

ಮೇಷ: ಮಂಗಳ ಕಾರ್ಯದಲ್ಲಿ ಭಾಗಿ. ಮಕ್ಕಳಿಂದ ಶುಭವಾರ್ತೆ ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಲೇವಾದೇವಿ ವ್ಯವಹಾರಸ್ಥರಿಗೆ ಆದಾಯ ಉತ್ತಮವಾಗಿರಲಿದೆ. ಬಂಧುಗಳಿಂದ ಸಹಕಾರ. ದೈಹಿಕ ಬಳಲಿಕೆ ಕಾಡಬಹುದು. ಶುಭಸಂಖ್ಯೆ: 1
ಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ. ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದು ಅಗತ್ಯ. ಶುಭಸಂಖ್ಯೆ: 8
ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ಕಾಣಲಿದೆ. ನ್ಯಾಯಾಲಯದಲ್ಲಿ ಜಯ ನಿಮ್ಮ ಪಾಲಿಗೆ ಸಂತಸ ತರಲಿದೆ. ಕಣ್ಣಿನ ಸಮಸ್ಯೆ. ಶುಭಸಂಖ್ಯೆ: 2
ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭಸಂಖ್ಯೆ: 7
ಕನ್ಯಾ: ತೈಲ ಉತ್ಪನ್ನಕಾರರಿಗೆ ಲಾಭ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ. ಪ್ರಯಾಣದಲ್ಲಿ ಜಾಗರೂಕತೆ ಮುಖ್ಯ. ಶುಭಸಂಖ್ಯೆ: 7
ತುಲಾ: ಕಲಾವಿದರಿಗೆ ವಿಶೇಷ ಗೌರವ ಪ್ರಾಪ್ತಿ. ಹಣಕಾಸಿನ ಮುಗ್ಗಟ್ಟು ಕಾಣಿಸಲಿದೆ. ಪ್ರಯಾಣದಲ್ಲಿ ತೊಂದರೆ ಉಂಟಾಗಬಹುದು. ಶುಭಸಂಖ್ಯೆ: 6
ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಮೂಡುವುದು. ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ನೆಮ್ಮದಿ. ಶುಭಸಂಖ್ಯೆ: 4
ಧನುಸ್ಸು: ಸಂಯಮದ ಅವಶ್ಯಕತೆಯಿದೆ. ಸಾಕುಪ್ರಾಣಿಗಳಿಂದ ತೊಂದರೆಯಾದೀತು. ಔಷಧ ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 6
ಮಕರ: ವಿವಾಹ ವಿಚಾರದಲ್ಲಿ ಶುಭಸುದ್ದಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿ. ಆಹಾರ ಸೇವನೆಯ ವಿಷಯದಲ್ಲಿ ನಿಯಮ ಪಾಲಿಸಿ. ಶುಭಸಂಖ್ಯೆ: 5
ಕುಂಭ: ರಾಜಕಾರಣಿಗಳಿಗೆ ಉತ್ತಮ ಸಮಯ ಒದಗಿಬಂದಿದೆ. ಔಷಧ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ. ಕೃಷಿಕರಿಗೆ ಶುಭಫಲ. ಶುಭಸಂಖ್ಯೆ: 3
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ಸಮಾಚಾರ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ. ಸಮಯ ಸಾಧಕರಿಂದ ಅಂತರವಿರಲಿ. ಶುಭಸಂಖ್ಯೆ: 9