ಈ ರಾಶಿಯವರಿಗಿಂದು ಧನಲಾಭವಾಗಿ ಮಾನಸಿಕ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಗುರು ಹಿರಿಯರ ಭೇಟಿಯಾಗಲಿದೆ. ಶತ್ರು ಬಾಧೆ ವಿಪರೀತವಾಗಬಹುದು. ವಾದ-ವಿವಾದಗಳಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ಶುಭಸಂಖ್ಯೆ: 2

ವೃಷಭ: ಸ್ತ್ರೀಯರಿಗೆ ಶುಭದಾಯಕವಾದ ದಿನ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 4

ಮಿಥುನ: ವ್ಯವಹಾರದಲ್ಲಿ ಎಚ್ಚರದಿಂದಿರಿ. ಉತ್ತಮ ಬುದ್ಧಿಶಕ್ತಿ ಪ್ರದರ್ಶಿಸುವಿರಿ. ದಾಂಪತ್ಯದಲ್ಲಿ ನೆಮ್ಮದಿಯ ದಿನ. ಮನೆಯಲ್ಲಿ ಸಂತಸ. ಶುಭಸಂಖ್ಯೆ: 7

ಕಟಕ: ಇಷ್ಟಾರ್ಥ ಸಿದ್ಧಿಯಾಗಿ ಉಲ್ಲಾಸದ ಕ್ಷಣಗಳು. ಮಾತಾಪಿತರಲ್ಲಿ ಪ್ರೀತಿ ತೋರುವಿರಿ. ನಂಬಿದ ಜನರಿಂದ ಮೋಸವಾದೀತು. ಶುಭಸಂಖ್ಯೆ: 9

ಸಿಂಹ: ವಿವಾಹಯೋಗವಿದೆ. ಸ್ನೇಹಿತರ ಭೇಟಿಯಿಂದ ಸಡಗರದ ಕ್ಷಣ. ಆರ್ಥಿಕ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ಚೇತರಿಕೆಯಾಗಿ ಖುಷಿ. ಶುಭಸಂಖ್ಯೆ: 3

ಕನ್ಯಾ: ಅಲ್ಪ ಕಾರ್ಯಸಿದ್ಧಿಯಾಗಿ ಸಮಾಧಾನ. ಆರೋಗ್ಯದ ಕಡೆ ವಿಶೇಷ ಗಮನ ಹರಿಸಿ. ಕೃಷಿಕರಿಗೆ ನಷ್ಟ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ:4

ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೋವ್ಯಥೆ ಉಂಟಾಗುವುದು. ಕುಲದೇವರನ್ನು ಭಜಿಸಿ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 3

ವೃಶ್ಚಿಕ: ವಿಪರೀತ ಖರ್ಚು ಆಗುವುದು, ನಿಯಂತ್ರಿಸಿ. ಕೆಲಸ ಕಾರ್ಯಗಳಲ್ಲಿ ವಿಘ್ನ ತಲೆದೋರುವುದು. ವೈದ್ಯರಿಗೆ ಉತ್ತಮ ಆದಾಯ. ಶುಭಸಂಖ್ಯೆ:1

ಧನುಸ್ಸು: ಶತ್ರುಬಾಧೆ ವಿಪರೀತವಾಗಬಹುದು. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಆಪ್ತರೊಡನೆ ಕಲಹ ಮಾಡಿಕೊಳ್ಳಬೇಡಿ. ಶುಭಸಂಖ್ಯೆ: 9

ಮಕರ: ಧನಲಾಭವಾಗಿ ಮಾನಸಿಕ ನೆಮ್ಮದಿ. ಮನೆಯಲ್ಲಿ ಶುಭಕಾರ್ಯ ಆಯೋಜನೆಗೊಳ್ಳುವುದು. ದುಷ್ಟರಿಂದ ದೂರವಿದ್ದರೆ ಉತ್ತಮ. ಶುಭಸಂಖ್ಯೆ: 7

ಕುಂಭ: ಇತರರ ಮಾತಿಗೆ ಮರುಳಾಗಬೇಡಿ. ಚಂಚಲ ಮನಸ್ಸು ಹತೋಟಿಯಲ್ಲಿರಲಿ. ಯತ್ನ ಕಾರ್ಯಗಳಲ್ಲಿ ನೀವೆಣಿಸಿದಂತೆ ಜಯ. ಶುಭಸಂಖ್ಯೆ:3

ಮೀನ: ಆರೋಗ್ಯದ ಕಡೆ ಗಮನ ಹರಿಸಿ. ದ್ರವ್ಯಲಾಭವಾಗುವುದು. ಬಡವರಿಗೆ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net