ಓ.. ಮತ್ತೆ ಸದ್ದು ಮಾಡುತ್ತಿರುವ 'ಕಾಂತಾರ'; ವರ್ಷದ ಬಳಿಕವೂ ನೆನಪಿಸಿಕೊಳ್ಳುತ್ತಿರುವ ಜನರು..

Kantara
Published on

ಬೆಂಗಳೂರು: ಸ್ಥಳೀಯ ಕಥೆಯೊಂದಿಗೆ ಜಗತ್ತಿನಾದ್ಯಂತ ಸದ್ದು ಮಾಡಿದ್ದ ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಮೂಲಕ ಜನಮನವನ್ನು ಗೆದ್ದ ಕಾಂತಾರ ಸಿನಿಮಾ ಇಂದು ಮತ್ತೆ ಸದ್ದು ಮಾಡಲಾರಂಭಿಸಿದೆ. ಚಿತ್ರ ಒಂದು ವರ್ಷ ಪೂರೈಸಿರುವುದೇ ಜನರು ಅದನ್ನು ಪುನಃ ನೆನಪು ಮಾಡಿಕೊಳ್ಳುತ್ತಿರುವುದು ಕಾರಣವಾಗಿದೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ನಾಯಕರಾಗಿ ಅವರದೇ ಅಭಿನಯ, ನಾಯಕಿಯಾಗಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ನಟಿಸಿರು ಕಾಂತಾರ ಚಿತ್ರ ಕಳೆದ ವರ್ಷ ಇದೇ ದಿನ ತೆರೆಗೆ ಬಂದಿತ್ತು. ಇದೀಗ ಅದೇ ಕಾರಣಕ್ಕೆ ಜನರು ಕಾಂತಾರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಈ ಒಂದು ವರ್ಷ ಪೂರ್ಣಗೊಂಡ ಸಂಭ್ರಮದ ಹಿನ್ನೆಲೆಯಲ್ಲಿ ತಮ್ಮ ಸಂತೋಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಕಾಂತಾರಕ್ಕೆ ಒಂದು ವರ್ಷದ ಸಂಭ್ರಮ. ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ನಾನು ನನ್ನ ತಂಡ ಸದಾ ಚಿರಋಣಿ ಎಂಬುದಾಗಿ ಹೇಳಿಕೊಂಡಿದ್ದಾರೆ.

ಡಿವೈನ್ ಬ್ಲಾಕ್​ ಬಸ್ಟರ್​ನ ಒಂದು ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದು ನಾವು ಯಾವಾಗಲೂ ಮೆಚ್ಚುವ ಬಹಳ ವಿಶೇಷವಾದ ಚಿತ್ರ. ಇದನ್ನು ಮಹಾಕಾವ್ಯದ ಬ್ಲಾಕ್​​ಬಸ್ಟರ್​ ಆಗಿ ಪರಿವರ್ತಿಸಿದ ಪ್ರೇಕ್ಷಕರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಈ ಒಂದು ವರ್ಷ ಮರೆಯಲಾಗದ ಅವಧಿ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತ ಹ್ಯಾಂಡಲ್​ನಲ್ಲೂ ಸಂತೋಷ ಹಂಚಿಕೊಳ್ಳಲಾಗಿದೆ. ಸಂಭ್ರಮಗಳು ದೇಶಾದ್ಯಂತ ಪ್ರತಿಧ್ವನಿಸುತ್ತಲೇ ಇವೆ ಮತ್ತು ಈ ಮಹಾಕಾವ್ಯದ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದೂ ಹೊಂಬಾಳೆ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net