ಈ ರಾಶಿಯವರು ಇಂದು ಹರ್ಷದಿಂದ ಇರುವಂತೆ ತೋರಿಸಿಕೊಳ್ಳಲು ಯತ್ನಿಸುತ್ತಾರೆ

Published on

ಮೇಷ: ಸುಲಭದಲ್ಲಿ ಆಗದು, ಕಷ್ಟವಾಗುತ್ತದೆ ಎಂದು ತಿಳಿದಿದ್ದರೂ ಮುಖ್ಯ ಕೆಲಸಕ್ಕೆ ಕೈಹಾಕುವ ಸಾಧ್ಯತೆ ಜಾಸ್ತಿ ಇದೆ. ಅದೃಷ್ಟಸಂಖ್ಯೆ: 1

ವೃಷಭ: ಮಾಡಿದ ಪ್ರತಿ ಕೆಲಸಕ್ಕೂ ನಿಮ್ಮಿಂದ ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ. ನಿಮಗೂ ಉತ್ತರಿಸಿ ಸಾಕಾಗಬಹುದು. ಅದೃಷ್ಟಸಂಖ್ಯೆ: 5

ಮಿಥುನ: ಸಮಯಾವಕಾಶದ ಕೊರತೆ, ಒತ್ತಡಗಳಿಂದ ತಪ್ಪಿ ಹೋಗಿದ್ದ ಓದುವ ಹವ್ಯಾಸಕ್ಕೆ ಇಂದು ಅವಕಾಶ ಸಿಗುತ್ತದೆ. ಅದೃಷ್ಟಸಂಖ್ಯೆ: 7

ಕಟಕ: ಹರ್ಷದಿಂದಿರುವಂತೆ ತೋರಿಸಿಕೊಳ್ಳಲು ಯತ್ನಿಸುತ್ತೀರಿ. ನೀವು ಮುಚ್ಚಿಡುತ್ತಿರುವುದು ಎಲ್ಲ ಗಮನಿಸುವಂತಿದೆ. ಅದೃಷ್ಟಸಂಖ್ಯೆ: 6

ಸಿಂಹ: ಸ್ನೇಹಿತನ ನಡೆ ಅನುಮಾನಕ್ಕೆ ಈಡು ಮಾಡುತ್ತದೆ. ಬಹಳ ಪ್ರಶ್ನೆಗಳು ಎದ್ದರೂ ನೀವೇ ನೇರ ಏನೂ ಕೇಳಲಾರಿರಿ. ಅದೃಷ್ಟಸಂಖ್ಯೆ: 3

ಕನ್ಯಾ: ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸದ್ಯದ ಸ್ಥಿತಿಗೆ ಸಮಾಧಾನಕರ ಸಾಧನೆ ಮಾಡುತ್ತೀರಿ. ಬೇಸರ ಬೇಡ. ಅದೃಷ್ಟಸಂಖ್ಯೆ: 5

ತುಲಾ: ಆಗದು ಎಂದು ಕೈ ಕಟ್ಟಿ ಕೂರುವವರಲ್ಲ ಎಂದು ಎಲ್ಲರಿಗೂ ಅರ್ಥವಾಗುವಂತೆ ನಿಮ್ಮ ಕಾರ್ಯವೈಖರಿ ಇರುತ್ತದೆ. ಅದೃಷ್ಟಸಂಖ್ಯೆ: 9

ವೃಶ್ಚಿಕ: ನಿಮ್ಮನ್ನು ಬೇಸರಗೊಳಿಸಿದವರು ಖಂಡಿತ ಸ್ಪಷ್ಟೀಕರಣ ನೀಡುತ್ತಾರೆ. ಸುಮ್ಮನೆ ವ್ಯಥೆಪಟ್ಟು ಪ್ರಯೋಜನ ಇಲ್ಲ. ಅದೃಷ್ಟಸಂಖ್ಯೆ: 2

ಧನಸ್ಸು: ತ್ವರಿತಗತಿಯಲ್ಲಿ ಕೆಲಸ ಮುಗಿಸಲುಣ ಯತ್ನಿಸುತ್ತೀರಿ. ಆ ಗಡಿಬಿಡಿಯಲ್ಲಿ ಯಾವುದೇ ತಪ್ಪಾಗದಂತೆ ಎಚ್ಚರವಿರಲಿ. ಅದೃಷ್ಟಸಂಖ್ಯೆ: 3

ಮಕರ: ಸ್ನೇಹಿತನಲ್ಲಿರುವ ವ್ಯಾಪಾರಿಬುದ್ಧಿಯನ್ನು ಕಂಡು ನೀವು ಹೆಚ್ಚು ಚಿಂತೆ ಮಾಡುವಿರಿ. ನೀವೇ ಬದಲಾಗಬೇಕು ಅಷ್ಟೇ. ಅದೃಷ್ಟಸಂಖ್ಯೆ: 7

ಕುಂಭ: ನಿಮ್ಮ ನಂಬಿಕೆಗಳನ್ನು ತೀರ ಹತ್ತಿರದವರೇ ದುರುಪಯೋಗ ಮಾಡಿ ತಮ್ಮ ಕಾರ್ಯಸಾಧನೆ ಮಾಡಿಕೊಂಡುಬಿಡುತ್ತಾರೆ. ಅದೃಷ್ಟಸಂಖ್ಯೆ: 9

ಮೀನ: ನಿಮಗೆ ವಿಧಿಸಿದ ನಿಯಮಗಳನ್ನು ಮುರಿಯುವ ಸಾಧ್ಯತೆ ಬಹಳ. ಇದರಿಂದಾಗಿ ನಿಮ್ಮವರಿಗೂ ತೊಂದರೆಯಾದೀತು. ಎಚ್ಚರ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net