ನಿತ್ಯ ಭವಿಷ್ಯ: ಖರ್ಚು ಕಡಿಮೆ ಮಾಡುತ್ತೀರಿ, ಹಣ ಬರುತ್ತದೆ, ನಿಮ್ಮ ಖಾತೆಯೂ ಚಿಗುರುತ್ತದೆ

Nitya-Bhavishya-vvani-1-2-1
Published on

ಮೇಷ: ಯಾರೋ ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತಾರೆಂದು ನಂಬಿ ಓಡಾಡುತ್ತೀರಿ. ಅರ್ಧ ಕೆಲಸ ಆಗಬಹುದು. ಅದೃಷ್ಟ ಸಂಖ್ಯೆ: 3

ವೃಷಭ: ಮುಖ್ಯವಾದ ಸರ್ಕಾರಿ ಕೆಲಸವೊಂದನ್ನು ಮಾಡದೆ ತಾತ್ಸಾರ ತೋರಿಸಿದ್ದರ ಪ್ರತಿಫಲ ಸದ್ಯವೇ ಗೊತ್ತಾಗುತ್ತದೆ. ಅದೃಷ್ಟ ಸಂಖ್ಯೆ: 9

ಮಿಥುನ: ಬಹಳ ಚಿಕ್ಕದು ಎಂದು ಒಂದು ಕೆಲಸವನ್ನು ಮಾಡಲು ಕೈ ಹಾಕುತ್ತೀರಿ. ನಂತರ ಅದರ ವ್ಯಾಪ್ತಿ ತಿಳಿಯುತ್ತದೆ. ಅದೃಷ್ಟ ಸಂಖ್ಯೆ: 4

ಕಟಕ:  ಆಪ್ತ ಮಿತ್ರನನ್ನೇ ಅಪಾರ್ಥ ಮಾಡಿಕೊಂಡಿದ್ದೆ ಎಂದು ಗೊತ್ತಾಗುತ್ತದೆ. ಆದರೆ ಸಮಯ ಮೀರಿದೆ ಅನಿಸುತ್ತಿದೆ. ಅದೃಷ್ಟ ಸಂಖ್ಯೆ: 1

ಸಿಂಹ: ಕೇಳಿ-ಹೇಳಿ ಮಾಡಲು ಇರುವ ಹಿರಿಯರು ಬುದ್ಧಿವಾದ ಹೇಳುತ್ತಾರೆ. ಕೇಳುವ ವ್ಯವಧಾನ ಇರಬೇಕು ಅಷ್ಟೇ. ಅದೃಷ್ಟ ಸಂಖ್ಯೆ: 2

ಕನ್ಯಾ: ಖರ್ಚು ಕಡಿಮೆ ಮಾಡುತ್ತೀರಿ, ಹಣ ಬರುತ್ತದೆ, ನಿಮ್ಮ ಖಾತೆ ಚಿಗುರುತ್ತದೆ. ಅದೇ ಸಮಾಧಾನ ತರಿಸುತ್ತದೆ. ಅದೃಷ್ಟ ಸಂಖ್ಯೆ: 5

ತುಲಾ: ಆಸ್ತಿ ಖರೀದಿಸಬೇಕೆಂಬ ಆಸೆಯಾಗುತ್ತದೆ. ಹೊಸ ಆಲೋಚನೆ, ಉತ್ಸಾಹ ತುಂಬಿರುವ ದಿನವಾಗಬಹುದು. ಅದೃಷ್ಟ ಸಂಖ್ಯೆ: 6

ವೃಶ್ಚಿಕ:  ಕೆಲಸದಲ್ಲಿ ಲೀನರಾಗಿದ್ದಾಗ ಬಂದವರು ತಮ್ಮ ಕೆಲಸ ಮಾಡಿಕೊಡಲು ಹೇಳಿ ನಿಮ್ಮ ದಿನ ವ್ಯರ್ಥವಾದೀತು. ಅದೃಷ್ಟ ಸಂಖ್ಯೆ: 9

ಧನುಸ್ಸು:  ಕೈ ಉಳುಕಬಹುದು ಅಥವಾ ಕೈ ನೋವು ಜಾಸ್ತಿ ಆಗಬಹುದು. ಲೇಖಕರಿಗೆ ಚಿಂತೆಯ ವಿಷಯವಿದು. ಅದೃಷ್ಟ ಸಂಖ್ಯೆ: 3

ಮಕರ: ಯಾರನ್ನು ಭೇಟಿಯಾಗಲು ಹೋಗುವಿರೊ ಅವರ ಭೇಟಿ ಅನುಮಾನ. ಖಾತರಿ ಮಾಡಿಕೊಂಡೇ ಹೊರಡಿ. ಅದೃಷ್ಟ ಸಂಖ್ಯೆ: 7

ಕುಂಭ: ಸಿಟ್ಟು ಮಾಡಿಕೊಂಡರೆ ಆಗುವ ಕೆಲಸ ಹಾಳುಮಾಡಿಕೊಳ್ಳುವ ಸಾಧ್ಯತೆ. ಆದಷ್ಟು ಸಮಾಧಾನವಾಗಿರಿ. ಅದೃಷ್ಟ ಸಂಖ್ಯೆ: 4

ಮೀನ:  ತುಸು ನಾಸ್ತಿಕವಾದಿಗಳಾಗುತ್ತೀರಿ. ಆದರೆ ದೇವರಲ್ಲಿ ಪ್ರಾರ್ಥಿಸದೆ ಯಾವ ಕೆಲಸವನ್ನೂ ಮಾಡಬೇಡಿ. ಅದೃಷ್ಟ ಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net