ಈ ರಾಶಿಯವರಿಗಿಂದು ಅನಿರೀಕ್ಷಿತ ದ್ರವ್ಯ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಈ ದಿನ ಒಳ್ಳೆಯ ಅನುಕೂಲವಾಗುವುದು. ವಾಹನ ಖರೀದಿ ಯೋಗ. ಸ್ತ್ರೀ ಸಮಾನ ವ್ಯಕ್ತಿಯಿಂದ ಅದೃಷ್ಟ, ಬಾಕಿ ಹಣ ವಸೂಲಿ. ಶುಭಸಂಖ್ಯೆ: 9

ವೃಷಭ: ಕಲಾವಿದರಿಗೆ ಉತ್ತಮ ದಿನ. ಮಾತಿನಲ್ಲಿ ಹಿಡಿತವಿರಲಿ. ಶತ್ರುಗಳಿಂದ ತೊಂದರೆಯಾದೀತು. ಅತಿಯಾದ ನೋವು. ಶುಭಸಂಖ್ಯೆ: 4

ಮಿಥುನ: ಮನಃಕ್ಲೇಷ. ಸರ್ಕಾರಿ ಅಧಿಕಾರಿಗಳಿಗೆ ಪದವಿ ಪ್ರಾಪ್ತಿ. ವಾಹನ ಚಾಲನೆಯಲ್ಲಿ ಎಚ್ಚರ. ಹೊರಡುವಾಗ ಮನೆದೇವರಿಗೆ ನಮಿಸಿ. ಶುಭಸಂಖ್ಯೆ: 1

ಕಟಕ: ಮಗಳ ಮದುವೆ ನಿಶ್ಚಯ. ಸಹೋದರರಿಂದ ಕಲಹ ಉಂಟಾದೀತು. ಹಣಕಾಸು ಸಮಸ್ಯೆ, ರಿಯಲ್ ಎಸ್ಟೇಟ್​ನವರಿಗೆ ಲಾಭ. ಶುಭಸಂಖ್ಯೆ: 5

ಸಿಂಹ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಪ್ರಗತಿಯಾಗುವುದು. ಆಕಸ್ಮಿಕ ಧನ ಲಾಭ. ಆರೋಗ್ಯದಲ್ಲಿ ಚೇತರಿಕೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 3

ಕನ್ಯಾ: ತಾಯಿಯ ಕಡೆಯಿಂದ ಲಾಭವಾಗಲಿದೆ. ಅಧಿಕಾರಿಗಳಿಗೆ ತೊಂದರೆಯಾಗುವ ಸಾಧ್ಯತೆ. ವಸ್ತ್ರ ಖರೀದಿಸಿವಿರಿ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 2

ತುಲಾ: ಮನಸ್ಸಿನಲ್ಲಿ ಆತಂಕ. ಪ್ರವಾಸದಲ್ಲಿ ಸಮಾಧಾನ. ಋಣ ಬಾಧೆ. ಶತ್ರುತ್ವ ಹೆಚ್ಚಾಗುವುದು. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಶುಭಸಂಖ್ಯೆ: 9

ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ನಂಬಿದ ಜನರಿಂದ ಅಶಾಂತಿ. ಸ್ನೇಹಿತರಲ್ಲಿ ವಿರೋಧ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 5

ಧನುಸ್ಸು: ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ. ಕೆಲಸ ಕಾರ್ಯಗಳಲ್ಲಿ ವಿಘ್ನ. ಅಗ್ನಿ ಭಯ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 7

ಮಕರ: ಅನಿರೀಕ್ಷಿತ ದ್ರವ್ಯ ಲಾಭ. ಮಿತ್ರರ ಭೇಟಿಯಾಗುವುದು. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 6

ಕುಂಭ: ಸರ್ಕಾರಿ ಉದ್ಯೋಗದಲ್ಲಿ ಯಶಸ್ಸು. ಆದಾಯಕ್ಕಿಂತ ಖರ್ಚು ಹೆಚ್ಚು. ಕುಟುಂಬದಲ್ಲಿ ಕಲಹ ಆಗಬಹುದು. ಅಧಿಕ ತಿರುಗಾಟ. ಶುಭಸಂಖ್ಯೆ: 4

ಮೀನ: ದಾಂಪತ್ಯದಲ್ಲಿ ಸಂತೋಷದ ದಿನ. ಕೆಟ್ಟ ಮಾತುಗಳಿಂದ ನಿಂದನೆ. ಮಹಿಳೆಯರಿಗೆ ವಸ್ತ್ರ ಲಾಭ. ಗೌರವಕ್ಕೆ ಧಕ್ಕೆಯಾದೀತು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net