ಲಿಫ್ಟ್​ ಸಾಮರ್ಥ್ಯಕ್ಕೂ ಮಿತಿಯಿದೆ..ಅದು ಮೀರಿದರೆ ಹೀಗಾಗುತ್ತದೆ..: ಧಾರವಾಡದ ಹೋಟೆಲ್​​ನಲ್ಲಿ ಅವಘಡ, 9ಮಂದಿಗೆ ಗಂಭೀರ ಗಾಯ

Lift 9 March 20
Published on

ಧಾರವಾಡ: ನಿಗದಿತ ಭಾರಕ್ಕಿಂತ ಜಾಸ್ತಿಯಾದ ಕಾರಣ ಲಿಫ್ಟ್ ಕುಸಿದು ಬಿದ್ದು ಒಂಭತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಕೃಷಿ ವಿಶ್ವವಿದ್ಯಾಲಯದ ಎದುರಿನ ಹೋಟೆಲ್​ವೊಂದರಲ್ಲಿ ನಡೆದಿದೆ.

ಗಾಯಾಳುಗಳೆಲ್ಲ ಧಾರವಾಡ ಹೊರವಲಯದ ಬೇಲೂರಿನ ಕಂಪನಿಯೊಂದರ ಉದ್ಯೋಗಿಗಳಾಗಿದ್ದು ನಿನ್ನೆ ರಾತ್ರಿ ಈ ಹೋಟೆಲ್​ಗೆ ಆಗಮಿಸಿದ್ದರು. ಹೆಚ್ಚಿಗೆ ಜನ ತುಂಬಿದ್ದರಿಂದ ಲಿಫ್ಟ್ ಕುಸಿದಿದೆ.

ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನುಳಿದ ನಾಲ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net