ಈ ರಾಶಿಯವರಿಗಿಂದು ಅನಿರೀಕ್ಷಿತವಾಗಿ ಹಣ ಸಿಗುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಂದುಕೊಂಡ ಕೆಲಸ ಈಡೇರುವುದು. ಬಂಧುಗಳಿಂದ ಸಹಾಯ, ಪುಣ್ಯಕರ್ಮಕ್ಕೆ ಮನಸ್ಸು. ಚಿನ್ನದ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ:4

ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ರಾಜಕೀಯ ವ್ಯಕ್ತಿಗಳ ಭೇಟಿ ಆಗಲಿದೆ. ಆಸ್ತಿ ವಿಚಾರದಲ್ಲಿ ಜಾಗರೂಕತೆ ಇರಲಿ. ಶುಭಸಂಖ್ಯೆ:1

ಮಿಥುನ: ಹಣ ಹೂಡಿಕೆಗೆ ಇದು ಸುಸಮಯ. ಕುಟುಂಬದಲ್ಲಿ ಮನಸ್ತಾಪ, ಸಮಾಧಾನದ ನಡೆ ಇರಲಿ. ಕೃಷಿ ಉಪಕರಣಗಳಿಂದ ಲಾಭ. ಶುಭಸಂಖ್ಯೆ: 2

ಕಟಕ: ಸರ್ಕಾರಿ ನೌಕರರಿಗೆ ಅನುಕೂಲ. ನಕಾರಾತ್ಮಕ ಚಿಂತನೆ ಬೇಡ. ಅಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ. ಕೋರ್ಟ್ ಕಾರ್ಯ ಜಯ. ಶುಭಸಂಖ್ಯೆ: 3

ಸಿಂಹ: ಆಟೋಮೊಬೈಲ್ ವ್ಯಾಪಾರಿಗಳಿಗೆ ಲಾಭ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗುವುದು. ಹೋಟೆಲ್ ಉದ್ಯಮಿಗಳಿಗೆ ಅನುಕೂಲ. ಶುಭಸಂಖ್ಯೆ: 6

ಕನ್ಯಾ: ಧನ ನಷ್ಟ . ಅಧಿಕಾರ ಪ್ರಾಪ್ತಿಯಾಗಿ ಸಂತಸ. ದಾಂಪತ್ಯ ಸಮಸ್ಯೆ ವಿಪರೀತಕ್ಕೆ ಹೋಗಲು ಬಿಡಬೇಡಿ. ಕುಲದೇವರನ್ನು ಧ್ಯಾನಿಸಿ. ಶುಭಸಂಖ್ಯೆ:7

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ. ಮಗಳ ವಿವಾಹ. ಕೋರ್ಟ್ ವ್ಯವಹಾರದಲ್ಲಿ ಅಪಜಯ. ಪೀಠೋಪ ಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ವೃಶ್ಚಿಕ: ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಬಹುದು. ಸಗಟು ವ್ಯಾಪಾರಿಗಳಿಗೆ ಲಾಭವಿದೆ. ರಾಜಕೀಯ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6

ಧನುಸ್ಸು: ಅನಿರೀಕ್ಷಿತವಾಗಿ ಹಣ ಸಿಗುವುದು. ತಾಯಿಗೆ ಆರೋಗ್ಯ ಸಮಸ್ಯೆ. ಕಚೇರಿ ವಾತಾವರಣದಲ್ಲಿ ವ್ಯತ್ಯಾಸ. ಸಂಗಾತಿಗೆ ಅನಾರೋಗ್ಯ. ಶುಭಸಂಖ್ಯೆ: 9

ಮಕರ: ಶುಭಕಾರ್ಯಕ್ಕೆ ಹಿತ ಶತ್ರುಗಳ ಕಾಟ. ದುಡುಕು ಸ್ವಭಾವದಿಂದ ಸ್ನೇಹಿತರು ದೂರವಾದಾರು. ಉನ್ನತ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2

ಕುಂಭ: ಅವಿವಾಹಿತರಿಗೆ ವಿವಾಹ ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ದಾಂಪತ್ಯ ಸಮಸ್ಯೆ ಉಲ್ಬಣ. ನಿಮ್ಮ ಮಾತಿನಿಂದ ತೊಂದರೆ. ಶುಭಸಂಖ್ಯೆ:3

ಮೀನ: ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ಸಾಹಿತಿಗಳಿಗೆ ಧನ ಲಾಭ. ಕುಟುಂಬದಲ್ಲಿ ಮನಸ್ತಾಪ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net