ಈ ರಾಶಿಯವರಿಂದು ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿರೋಧಿಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ವ್ಯರ್ಥ ಧನಹಾನಿಯಾಗಿ ಮಾನಸಿಕ ಚಿಂತೆ. ಶುಭಸಂಖ್ಯೆ: 2

ವೃಷಭ: ಆಕಸ್ಮಿಕ ಧನಾಗಮನ. ಟ್ರಾವೆಲ್ಸ್ನವರಿಗೆ ಲಾಭ. ಮಾನಸಿಕ ನೆಮ್ಮದಿ ಇರಲಿದೆ. ಹಿರಿಯರಿಂದ ಹಿತನುಡಿ ಕೇಳುವುದು ಉತ್ತಮ. ಶುಭಸಂಖ್ಯೆ:4

ಮಿಥುನ: ವಾಹನ ಖರೀದಿ ಯೋಗವಿದೆ. ಭೋಗ ವಸ್ತುಗಳ ಪ್ರಾಪ್ತಿ. ಸ್ತ್ರೀಯರಿಗೆ ಶುಭ. ಶೀತ ಸಂಬಂಧಿತ ರೋಗ. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ: 6

ಕಟಕ: ಆತ್ಮೀಯರಲ್ಲಿ ಕಲಹ. ರಾಜಭಯ. ಮಾತಿನ ಚಕಮಕಿ. ಶರೀರದಲ್ಲಿ ಆಯಾಸ. ಉದರ ಬಾಧೆ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ: 9

ಸಿಂಹ: ದೃಷ್ಟಿ ದೋಷದಿಂದ ತೊಂದರೆ. ಸರ್ಪ ಭಯವಿದೆ. ದೂರ ಪ್ರಯಾಣ ಮಾಡುವಿರಿ. ಬಾಕಿ ವಸೂಲಿ. ಕೀಲುಗಳಲ್ಲಿ ನೋವು. ಶುಭಸಂಖ್ಯೆ: 8

ಕನ್ಯಾ: ಮನಸ್ಸಿನಲ್ಲಿ ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ನಷ್ಟ. ವಿಪರೀತ ದುಶ್ಚಟ ಬೇಡ. ಶುಭಸಂಖ್ಯೆ: 6

ತುಲಾ: ಇಷ್ಟ ವಸ್ತು ಖರೀದಿ. ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಅತ್ಯಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ:1

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಬರಲಿದೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾಗುವುದು. ಕುಲದೇವರ ದರ್ಶನ ಮಾಡುವಿರಿ. ಶುಭಸಂಖ್ಯೆ: 7

ಧನುಸ್ಸು: ಮಿತ್ರರ ಆಗಮನ. ತೀರ್ಥಕ್ಷೇತ್ರ ದರ್ಶನ. ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡುವಿರಿ. ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ:5

ಮಕರ: ಶುಭ ಸುದ್ದಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭ. ಆಲಸ್ಯ ಮನೋಭಾವ. ಕೋಪ ಜಾಸ್ತಿ. ಶುಭಸಂಖ್ಯೆ: 4

ಕುಂಭ: ಮಹಿಳೆಯರಿಗೆ ಲಾಭ. ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ತೊಂದರೆ. ಉದ್ಯೋಗದಲ್ಲಿ ಪ್ರಗತಿ. ಶ್ರಮಕ್ಕೆ ಪ್ರತಿ ಫಲವಿಲ್ಲ. ಶುಭಸಂಖ್ಯೆ:3

ಮೀನ: ಸಂಕಷ್ಟಗಳು ಹೆಚ್ಚುವವು. ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿ. ಅನ್ಯರಲ್ಲಿ ಮನಸ್ತಾಪ. ಅನಗತ್ಯ ಹಸ್ತಕ್ಷೇಪ ಮಾಡುವಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net