

ಮೇಷ: ನೀವು ನಿಷ್ಠಾವಂತರೇ ಆಗಿದ್ದರೂ ನಿಮ್ಮ ಸುತ್ತಲಿನವರೂ ಹಾಗೆ ಇರಬೇಕೆಂದಿಲ್ಲ. ಅವರೇ ದಾರಿ ತಪ್ಪಿಸಬಹುದು. ಅದೃಷ್ಟಸಂಖ್ಯೆ: 6
ವೃಷಭ: ನಿರೀಕ್ಷೆಗೂ ಮೀರಿದ ಗೌರವ ಲಭ್ಯ. ಉತ್ತಮ ಜನರ ಭೇಟಿ ಆಗುವಿರಿ. ನಿಮ್ಮ ಬಗ್ಗೆ ಅಸೂಯೆ ಹೊಂದಿದವರೂ ಇದ್ದಾರೆ. ಅದೃಷ್ಟಸಂಖ್ಯೆ: 7
ಮಿಥುನ: ಕಚೇರಿಯಲ್ಲಿ ಹೊಸ ವಿಧಾನದ ಕೆಲಸಗಳನ್ನು ಕಲಿಯುವ ಅವಕಾಶವಿದೆ. ಅವಮಾನಗಳೂ ಎದುರಾಗಬಹುದು. ಅದೃಷ್ಟಸಂಖ್ಯೆ: 5
ಕಟಕ: ರಿಯಲ್ ಎಸ್ಟೇಟ್ನವರಿಗೆ ಕಾಗದಪತ್ರ ವ್ಯವಹಾರ ಬೇಗ ಜರುಗಲಿದೆ. ಹೋಟೆಲ್ ಉದ್ಯಮಿಗಳಿಗೆ ಲಾಭವಿದೆ. ಅದೃಷ್ಟಸಂಖ್ಯೆ: 3
ಸಿಂಹ: ಯಾರ್ಯಾರೋ ಬುದ್ಧಿಮಾತು ಹೇಳಬಹುದು. ಸಮಯ ಮೀರಿದ್ದರಿಂದ ಅನಿವಾರ್ಯವಾಗಿ ಕೇಳಬೇಕಾಗುತ್ತದೆ. ಅದೃಷ್ಟಸಂಖ್ಯೆ: 1
ಕನ್ಯಾ: ಯಾರದೋ ಮಾತನ್ನು ನಂಬಿ ಕುಳಿತರೆ ಕೆಲಸ ಆಗುವುದಿಲ್ಲ. ಪರ್ಯಾಯ ಮಾರ್ಗಗಳನ್ನು ಈಗಲೇ ಹುಡುಕಿಕೊಳ್ಳಿ. ಅದೃಷ್ಟಸಂಖ್ಯೆ: 9
ತುಲಾ: ಸ್ನೇಹಿತ ಹಣದ ಸಹಾಯ ಕೇಳಬಹುದು. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಂದರೂ ಹೊಂದಿಕೊಳ್ಳಿ. ಅದೃಷ್ಟಸಂಖ್ಯೆ: 1
ವೃಶ್ಚಿಕ: ಯಾವುದೋ ಕೆಲಸದಲ್ಲಿನ ಎಡವಟ್ಟು ನಿಮ್ಮ ಗಮನಕ್ಕೆ ಬರಲಿದೆ. ಕೆಲವರ ಮನಸ್ತಾಪದ ಬಗೆಗೂ ತಿಳಿದುಬರಲಿದೆ. ಅದೃಷ್ಟಸಂಖ್ಯೆ: 9
ಧನಸ್ಸು: ವ್ಯಾಪಾರಿಗಳಿಗೆ ಹಣಕಾಸಿನ ಕೊರತೆ ಉಂಟಾಗಬಹುದು. ನೀರನ್ನು ಕುಡಿಯುವಾಗ ಹೆಚ್ಚಿನ ಎಚ್ಚರ ಬೇಕು. ಅದೃಷ್ಟಸಂಖ್ಯೆ: 2
ಮಕರ: ತಪ್ಪದೆ ತಂದೆಯವರ ಸಲಹೆ ಪಡೆದುಕೊಳ್ಳಿ. ಇಲ್ಲವಾದರೆ ಬಹು ದೊಡ್ಡ ನಷ್ಟವನ್ನು ಎದುರಿಸಬೇಕಾದೀತು. ಅದೃಷ್ಟಸಂಖ್ಯೆ: 7
ಕುಂಭ: ಅಹಂ ಪ್ರದರ್ಶನ ಮಾಡುತ್ತಿಲ್ಲ ಎನ್ನುತ್ತ ಅದೇ ಮಾಡುವಿರಿ. ಹೇಳುವುದು, ಮಾಡುವುದು ಎರಡೂ ಬೇರೆಯಾಗುತ್ತದೆ. ಅದೃಷ್ಟಸಂಖ್ಯೆ: 1
ಮೀನ: ನಿಮ್ಮ ಜವಾಬ್ದಾರಿಗಳನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೀರಿ. ಬೇಗನೆ ಸಿಟ್ಟು ಬರುತ್ತದೆ. ಆರ್ಥಿಕ ಸಮಸ್ಯೆ ಹೆಚ್ಚಲಿದೆ. ಅದೃಷ್ಟಸಂಖ್ಯೆ: 3