ಈ ರಾಶಿಯವರಿಗೆ ಇಂದು ವ್ಯಕ್ತಿಯೊಬ್ಬರ ಪರಿಚಯ ಜೀವನಶೈಲಿಯನ್ನೇ ಬದಲಿಸಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹಲವಾರು ಅವಕಾಶ ಬರಲಿವೆ. ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಿ. ದೂರದ ಊರಿನಲ್ಲಿ ವೃತ್ತಿ ಜೀವನ ಆರಂಭಗೊಳ್ಳುವುದು. ಶುಭಸಂಖ್ಯೆ: 9

ವೃಷಭ: ಕೆಲಸಗಳೆಲ್ಲ ಪೂರ್ಣಗೊಳ್ಳುವವು. ಕಚೇರಿಯಲ್ಲಿ ಬಿಗುವಾಗಿ ನಡೆದುಕೊಳ್ಳುವುದು ಸೂಕ್ತ. ಆಪ್ತರೊಂದಿಗೆ ಮನಬಿಚ್ಚಿ ಮಾತನಾಡಿ. ಶುಭಸಂಖ್ಯೆ: 1

ಮಿಥುನ: ಸಾಂಸಾರಿಕ ಜೀವನದತ್ತ ಹೆಚ್ಚಿನ ಗಮನ ಇರಲಿ. ಮಹತ್ವದ್ದೆನಿಸಿದ ಕೆಲಸಗಳ ಬಗ್ಗೆ ದೀರ್ಘ ಸಮಾಲೋಚನೆ ನಡೆಯುವುದು. ಶುಭಸಂಖ್ಯೆ: 3

ಕಟಕ: ಕಚೇರಿಯಲ್ಲಿ ತಾಳ್ಮೆಯು ಮುಖ್ಯ. ಅನವಶ್ಯಕ ವಿವಾದಗಳಿಂದ ದೂರ ಇರಿ. ಆರೋಗ್ಯಕ್ಕಾಗಿ ಯೋಗಾಭ್ಯಾಸ ರೂಢಿಸಿಕೊಳ್ಳಿರಿ. ಶುಭ ಸಂಖ್ಯೆ:7

ಸಿಂಹ: ಘಟನೆಯೊಂದು ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಿದೆ. ಹೊಸ ರೀತಿಯ ಚಿಂತನೆಗಳು ಧನಲಾಭಕ್ಕೆ ಕಾರಣವಾಗುವುದು. ಶುಭಸಂಖ್ಯೆ: 8

ಕನ್ಯಾ: ಬರಬೇಕಾದ ಹಣಕ್ಕಾಗಿ ಹೋರಾಟ. ಹೊಸ ಗೆಳೆಯರ ಪರಿಚಯದಿಂದ ಮುಂದಿನ ಹೂಡಿಕೆಗಳಿಗೆ ಲಾಭ. ಕೃಷಿಕರಿಗೆ ತೊಡಕು. ಶುಭಸಂಖ್ಯೆ: 4

ತುಲಾ: ಸಮಾಜ ಸೇವೆಯಲ್ಲಿ ಕೀರ್ತಿ. ಕುಟುಂಬದಲ್ಲಿ ಜವಾಬ್ದಾರಿ ಕಡಿಮೆಯಾಗಲಿದೆ. ಉಪ ಆದಾಯ ದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ. ಶುಭಸಂಖ್ಯೆ: 4

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಗೆ ಯಶಸ್ಸು. ಒಳ್ಳೆಯತನ ದುರುಪಯೋಗವಾಗದಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ನೆಮ್ಮದಿ ವಾತಾವರಣ. ಶುಭಸಂಖ್ಯೆ: 1

ಧನುಸ್ಸು: ವ್ಯಕ್ತಿಯೊಬ್ಬರ ಪರಿಚಯ ಜೀವನ ಶೈಲಿಯನ್ನೇ ಬದಲಿಸಲಿದೆ. ಕನಸು ನನಸಾಗುವುದು. ಮೇಲಧಿಕಾರಿಗಳಲ್ಲಿ ಘರ್ಷಣೆ. ಶುಭಸಂಖ್ಯೆ: 6

ಮಕರ: ಸದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಹೋಗಿ. ಗೌರವ ಪ್ರತಿಷ್ಠೆ ಹೆಚ್ಚಲು ಇನ್ನೂ ಸಮಯ ಬೇಕಿದೆ. ಪರಿಶ್ರಮ ಹೆಚ್ಚಿಸಿಕೊಳ್ಳಿರಿ. ಶುಭಸಂಖ್ಯೆ: 6

ಕುಂಭ: ಖಾಸಗಿ ಉದ್ಯೋಗಿಗಳಿಗೆ ವಿಶೇಷ ಲಾಭ. ಸ್ನೇಹಿತನೊಂದಿಗೆ ವಿರಸ. ಮಾನಸಿಕವಾಗಿ ಖಿನ್ನತೆಯ ಭಾವ ಉಂಟಾಗಬಹುದು. ಶುಭಸಂಖ್ಯೆ: 3

ಮೀನ: ಸಂಬಂಧಗಳಿಗೆ ಬೆಲೆ ಕೊಡುವ ನಿಮಗೆ ಹತಾಶೆ. ವ್ಯಾಪಾರ ವ್ಯವಹಾರಗಳಿಗೆ ಹೊಸ ತಿರುವು. ಮನೆಯಲ್ಲಿ ಸಿಡುಕುತನ ಬೇಡ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net