮತ್ತು ಸಮಸ್ಯೆ. ನೀರಿನಿಂದ ತೊಂದರೆ ಸಾಧ್ಯತೆ. ಅಧಿಕಾರಿಗಳಿಂದ ನೋವು. ಶುಭಸಂಖ್ಯೆ: 3

ವೃಶ್ಚಿಕ: ದೂರ ಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಾಸ. ಕೈಕಾಲುಗಳಿಗೆ ಪೆಟ್ಟು. ಅವಕಾಶ ಕೈತಪ್ಪುವ ಸನ್ನಿವೇಶ ಎದುರಾದೀತು. ಶುಭಸಂಖ್ಯೆ: 7

ಧನುಸ್ಸು: ಉತ್ತಮ ಅವಕಾಶಗಳ ಸೂಚನೆ. ಸೋಲು, ನಿರಾಸೆ, ಅಪಕೀರ್ತಿ. ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ. ಶುಭಸಂಖ್ಯೆ: 6

ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯ ಬಯಲು, ಸ್ವಂತ ವ್ಯಾಪಾರದಲ್ಲಿ ನಷ್ಟ, ಕರ್ತವ್ಯದಲ್ಲಿ ಹಿನ್ನಡೆ. ಶುಭ ಸಂಖ್ಯೆ 9.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಕೆಲಸಗಾರರಿಂದ, ಸೇವಕರಿಂದ ವಂಚನೆ. ಆರೋಗ್ಯದಲ್ಲಿ ವ್ಯತ್ಯಾಸ. ಸಾರ್ವಜನಿಕ ರಂಗದಲ್ಲಿ ವಿಫಲತೆ. ಶುಭಸಂಖ್ಯೆ:4

ಮೀನ: ದುಶ್ಚಟಗಳಿಂದ ತೊಂದರೆ. ಸ್ತ್ರೀಯರಿಂದ ಮತ್ತು ಅಪವಾದಗಳಿಂದ ಗೌರವಕ್ಕೆ ಧಕ್ಕೆಯಾದೀತು. ಶುಭ ಸಮಾರಂಭದ ಸಡಗರ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net